ಅಪಘಾತದಲ್ಲಿ ದೇಹದಿಂದಲೇ ಬೇರೆಯಾಗಿದ್ದ ಬಾಲಕನ ತಲೆ
ಬಾಲಕನ ತಲೆ ಕತ್ತಿನ ಮೂಳೆಯಿಂದ ಸಂಪೂರ್ಣ ಬೇರ್ಪಟ್ಟಿತ್ತು
ಬಾಲಕ ಹುಷಾರಾಗುವವರೆಗೂ ವಿಷಯ ಮುಚ್ಚಿಟ್ಟಿದ್ದ ವೈದ್ಯರು
ಇದು ಇಡೀ ವೈದ್ಯಕೀಯ ಲೋಕವೇ ಹೆಮ್ಮೆಪಡುವ ವಿಚಾರ. ಈ ವೈದ್ಯರ ತಂಡ ಮಾಡಿರೋ ಸಾಹಸಕ್ಕೆ ಹಾಟ್ಸಾಫ್ ಹೇಳಲೇಬೇಕು. ಯಾಕಂದ್ರೆ ಅಪಘಾತದಲ್ಲಿ ದೇಹದಿಂದ ಬೇರೆಯಾಗಿದ್ದ ಬಾಲಕನ ತಲೆಯನ್ನು ಮರು ಜೋಡಣೆ ಮಾಡುವ ಮೂಲಕ ಇಸ್ರೇಲ್ ವೈದ್ಯರು ದಾಖಲೆ ಬರೆದಿದ್ದಾರೆ. ಇಂತಹ ಶಸ್ತ್ರ ಚಿಕಿತ್ಸೆಯನ್ನು ಬಿಲಾಟರಲ್ ಅಟ್ಲಾಂಟೊ ಆಕ್ಸಿಪಿಟಲ್ ಜಾಯಿಂಟ್ ಡಿಸ್‌ಲೊಕೇಷನ್ ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ಅಪರೂಪದ ಈ ಶಸ್ತ್ರ ಚಿಕಿತ್ಸೆ ಯಶಸ್ವಿಗೊಳಿಸರೋ ಈ ವೈದ್ಯರ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.
ಸುಲೈಮನ್ ಹಾಸನ್ ಎಂಬ ಈ 12 ವರ್ಷದ ಬಾಲಕ ಬೈಕ್‌ನಲ್ಲಿ ಹೋಗುವಾಗ ಅಪಘಾತವಾಗಿತ್ತು. ಬೈಕ್, ಕಾರಿಗೆ ಗುದ್ದಿದ್ದು ಅಪಘಾತದಲ್ಲಿ ಹಾಸನ್ ಕುತ್ತಿಗೆ ಮುರಿದುಕೊಂಡಿತ್ತು. ಕೂಡಲೇ ಸುಲೈಮನ್ ಹಾಸನ್ ಅನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಬಾಲಕನನ್ನು ಪರೀಕ್ಷೆ ನಡೆಸಿದ ವೈದ್ಯರು, ಬಾಲಕನ ತಲೆಯು ಕತ್ತಿನ ಮೂಳೆಯಿಂದ ಸಂಪೂರ್ಣ ಬೇರ್ಪಟ್ಟಿದೆ ಎಂದು ಹೇಳಿದ್ದರು.
ಇಷ್ಟಾದ್ರೂ ಸುಲೈಮನ್ ಹಾಸನ್‌ರನ್ನು ವೈದ್ಯರು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ರು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹಲವಾರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಲಾಯ್ತು. ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಇಸ್ರೇಲ್‍ನ ವೈದ್ಯರು ಈ ಆಪರೇಷನ್‌ಗೆ ಕೈ ಜೋಡಿಸಿದರು. ನುರಿತ ಮೂಳೆ ಶಸ್ತ್ರಚಿಕಿತ್ಸಕರು ಈ ಪ್ರಯೋಗ ನಡೆಸಿದ್ದಾರೆ. ಅಪಘಾತದಲ್ಲಿ ಬಾಲಕನ ತಲೆಯೇ ಬೇರ್ಪಟ್ಟಿದ್ದ ಪ್ರಕರಣದಲ್ಲಿ, ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ತಲೆ ಮರು ಜೋಡಣೆ ಮಾಡಿದ್ದಾರೆ.
ಇಸ್ರೇಲ್‌ನಲ್ಲಿ ಈ ಬಾಲಕನ ಶಸ್ತ್ರಚಿಕಿತ್ಸೆಯು ಕಳೆದ ತಿಂಗಳೇ ನಡೆದಿದೆ. ಬಾಲಕ ಪೂರ್ತಿ ಹುಷಾರಾಗುವವರೆಗೂ ಈ ವಿಷಯವನ್ನು ವೈದ್ಯರು ಬಹಿರಂಗಪಡಿಸಿರಲಿಲ್ಲ. ಸದ್ಯ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಎಲ್ಲರಂತೆ ಆತ ಓಡಾಡುತ್ತಿದ್ದಾನೆ. ವೈದ್ಯರ ಈ ಪ್ರಯೋಗಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಚೇತರಿಕೆಯಾಗಿರೋ ಬಾಲಕನ ಪೋಷಕರಿಗೆ ವೈದ್ಯರಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ