newsfirstkannada.com

ಬರೀ 16 ಸಾವಿರಕ್ಕೆ ಸಿಗುತ್ತೆ JioBook ಲ್ಯಾಪ್‌ಟಾಪ್; ಕೇಂದ್ರ ಆಮದಿಗೆ ನಿರ್ಬಂಧ ವಿಧಿಸಿದ ದಿನವೇ ರಿಲಯನ್ಸ್‌ ಕೊಡುಗೆ

Share :

03-08-2023

    ಲ್ಯಾಪ್‌ಟಾಪ್‌ಗಳ ಆಮದಿಗೆ ಕೇಂದ್ರ ಸರ್ಕಾರದಿಂದ ನಿರ್ಬಂಧ

    ವಿದ್ಯಾರ್ಥಿಗಳ ಆನ್‌ಲೈನ್ ತರಗತಿ, ಕೋಡ್ ಕಲಿಕೆ ಇದು ಬೆಸ್ಟ್​

    ಜಿಯೋಬುಕ್​​ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ಕಣ್ಣಾಡಿಸಿ

ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂದು ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್‌ಗಳ ಆಮದಿಗೆ ನಿರ್ಬಂಧ ವಿಧಿಸಿದೆ. ಇದು ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶಿಸಲಾಗಿದೆ. ಈ ನಿರ್ಬಂಧದಿಂದಾಗಿ ಇನ್ಮುಂದೆ ಭಾರತದಲ್ಲಿ ಡೆಲ್, ಸ್ಯಾಮ್‌ಸಂಗ್‌ನಂತಹ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಉತ್ಪನ್ನಗಳ ಆಮದು ಕಷ್ಟವಾಗಲಿದೆ. ಆಮದು ಪರವಾನಗಿ ಹೊಂದಿರುವ ಉತ್ಪನ್ನಗಳನ್ನು ಮಾತ್ರ ಖರೀದಿಸಬಹುದಾಗಿದೆ. ದೇಶದ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸುವ ದೃಷ್ಟಿಯಿಂದ ಲ್ಯಾಪ್‌ಟಾಪ್, ಟ್ಯಾಬ್, ಕಂಪ್ಯೂಟರ್‌ಗಳ ಆಮದಿಗೆ ನಿರ್ಬಂಧ ವಿಧಿಸಲಾಗಿದೆ. ಮತ್ತೊಂದು ಪ್ರಮುಖ ವಿಚಾರ ಅಂದ್ರೆ ಕೇಂದ್ರ ಸರ್ಕಾರ ಲ್ಯಾಪ್‌ಟಾಪ್‌ಗಳ ಆಮದಿಗೆ ಈ ನಿರ್ಬಂಧ ವಿಧಿಸಿದ ದಿನವೇ ರಿಲಯನ್ಸ್‌ ಒಡೆತನದ ಜಿಯೋ ಸಂಸ್ಥೆ ಕೇವಲ 16,499 ರೂಪಾಯಿಗೆ ಜಿಯೋಬುಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ರೇಟ್ ಎಷ್ಟು? ಅದರ ವಿಶೇಷತೆಗಳೇನು ಅನ್ನೋ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಭಾರತದ ಅತಿದೊಡ್ಡ ಕಂಪನಿ ರಿಲಯನ್ಸ್​ ತನ್ನ ರಿಲಯನ್ಸ್​ ರೀಟೇಲ್ ಮೂಲಕ ‘ಜಿಯೋಬುಕ್’ ಅನ್ನು ಪರಿಚಯಿಸಿದೆ. ಅತ್ಯಾಧುನಿಕ ‘ಜಿಯೋಒಎಸ್’ ನಿಂದ  ಕಾರ್ಯಾಚರಿಸುವ ಡಿಜಿಟಲ್ ಕಲಿಕಾ ಬುಕ್ ಆಕರ್ಷಕ ವಿನ್ಯಾಸ ಮತ್ತು ಸದಾ-ಸಂಪರ್ಕಿತವಾಗಿರುವ ವೈಶಿಷ್ಟ್ಯಗಳನ್ನು ಹೊಂದಿದೆ.

ಆನ್‌ಲೈನ್ ತರಗತಿ, ಕೋಡ್ ಕಲಿಕೆ, ಯೋಗ ತರಬೇತಿ, ಆನ್‌ಲೈನ್ ವ್ಯಾಪಾರ ಹೀಗೆ ಎಲ್ಲದಕ್ಕೂ ಸೂಕ್ತವೆಂಬಂತೆ ಜಿಯೋ ಬುಕ್ ​ಅನ್ನು ತಯಾರಿಸಿದೆ. ಇವಿಷ್ಟು ಮಾತ್ರವಲ್ಲದೆ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಆಕರ್ಷಕ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ. ಅಂದಹಾಗೆಯೇ ಗ್ರಾಹಕರು 16 ಸಾವಿರಕ್ಕೆ ಈ ಲ್ಯಾಪ್​ಟಾಪ್​ ಖರೀದಿಸಬಹುದಾಗಿದೆ.

ಜಿಯೋಬುಕ್ ಲ್ಯಾಪ್​ಟಾಪ್​
ಜಿಯೋಬುಕ್ ಲ್ಯಾಪ್​ಟಾಪ್​

ಬಳಕೆದಾರರ ಸೌಕರ್ಯ ಮತ್ತು ಅನುಕೂಲಕ್ಕೆ ಅನುಗುಣವಾಗಿ ವಿನ್ಯಾಸಗೊಂಡಿರುವ ‘ಜಿಯೋಬುಕ್’ನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ – ಸೀಮಾತೀತ ಅಂತರಜಾಲ ಸಂಪರ್ಕದೊಂದಿಗೆ, ದೇಶದ ಮೂಲೆಮೂಲೆಯಲ್ಲೂ ಕಲಿಕೆಗೆ ಅಡ್ಡಿಯಿಲ್ಲದಂತೆ ಸದಾ ಸಂಪರ್ಕಿತರಾಗಿರಲು ಅನುಕೂಲ.

75+ ಕೀಬೋರ್ಡ್ ಶಾರ್ಟ್‌ಕಟ್‌ಗಳು, ಟ್ರ್ಯಾಕ್‌ಪ್ಯಾಡ್,  ಸ್ಕ್ರೀನ್ ವಿಸ್ತರಣೆ, ವೈರ್‌ಲೆಸ್ ಪ್ರಿಂಟಿಂಗ್, ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು, ಚಾಟ್‌ಬಾಟ್, ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ, ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳನ್ನು ಆಡಬಹುದಾಗಿದೆ

ಇವಿಷ್ಟು ಮಾತ್ರವಲ್ಲದೆ, JioBIAN ಎಂಬ ಸಿದ್ಧ ಕೋಡಿಂಗ್ ವಲಯದೊಂದಿಗೆ, C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಕೋಡಿಂಗ್ ಕಲಿಯಬಹುದಾಗಿದೆ.

ಜಿಯೋಬುಕ್ ಲ್ಯಾಪ್​ಟಾಪ್​
ಜಿಯೋಬುಕ್ ಲ್ಯಾಪ್​ಟಾಪ್​

ಸರಿಸಾಟಿಯಿಲ್ಲದ ವಿನ್ಯಾಸ ಮತ್ತು ಕಾರ್ಯಕ್ಷಮತೆ:

ಜಿಯೋ ಬುಕ್‌ ಮ್ಯಾಟ್ ಫಿನಿಶ್, ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ  ಆಕರ್ಷಕ ವಿನ್ಯಾಸ ಜೊತೆಗೆ ತೀರಾ ಹಗುರವಾಗಿದೆ (990 ಗ್ರಾಂ). 2.0 GHz ಒಕ್ಟಾ ಕೋರ್ ಪ್ರೊಸೆಸರ್, 4 GB LPDDR4 RAM, 64GB (ಎಸ್‌ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸಬಹುದು) ಸ್ಟೋರೇಜ್, ಇನ್ಫಿನಿಟಿ ಕೀಬೋರ್ಡ್, USB/HDMI ಪೋರ್ಟ್‌ಗಳ ಮೂಲಕ ಅದ್ಭುತ ಕಾರ್ಯನಿರ್ವಹಣೆಯನ್ನು ನೀಡುತ್ತದೆ.

ಜಿಯೋಬುಕ್ ಹಾರ್ಡ್‌ವೇರ್ ವೈಶಿಷ್ಟ್ಯಗಳು:

  1. JioOS ಮೂಲಕ ಕಾರ್ಯನಿರ್ವಹಿಸುತ್ತದೆ
  2. 4G ಮತ್ತು ಡ್ಯುಯಲ್ ಬ್ಯಾಂಡ್ WiFi ಸಂಪರ್ಕತೆ
  3. ಅಲ್ಟ್ರಾ ಸ್ಲಿಮ್ (990 ಗ್ರಾಂ) ಮತ್ತು ಅತ್ಯಾಧುನಿಕ ವಿನ್ಯಾಸ
  4. ಮಲ್ಟಿಟಾಸ್ಕಿಂಗ್‌ಗಾಗಿ ಒಕ್ಟಾ ಕೋರ್ ಚಿಪ್‌ಸೆಟ್
  5. 11.6” (29.46CM) ಆ್ಯಂಟಿ-ಗ್ಲೇರ್ HD ಡಿಸ್‌ಪ್ಲೇ
  6. ಇನ್ಫಿನಿಟಿ ಕೀಬೋರ್ಡ್ ಮತ್ತು ಟ್ರ್ಯಾಕ್‌ಪ್ಯಾಡ್
  7. USB, HDMI ಮತ್ತು ಆಡಿಯೋ ಪೋರ್ಟ್‌ಗಳು

ಲಭ್ಯತೆ:

  1. ಜಿಯೋಬುಕ್ ರೂ.16,499 ಬೆಲೆಯಲ್ಲಿ 2023 ಆಗಸ್ಟ್ 5ರಿಂದ ಲಭ್ಯವಿದೆ.
  2. ಗ್ರಾಹಕರು ರಿಲಯನ್ಸ್ ಡಿಜಿಟಲ್‌ನ ಆನ್‌ಲೈನ್ ಹಾಗೂ ಆಫ್‌ಲೈನ್ ಮಳಿಗೆಗಳಿಂದ ಮತ್ತು Amazon.in ತಾಣದಿಂದ ಜಿಯೋಬುಕ್ ಖರೀದಿಸಬಹುದು.
  3. ಹೆಚ್ಚಿನ ಮಾಹಿತಿಗಾಗಿ www.jiobook.com ಸಂಪರ್ಕಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 16 ಸಾವಿರಕ್ಕೆ ಸಿಗುತ್ತೆ JioBook ಲ್ಯಾಪ್‌ಟಾಪ್; ಕೇಂದ್ರ ಆಮದಿಗೆ ನಿರ್ಬಂಧ ವಿಧಿಸಿದ ದಿನವೇ ರಿಲಯನ್ಸ್‌ ಕೊಡುಗೆ

https://newsfirstlive.com/wp-content/uploads/2023/08/Jio-Book.jpg

Load More