newsfirstkannada.com

ಶಾಕಿಂಗ್​​ ಲುಕ್​​ನಲ್ಲಿ ಹುಚ್ಚ ನಟಿ ರೇಖಾ; ಇವರ ಆರೋಗ್ಯಕ್ಕೆ ಏನಾಯ್ತು?

Share :

Published September 15, 2023 at 6:26pm

    'ಜಿಂಕೆಮರಿ' ನಟಿ ರೇಖಾಗೆ ಏನಾಯ್ತು? ಯಾಕೆ ಹೀಗಾದ್ರು?

    ಅನಾರೋಗ್ಯಕ್ಕೆ ತುತ್ತಾದ್ರಾ 'ಹುಚ್ಚ' ಸಿನಿಮಾ ನಟಿ ರೇಖಾ?

    ಬದಲಾಯ್ತು ರೇಖಾ ರೂಪ.. ಏನಿದರ ಹಿಂದಿನ ರಹಸ್ಯ?

ಕಣ್ಣಲ್ಲೇ ಕೊಲ್ಲುವಂತ ನೋಟ.. ಮನಮೋಹಕ ಮೈಮಾಟ.. ಮುಗ್ದ ನಟನೆಗೂ ಸೈ.. ರಗಡ್​ ಪಾತ್ರಕ್ಕೂ ಜೈ. ಕಡಿಮೆ ಸಮಯ ಹೆಚ್ಚು ಸಿನಿಮಾ.. ಒಂದ್ ಟೈಮ್ಮಲ್ಲಿ ಈ ನಟಿ ಅಂದ್ರೇ ಹುಡುಗರಿಗೆ ಹುಚ್ಚು .. ಆದ್ರೀಗ ಈ ನಟಿಯ ಸ್ಥಿತಿ ನಿಜಕ್ಕೂ ಆತಂಕ ಮತ್ತು ಆಘಾತಕಾರಿಯಾಗಿದೆ..

ನಟಿ ರೇಖಾ ಅಂದ್ರೆ ಸಡನ್​ ಆಗಿ ಬಹಳಷ್ಟು ಜನಕ್ಕೆ ಗೊತ್ತಾಗಲ್ಲ. ಆದರೆ ಜಿಂಕೆ ಮರಿ ರೇಖಾ ಅಂದಾಕ್ಷಣ ಸಿನಿಪ್ರೇಮಿಗಳ ಕಣ್ಣರಳುತ್ತೆ. ಯಾಕಂದ್ರೆ ರೇಖಾ ತಮ್ಮ ನಟನೆ ಹಾಗೂ ಮೋಹಕ ಸೌಂದರ್ಯದಿಂದ ಹುಡುಗರಿಗೆ ಹುಚ್ಚು ಹಿಡಿಸಿದ್ರು.. ಕಿಚ್ಚ ಸುದೀಪ್ ನಟನೆಯ ‘ಹುಚ್ಚ’ ಸಿನಿಮಾದ ಆ ಹೋಮ್ಲಿ ಗರ್ಲ್​, ಮುಗ್ದ ಹುಡುಗಿ ಅಭಿಷ್ಠಾ ಪಾತ್ರ ಈಗ್ಲೂ ಫೇವರೇಟ್​.

ಹುಡುಗಾಟ, ಚೆಲ್ಲಾಟ, ತುಂಟಾಟ, ಪರಿಚಯ, ಬಾಸ್ ಸೇರಿ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲೂ ಮೋಡಿ ಮಾಡಿದ್ರು. ಆಮೇಲೆ ಅದೇನ್ ಆಯ್ತೋ 2014ರ ನಂತರ ಇದ್ದಕ್ಕಿದ್ದಂತೆ ರೇಖಾ ಬೆಳ್ಳಿತೆರೆಯಿಂದ ದೂರವಾದ್ರು. ಸುಮಾರು ವರ್ಷಗಳು ಕಾಣಿಸಲೇ ಇಲ್ಲ. ಇದೀಗ ತುಂಬಾ ದಿನಗಳ ನಂತರ ಮತ್ತೆ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಸುಳಿವು ಕೊಡ್ತಿದ್ದ ರೇಖಾ ಕುರಿತು ಆಘಾತಕಾರಿ ವಿಷಯ ಹೊರಬಿದ್ದಿದ್ದು, ಅಭಿಮಾನಿಗಳು ಗಾಬರಿಯಿಂದ ನೋಡುವಂತಾಗಿದೆ..

ಸಂಪರ್ಣ ಬದಲಾದ ರೇಖಾ ರೂಪ

ಒಂದ್ ಕಾಲದ ಟಾಪ್ ಮಾಡೆಲ್, ಸ್ಟಾರ್ ಹೀರೋಯಿನ್ ಆಗಿದ್ದ​ ರೇಖಾ ರೂಪ ಸಂಪೂರ್ಣವಾಗಿ ಬದಲಾಗಿದೆ. ಮುಖದಲ್ಲಿ ಮೊದಲಿನಂತೆ ಕಾಂತಿ ಇಲ್ಲ, ಸೌಂದರ್ಯ ಮಾಸಿದೆ, ದೈಹಿಕವಾಗಿ ಬಹಳಷ್ಟು ದುರ್ಬಲವಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿಯ ರೂಪ ಕಂಡು ತೀರ್ಪುಗಾರರು, ಪ್ರೇಕ್ಷಕರು ಬೆರಗಾಗಿದ್ದಾರೆ. ರೇಖಾ ಅವರ ಆರೋಗ್ಯಕ್ಕೆ ಏನಾಗಿದೆ? ಯಾಕಿಷ್ಟು ವೀಕ್ ಆಗಿದ್ದಾರೆ? ಏನಾಯ್ತು ಅಂತ ಗಾಬರಿಯಿಂದ ನೋಡ್ತಿದ್ದಾರೆ..

ಅಂದ್ಹಾಗೆ, ನಟಿ ರೇಖಾ ಅವರ ಈ ಬದಲಾವಣೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ರೇಖಾ ಅವ್ರು ಸಹ ಈ ಬಗ್ಗೆ ನಿಖರವಾದ ಕಾರಣ ಹೇಳಿಲ್ಲ. ಆದರೆ ರೇಖಾ ಅವರ ಪರಿಸ್ಥಿತಿ ನೋಡ್ತಿದ್ರೆ ಏನೋ ಸಮಸ್ಯೆ ಉಂಟಾಗಿದೆ ಅನ್ನೋದು ಮಾತ್ರ ಖಚಿತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಕಿಂಗ್​​ ಲುಕ್​​ನಲ್ಲಿ ಹುಚ್ಚ ನಟಿ ರೇಖಾ; ಇವರ ಆರೋಗ್ಯಕ್ಕೆ ಏನಾಯ್ತು?

https://newsfirstlive.com/wp-content/uploads/2023/09/Rekha.jpg

Load More