newsfirstkannada.com

88 ವರ್ಷಗಳ ಬಳಿಕ ದೆಹಲಿಯಲ್ಲಿ ದಾಖಲೆ ಮಳೆ; ವಿಮಾನ ನಿಲ್ದಾಣದಲ್ಲಿ ಮೊದಲ ಸಾವು

Share :

Published June 30, 2024 at 6:19am

Update June 30, 2024 at 6:20am

  ಮಳೆಯಿಂದಾಗಿ ಏಮ್ಸ್‌ ಆಸ್ಪತ್ರೆಯಲ್ಲಿ ಅವಾಂತರವೇ ಸೃಷ್ಟಿ

  ಆಸ್ಪತ್ರೆಗೆ ನುಗ್ಗಿದ ಮಳೆ ನೀರಿನಿಂದಾಗಿ ರೋಗಿಗಳು ಪರದಾಟ

  ಭಾರೀ ಮಳೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಸಾವು

ಬಿಸಿಗಾಳಿ, ಬಿರು ಬೇಸಿಗೆಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ವಾರದ ಹಿಂದೆಷ್ಟೇ ದೆಹಲಿಯ ಜನತೆ ಹನಿ ನೀರಿಗೂ ಪರದಾಡ್ತಿದ್ರು. ದೆಹಲಿಯ ಜಲ ಸಚಿವೆ ಉಪವಾಸ ಸತ್ಯಾಗ್ರಹ ಮಾಡಿದ್ರು. ಆದ್ರೀಗ ರಾಷ್ಟ್ರರಾಜಧಾನಿಯೇ ನೀರಲ್ಲಿ ಮುಳುಗುಷ್ಟು ದಾಖಲೆಯ ವರ್ಷಧಾರೆಯಾಗಿದ್ದು. ದೆಹಲಿ ರಸ್ತೆಗಳು, ತಗ್ಗು ಪ್ರದೇಶದ ಮನೆಗಳು ಸಂಪೂರ್ಣ ಜಲಮಯವಾಗಿವೆ.

ಇದನ್ನೂ ಓದಿ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಅಸಲಿಗೆ ಆಗಿದ್ದೇನು?

ಒಂದೇ ಒಂದು ಮಳೆಗೆ ನವದೆಹಲಿಯ ಹಲವು ಭಾಗಗಳು ಜಲಾವೃತವಾಗಿವೆ. ಮಳೆ ನೀರಿನಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವ ಕಾರುಗಳು ಮುಳುಗಿ ಹೋಗಿವೆ. ದೆಹಲಿಯ ರೋಹಿಣಿ ಸೆಕ್ಟರ್ 18 ಮೆಟ್ರೋ ನಿಲ್ದಾಣದ ಬಳಿ ಪಾರ್ಕ್​ ಮಾಡಿದ್ದ ಕಾರಿನ ಕೆಳಗೆ ಮಣ್ಣು ಕುಸಿದಿದ್ದು, ಹಳ್ಳ ನಿರ್ಮಾಣವಾಗಿದೆ. ಕಾರು ಕೂಡ ಆ ಹಳ್ಳದಲ್ಲಿ ಅರ್ಧ ಮುಳುಗಿದೆ. ಚರಂಡಿ ನೀರು ಮಳೆ ನೀರಿನೊಂದಿಗೆ ಸೇರಿ ರಸ್ತೆಯಲ್ಲಿ ಮೊಣಕಾಲುದ್ದ ನಿಂತು, ವಾಹನ ಸವಾರರು ಪರದಾಡುವಂತಾಗಿತ್ತು.

ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನಜೀವನವೇ ಅಸ್ತವ್ಯಸ್ತವಾಗಿದೆ. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲೂ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ಆಸ್ಪತ್ರೆ ಮೇಲ್ಛಾವಣಿಯಿಂದ ನೀರು ನುಗ್ಗಿದ್ದು ರೋಗಿಗಳು ಪರದಾಡಿದ್ದಾರೆ. ಲಿಫ್ಟ್​ನಲ್ಲೂ ಮಳೆಯ ನೀರು ಸೋರಿಕೆ ಆಗಿದೆ. ಮಳೆ ಅವಾಂತರದಿಂದಾಗಿ ಏಮ್ಸ್​ ಮತ್ತು ಲೋಕ ನಾಯಕ ಆಸ್ಪತ್ರೆಯಲ್ಲಿ ಅನೇಕ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ದೆಹಲಿಯಲ್ಲಿ ಮಳೆ ಸಂಬಂಧಿತ ಅವಘಡದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಸಾವು ವರದಿಯಾಗಿದೆ. 45 ವರ್ಷದ ಕ್ಯಾಬ್ ಡ್ರೈವರ್ ಕಾರಿನ ಮೇಲೆ ಮೇಲ್ಚಾವಣಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮಳೆಯಿಂದಾಗಿ ವಸಂತ ವಿಹಾರ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ನೀರಿನ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದೆಹಲಿ ಏರ್​ಪೋರ್ಟ್​ನ ಟರ್ಮಿನಲ್​ ಒಂದರಲ್ಲಿ ಮೇಲ್ಛಾವಣಿ ಕುಸಿತವಾಗಿದ್ದು, ಇದರ ಇನ್ಫಾಸ್ಟ್ರಕ್ಚರ್​ ಬಗ್ಗೆ ತನಿಖೆಗೆ ಎಎಪಿ ಆಗ್ರಹಿಸಿದೆ.

ದೆಹಲಿ ಬೆನ್ನಲ್ಲೇ ರಾಜ್‌ಕೋಟ್ ಏರ್‌ಪೋರ್ಟ್‌ನಲ್ಲಿ ಮೇಲ್ಛಾವಣಿ ಕುಸಿತ

ದಿಲ್ಲಿ ಏರ್‌ಪೋರ್ಟ್ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಪ್ರಧಾನಿ ಮೋದಿಯ ತವರು ರಾಜ್ಯದಲ್ಲಿ ನಡೆದಿದೆ. ಗುಜರಾತ್‌ ರಾಜ್ಯದಾದ್ಯಂತ ಭಾರೀ ಮಳೆ ಆಗುತ್ತಿದ್ದು, ರಾಜಕೋಟ್​ ಏರ್‌ಪೋರ್ಟ್‌ನ ಟರ್ಮಿನಲ್‌ನಲ್ಲಿ ಅಳವಡಿಕೆ ಮಾಡಲಾಗಿದ್ದ ಮೇಲ್ಛಾವಣಿ ಕುಸಿತವಾಗಿದೆ. ದಿಲ್ಲಿ ಏರ್‌ಪೋರ್ಟ್‌ ದುರಂತ ಘಟನೆ ಇನ್ನೂ ಹಸಿರಾಗಿರುವಾಗಲೇ ರಾಜಕೋಟ್‌ನಲ್ಲಿ ನಡೆದಿರುವ ದುರಂತ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೇವಲ ದೆಹಲಿ ಮಾತ್ರವಲ್ಲ, ಉತ್ತರ ಭಾರತ ಹಲವು ರಾಜ್ಯಗಳಲ್ಲಿ ಮಳೆರಾಯ ಪರಾಕ್ರಮ ಮೆರೆಯುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಆಯಾ ಸರ್ಕಾರಗಳು ಮಳೆ ಅವಘಡ ಎದುರಿಸಲು ಸರ್ವಸನ್ನದ್ಧ​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

88 ವರ್ಷಗಳ ಬಳಿಕ ದೆಹಲಿಯಲ್ಲಿ ದಾಖಲೆ ಮಳೆ; ವಿಮಾನ ನಿಲ್ದಾಣದಲ್ಲಿ ಮೊದಲ ಸಾವು

https://newsfirstlive.com/wp-content/uploads/2024/06/rain3.jpg

Load More