newsfirstkannada.com

ಇದು ನೀರಲ್ಲ, ರೆಡ್‌ ವೈನ್‌ ಕಣ್ರಿ.. 22 ಲಕ್ಷ ಲೀಟರ್ ರಸ್ತೆಯಲ್ಲಿ ಪ್ರವಾಹದಂತೆ ಹರಿಸಿದ್ದು ಯಾಕೆ ಗೊತ್ತಾ? ವಿಡಿಯೋ ನೋಡಿ

Share :

12-09-2023

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವೈನ್​ ವಿಡಿಯೋ

    ಕೊನೆಗೆ ರಸ್ತೆಗಳನ್ನೆಲ್ಲ ಸ್ವಚ್ಛಗೊಳಿಸಿ ಕೊಡುವುದಾಗಿ ಹೇಳಿದ ಕಂಪನಿ

    ಅಯ್ಯೋ.. ಪ್ರವಾಹದಂತೆ ಹರಿದ ರೆಡ್​ ವೈನ್, ಕೆಂಪಾದ ಹಳ್ಳಿ ರಸ್ತೆಗಳು

ಮದ್ಯಪಾನದಲ್ಲಿ ವೈನ್ ಆರೋಗ್ಯಕ್ಕೆ ಒಳ್ಳೆಯದಾದ ಒಂದು ವಿಧವಾಗಿದ್ದು ಕೆಲವರಂತೂ ಇದನ್ನು ಸೇವಿಸಲು ರೆಡಿಯಾಗಿಯೇ ಇರುತ್ತಾರೆ. ಬಾರ್​ಗಳಲ್ಲೂ ಕೂಡ ಈ ರೆಡ್​ ವೈನ್​ಗೆ ಭಾರೀ ಬೇಡಿಕೆ ಇರುತ್ತದೆ. ಕೆಲವು ವೈದ್ಯರು ಆರೋಗ್ಯಕ್ಕೆ ತಕ್ಕಮಷ್ಟು ಮದ್ಯಪಾನದಲ್ಲಿ ವೈನ್ ಉತ್ತಮ ಎಂದು ಹೇಳುತ್ತಿರುತ್ತಾರೆ. ಇಂತಹ ರೆಡ್​ ವೈನ್​ ರಸ್ತೆಯಲ್ಲಿ ನದಿ ಪ್ರವಾಹದಂತೆ ಹರಿದರೇ ಹೇಗಿರುತ್ತೆ ಹೇಳಿ. ಕಣ್ಣು ಹಾಯಿಸಿದಷ್ಟು ಕೆಂಪು ಬಣ್ಣ ಕಾಣುತ್ತದೆ. ಇಂತಹದ್ದೆ ಒಂದು ಘಟನೆ ನಿಜವಾಗ್ಲೂ ನಡೆದಿದೆ.

ಲೆವಿರಾ ಡಿಸ್ಟಿಲರಿ ಒಡೆತನದ 2 ಟ್ಯಾಂಕ್‌ಗಳು ರಸ್ತೆಯಲ್ಲಿ ಅಪಘಾತಕ್ಕೆ ಒಳಗಾಗಿದ್ದರಿಂದ ಸುಮಾರು 20 ಲಕ್ಷ ಲೀಟರ್​ ವೈನ್​ ಪ್ರವಾಹದಂತೆ ಹರಿದಿದೆ. ಇದರಿಂದ ಪೋರ್ಚುಗೀಸ್​ನ ಸಾವೊ ಲೌರೆಂಕೊ ಡೊ ಬೈರೊ ಎನ್ನುವ ಹಳ್ಳಿಯ ಬೀದಿಗಳೆಲ್ಲ ರೆಡ್​ ವೈನ್​ ಒಳ್ಳೆ ನದಿ ನೀರಿನಂತೆ ಹರಿದು ಬಿಟ್ಟಿದೆ. ಎಷ್ಟು ನೋಡಿದರಷ್ಟು ಕೆಂಪು ಬಣ್ಣದಿಂದ ಗೋಚರವಾಗುತ್ತಿತ್ತು. ಈ ಹಳ್ಳಿಯಲ್ಲಿ ಸುಮಾರು 2 ಸಾವಿರದಷ್ಟು ಜನ ವಾಸಿಸುತ್ತಿದ್ದಾರೆ ಎನ್ನಲಾಗಿದೆ.

ಸದ್ಯ ರಸ್ತೆಗಳೆಲ್ಲ ಹರಿದ ರೆಡ್​ ವೈನ್​ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಲೆವಿರಾ ಡಿಸ್ಟಿಲರಿ ಕಂಪನಿಯು ವೈನ್​ ಪ್ರವಾಹದಂತೆ ಹರಿದು ಹೋಗಿದ್ದಕ್ಕೆ ಕ್ಷಮೆಯಾಚಿಸಿದ್ದು ತಕ್ಷಣ ರಸ್ತೆಗಳನ್ನೆಲ್ಲ ಸ್ವಚ್ಛಗೊಳಿಸಿ ಕೊಡುವುದಾಗಿ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ನೀರಲ್ಲ, ರೆಡ್‌ ವೈನ್‌ ಕಣ್ರಿ.. 22 ಲಕ್ಷ ಲೀಟರ್ ರಸ್ತೆಯಲ್ಲಿ ಪ್ರವಾಹದಂತೆ ಹರಿಸಿದ್ದು ಯಾಕೆ ಗೊತ್ತಾ? ವಿಡಿಯೋ ನೋಡಿ

https://newsfirstlive.com/wp-content/uploads/2023/09/RED_WINE.jpg

Load More