newsfirstkannada.com

ಆ ಒಂದು ಕೊರಗಿನಿಂದಲೇ ಸೂಸೈಡ್​ ಮಾಡಿಕೊಂಡ್ರಾ ಬಿ.ಸಿ ಪಾಟೀಲ್​​ ಅಳಿಯ? ಅಸಲಿ ಕಾರಣ ಬಹಿರಂಗ!

Share :

Published July 8, 2024 at 9:07pm

  ಹೊನ್ನಾಳಿಯ ಕಾಡಂಚಿನ ರಸ್ತೆಯಲ್ಲಿ ವಿಷ ಸೇವನೆ

  ವಿಷ ಸೇವಿಸಿದ್ದಾಗಿ ಕುಟುಂಬಸ್ಥರಿಗೆ ಪ್ರತಾಪ್​​​ ಕರೆ

  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು, ಸಾವು!

ದಾವಣಗೆರೆ: ಮಾಜಿ ಸಚಿವ ಬಿ.ಸಿ ಪಾಟೀಲ​ರಿಗೆ ಇವತ್ತು ಕರಾಳ ಸೋಮವಾರ. ಪಾಟೀಲರ ಅಳಿಯ ಪ್ರತಾಪ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊನ್ನಾಳಿಯ ಕಾಡಂಚಿನ ರಸ್ತೆಯಲ್ಲಿ ವಿಷ ಸೇವಿಸಿ ನರಳಾಡ್ತಿದ್ದ ಪ್ರತಾಪ್​ ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ಪ್ರತಾಪ್​​ ಸಾವನ್ನಪ್ಪಿದ್ದಾರೆ.

ಸುತ್ತಲೂ ಫಾರೆಸ್ಟ್​​.. ರಸ್ತೆ ಬದಿಯಲ್ಲಿ ಒಂಟಿಯಾಗಿ ನಿಂತಿದ್ದ ಕಾರು.. ಕಾರಿನಲ್ಲಿ ವಿಷದ ಬಾಟಲು.. ಯಾವುದೇ ಅನುಮಾನಕ್ಕೆ ಆಸ್ಪದವಿಲ್ಲದೇ ನಿಂತಿದ್ದ ಕಾರಿನಲ್ಲಿ ಹೆಣವಾಗಿದ್ದು ಮಾಜಿ ಸಚಿವ ಬಿ.ಸಿ.ಪಾಟೀಲರ ಅಳಿಯ. ಹೆಸರು ಪ್ರತಾಪ್​ ಕುಮಾರ್​​.. ವಯಸ್ಸು ಕೇವಲ 41 ಅಷ್ಟೇ.. ಪ್ರತಾಪ್​ ಕುಮಾರ್​ ಸಾವಿಗೆ ಕಾರಣ ಮಾತ್ರ ನಿಗೂಢ.

ಮಾಜಿ ಸಚಿವ ಬಿ.ಸಿ ಪಾಟೀಲ್​ ಅಳಿಯ ಪ್ರತಾಪ್ ಸಾವು!

ಮಾಜಿ ಸಚಿವ ಬಿ.ಸಿ ಪಾಟೀಲ್​ರ ದೊಡ್ಡ ಮಗಳ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. KA 68 M 1458 ನಂಬರಿನ Venue ಕಾರಿನಲ್ಲಿ ಬಂದಿದ್ದ ಪ್ರತಾಪ್​ಕುಮಾರ್​, ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ನಿಗೂಢವಾಗೇ ಸಾವನ್ನಪ್ಪಿದ್ದಾರೆ. ಹೊನ್ನಾಳಿ ಅರಣ್ಯ ಪ್ರದೇಶದ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದಾರೆ ಅನ್ನೋದು ಗೊತ್ತಾಗಿದೆ. ಕಾರಿನಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. ಆದ್ರೆ, ಪ್ರತಾಪಕುಮಾರ ಆತ್ಮಹತ್ಯೆಗೆ ನಿಖರ ಕಾರಣ ಮಾತ್ರ ಗೊತ್ತಾಗ್ತಿಲ್ಲ.

ವಿಷ ಸೇವಿಸಿದ್ದಾಗಿ ಕುಟುಂಬಸ್ಥರಿಗೆ ಪ್ರತಾಪ್​​​ ಫೋನ್​!

ಮಧ್ಯಾಹ್ನದ ಸುಮಾರಿಗೆ ಕಾರಿನಲ್ಲಿ ವಿಷ ಸೇವನೆ ಮಾಡಿದ್ದ ಪ್ರತಾಪ್ ಕುಮಾರ್, ವಿಷ ಸೇವಿಸುವುದಾಗಿ ಮನೆಯವರಿಗೆ ಪೋನ್ ಮಾಡಿ ಹೇಳಿದ್ದರಂತೆ. ವಿಚಾರ ಗೊತ್ತಾಗ್ತಿದ್ದಂತೆ ಕುಟುಂಬಸ್ಥರಿಂದ ಬಿ.ಸಿ ಪಾಟೀಲ್​ರಿಗೆ ಕರೆ…ಮಾಡಿದ್ರು. ಕೂಡಲೇ ಪೊಲೀಸರ ಮೂಲಕ ಅಳಿಯನ ಮೊಬೈಲ್ ನಂಬರ್​ ಟ್ರೇಸ್​​ ಮಾಡಿದ್ರು. ಮಧ್ಯಾಹ್ನ 3 ಗಂಟೆಗೆ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಕಾರು ಪತ್ತೆ…ಆಗಿತ್ತು. ಕಾರಿನಲ್ಲಿ ವಿಷ ಸೇವಿಸಿ ನರಳಾಡ್ತಿದ್ದ ಪ್ರತಾಪ್ ಕುಮಾರ್ ಅವರನ್ನ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯ್ತು. ಸ್ಥಿತಿ ಕ್ರಿಟಿಕಲ್ ಆಗಿದ್ರಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್ ಕುಮಾರ್​​ ಕೊನೆಯುಸಿರೆಳೆದ್ರು.

ಪಾಟೀಲರ ಅಳಿಯ ಪ್ರತಾಪ್​

ಮೃತ ಪ್ರತಾಪ್ ಕುಮಾರ್​ಗೆ ಕೇವಲ 41 ವರ್ಷ ವಯಸ್ಸು. ಮೂಲತಃ ದಾವಣಗೆರೆ ಜಿಲ್ಲೆ ಕತ್ತಲಗೆರೆ ಗ್ರಾಮದವರು. ಬಿ.ಸಿ ಪಾಟೀಲ್ ಪತ್ನಿ ವನಜಾ ಸ್ವಂತ ತಮ್ಮನಾಗಿದ್ದ. ಇತ್ತ ಮೊದಲ ಮಗಳು ಸೌಮ್ಯ ಮೇಲೆ‌ ಹೆಚ್ಚು ಪ್ರೀತಿ ಹೊಂದಿದ್ದ ಬಿ.ಸಿ ಪಾಟೀಲ್, 15 ವರ್ಷದ ಹಿಂದೆ ಅಂದ್ರೆ 2009ರಲ್ಲಿ ಸೋದರಳಿಯ ಪ್ರತಾಪ್ ​ಕುಮಾರ್​ಗೆ ಮದುವೆ ಮಾಡ್ಕೊಟ್ಟು ಮನೆ ಅಳಿಯನನ್ನಾಗಿ ಮಾಡ್ಕೊಂಡಿದ್ರು. ಬಿಸಿ ಪಾಟೀಲ್ ಜೊತೆಯಿದ್ದು ರಾಜಕೀಯ ವ್ಯವಹಾರದ ಜೊತೆಗೆ 90ಕ್ಕೂ ಹೆಚ್ಚು ಎಕರೆ ಜಮೀನನ್ನು ನೋಡ್ಕೊಂಡಿದ್ರು. ಆದ್ರೆ, 15 ವರ್ಷಗಳಾದ್ರು ಪ್ರತಾಪ್ ಮತ್ತು ಸೌಮ್ಯಳಿಗೆ ಮಕ್ಕಳು ಆಗಿರಲಿಲ್ಲ ಅನ್ನೋ ಕೊರಗು ಮಾತ್ರ ಇತ್ತು ಅನ್ನೋ ಮಾತು ಸಂಬಂಧಿಕರು ಹೇಳುತ್ತಾರೆ.

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಶವಾಗಾರಕ್ಕೆ ಬಿ.ಸಿ ಪಾಟೀಲ್ ಸೇರಿ ಕುಟುಂಬಸ್ಥರು ಭೇಟಿ ನೀಡಿದ್ರು. ಅಲ್ಲದೆ, ಆಸ್ಪತ್ರೆಗೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಮಾಜಿ ಸಚಿವ ರೇಣುಕಾಚಾರ್ಯ ಸೇರಿ ಹಲವು ಬಿಜೆಪಿ ನಾಯಕರು ಆಗಮಿಸಿ ಸಾಂತ್ವನ ಹೇಳಿದ್ರು.

ಇದನ್ನೂ ಓದಿ: ಮಕ್ಕಳಿಲ್ಲದಿದ್ರೂ ಸುಖ ಸಂಸಾರ ನಡೆಸುತ್ತಿದ್ದ ಬಿ.ಸಿ ಪಾಟೀಲ್​ ಅಳಿಯ.. ಇವರ ಆತ್ಮಹತ್ಯೆಗೆ ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆ ಒಂದು ಕೊರಗಿನಿಂದಲೇ ಸೂಸೈಡ್​ ಮಾಡಿಕೊಂಡ್ರಾ ಬಿ.ಸಿ ಪಾಟೀಲ್​​ ಅಳಿಯ? ಅಸಲಿ ಕಾರಣ ಬಹಿರಂಗ!

https://newsfirstlive.com/wp-content/uploads/2024/07/prathap.jpg

Load More