‘ಗೃಹಲಕ್ಷ್ಮಿ’ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ₹2 ಸಾವಿರ
ಏನೇನು ದಾಖಲೆ.. ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು: ರಾಜ್ಯ ಸರ್ಕಾರದ ಬಹುನಿರೀಕ್ಷಿತ ಗೃಹಲಕ್ಷ್ಮೀ ಯೋಜನೆ ಜಾರಿಗೆ ಕಡೆಗೂ ಗಳಿಗೆ ಕೂಡಿ ಬಂದಿದೆ. ಇಂದಿನಿಂದಲೇ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಕಳೆದೊಂದು ತಿಂಗಳಿಂದಲೂ ಗೃಹಲಕ್ಷ್ಮೀ ಜಾರಿ ಬಗ್ಗೆ ಸಾಕಷ್ಟು ವಾದ-ವಿವಾದಗಳು ಕೇಳಿ ಬಂದಿದ್ದವು. ಈಗ ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಕ್ಕೆ ದಿನಾಂಕ ಅಂತಿಮಗೊಳಿಸಿದೆ.
ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ರಾಜ್ಯದ ಜನರಿಗೆ ನೀಡಿರೋ ಒಂದೊಂದೇ ಭಾಗ್ಯಗಳನ್ನ ಈಡೇರಿಸುತ್ತಾ ಬರುತ್ತಿದೆ. ಮಹಿಳೆಯರಿಗೆ ಶಕ್ತಿ ಯೋಜನೆ ಆಯ್ತು. ಅನ್ನಭಾಗ್ಯ ಕೂಡ ಆಯ್ತು. ಈಗ ರಾಜ್ಯದ ಮನೆಯೊಡತಿಗೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಕೆಲವೇ ಗಂಟೆಗಳು ಬಾಕಿ ಇದೆ.
ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ಜಾರಿಗೆ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಇಂದು ಸಂಜೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಗ್ರೀನ್ ಸಿಗ್ನಲ್ ಸಿಗಲಿದೆ. ಯೋಜನೆ ಜಾರಿಯಾದ ಮರುದಿನವೇ ನೋಂದಣಿಗೆ ಅವಕಾಶವಿದ್ದು, ಬಳಿಕ ಮನೆಯ ಗೃಹಲಕ್ಷ್ಮೀಯ ಅಕೌಂಟ್‌ಗೆ 2 ಸಾವಿರ ದುಡ್ಡು ಬರಲಿದೆ.
ನೋಂದಣಿ ಮಾಡಿಸಲು ಬೇಕಾದ ದಾಖಲೆಗಳೇನು?
ಗೃಹಲಕ್ಷ್ಮೀ ಯೋಜನೆಗೆ ಪಡಿತರ ಚೀಟಿ ಸಂಖ್ಯೆ ಬೇಕಾಗುತ್ತೆ. ಗಂಡ-ಹೆಂಡತಿ ಇಬ್ಬರ ಆಧಾರ್ ಕಾರ್ಡ್ ಜೆರಾಕ್ಸ್, ಬ್ಯಾಂಕ್ ಖಾತೆಯ ಪಾಸ್ಬುಕ್ ಜೆರಾಕ್ಸ್ ಹಾಗೂ ಆಧಾರ್ ಕಾರ್ಡ್ ಲಿಂಗ್ ಆಗಿರುವ ಮೊಬೈಲ್ ನಂಬರ್ ಕೊಡಬೇಕಾಗುತ್ತೆ.
ನೋಂದಣಿ ಸಲ್ಲಿಕೆ ಹೇಗೆ?
ಪಡಿತರ ಚೀಟಿಯಲ್ಲಿ ಮನೆಯೊಡತಿ ಲಿಂಕ್ ಮಾಡಿಸಿರುವ ಮೊಬೈಲ್ ನಂಬರ್‌ಗೆ ದಿನಾಂಕ, ಸಮಯ ಮತ್ತು ಸ್ಥಳದ ಸಂದೇಶ ಬರಲಿದೆ. ನಿಗದಿತ ದಿನ ಸ್ಥಳೀಯ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು. ನೋಂದಣಿಗೆ ಸಂದೇಶ ಬಾರದೇ ಇದ್ರೆ 1902 ಅಥವಾ 8147500500 ನಂಬರ್‌ಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ನಿಗದಿತ ಸಮಯಕ್ಕೆ ಹೋಗಲು ಆಗದಿದ್ದರೆ ಅದೇ ಸೇವಾ ಕೇಂದ್ರಕ್ಕೆ ಸಂಜೆ 5 ರಿಂದ 7ಕ್ಕೆ ತೆರಳಿ ನೋಂದಣಿ ಮಾಡಿಸಬಹುದು. ಇಲ್ಲದಿದ್ರೆ ಸರ್ಕಾರವೇ ನೇಮಿಸಿರುವ ಪ್ರಕಾರ ಪ್ರಜಾ ಪ್ರತಿನಿಧಿಗಳು ನಿಮ್ಮ ಮನೆಯ ಬಳಿಯೇ ಬಂದು ನೋಂದಣಿ ಮಾಡಲಿದ್ದಾರೆ.
ಇನ್ನು, ಪಡಿತರ ಚೀಟಿಗೆ ಆಧಾರ್ ಲಿಂಕ್ ಆಗದೇ ಇದ್ರೆ, ಮನೆಯೊಡತಿ ಕೊಟ್ಟಂತಹ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತೆ.
ಇನ್ನು, ಟಿಕೆಟ್ ವಿತರಣೆಯಲ್ಲಿ ಆಗ್ತಿರೋ ಕಿರಿಕಿರಿ ತಪ್ಪಿಸೋದಕ್ಕೆ ಮೆಟ್ರೋ ಮಾದರಿ ಅನುಸರಿಸಲು ಬಿಎಂಟಿಸಿ ಮುಂದಾಗಿದೆ. ಉಚಿತ ಪ್ರಯಾಣಕ್ಕೆ ಟಿಕೆಟ್ ರಹಿತ ಸಂಚಾರದ ಪ್ಲಾನ್ ಇರೋದ್ರಿಂದ, ಟ್ಯಾಪ್ ಮತ್ತು ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಣೆಗೆ ಬಿಎಂಟಿಸಿ ಚಿಂತನೆ ನಡೆಸಿದೆ. ಆಗಸ್ಟ್‌ನಲ್ಲಿ ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದೆಯಂತೆ. ಒಂದು ಕಡೆ ಈ ಯೋಜನೆ ಒಳ್ಳೆಯದು ಆದ್ರೆ. ಮತ್ತೊಂದು ಕಡೆ ಅದು ಸರ್ಕಾರಕ್ಕೆ ಹೊರೆಯಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ.
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನ ಒಂದೊಂದಾಗಿ ಈಡೇರಿಸಲು ಮುಂದಾಗ್ತಿದೆ. ನಿಜವಾಗಿಯೂ ಈ ಯೋಜನೆಗೆ ಮನೆಯೊಡತಿಗೆ ಸದುಪಯೋಗವಾಗುತ್ತಾ ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ