newsfirstkannada.com

ಸಿಎಂ, ಡಿಸಿಎಂ ಇಬ್ಬರಿಗೂ ತಾತ್ಕಾಲಿಕ ರಿಲೀಫ್.. ಎರಡೂ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ಟ್ವಿಸ್ಟ್; ಆಗಿದ್ದೇನು?

Share :

Published August 29, 2024 at 5:34pm

Update August 29, 2024 at 5:36pm

    ಮುಡಾ ಅಕ್ರಮ ಆರೋಪದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಆದೇಶ

    ಹೈಕೋರ್ಟ್‌ಗೆ ವಾದ ಮಂಡಿಸಲು ಖುದ್ದು ಅಭಿಷೇಕ್ ಮನು ಸಿಂಘ್ವಿ ಹಾಜರು

    ಸದ್ಯಕ್ಕೆ ಸಿಬಿಐ ತನಿಖೆಯಿಂದ ಡಿ.ಕೆ. ಶಿವಕುಮಾರ್ ಕೂಡ ಬಚಾವ್!

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಇವತ್ತು ಬಿಗ್‌ ಡೇ ಆಗಿದ್ದು, ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಎರಡು ಪ್ರತ್ಯೇಕ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಇಬ್ಬರು ಸದ್ಯಕ್ಕೆ ನಿರಾಳರಾಗಿದ್ದಾರೆ. ಇಂದಿನ ಹೈಕೋರ್ಟ್ ಆದೇಶದಿಂದ ರಾಜ್ಯ ಸರ್ಕಾರವೂ ನಿಟ್ಟುಸಿರು ಬಿಟ್ಟಿದೆ.

ಇದನ್ನೂ ಓದಿ: ಮುಡಾ ಕೇಸ್​ನಿಂದ ಸಿದ್ದರಾಮಯ್ಯರನ್ನು ಬಚಾವ್​ ಮಾಡಿದ್ದು ಮನು ಸಿಂಘ್ವಿ; ಯಾರು ಈ ಆಪತ್ಭಾಂದವ? 

ಸಿಎಂ ಸಿದ್ದುಗೆ 2 ದಿನ ರಿಲೀಫ್‌!
ಮುಡಾ ಅಕ್ರಮ ಆರೋಪದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆ ಗವರ್ನರ್‌ ಆದೇಶವನ್ನು ರದ್ದು ಮಾಡುವಂತೆ ಕೋರಿ ಸಿದ್ದರಾಮಯ್ಯ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಅರ್ಜಿಯ ವಿಚಾರಣೆ ಇಂದು ನ್ಯಾ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ನಡೆದಿದೆ. ಸಿಎಂ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಲು ಖುದ್ದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಹಾಜರಾಗಿದ್ದರು.

ಅಭಿಷೇಕ್‌ ಮನು ಸಿಂಘ್ವಿ ಅವರು ಮಂಡಿಸಿದ ವಾದವನ್ನು ಆಲಿಸಿದ ನ್ಯಾಯಾಲಯ, ಸಿಎಂ ಸಿದ್ದರಾಮಯ್ಯಗೆ ಮತ್ತೆ ಎರಡು ದಿನ ರಿಲೀಫ್​ ನೀಡಿದೆ. ರಿಟ್​ ಅರ್ಜಿಯ ವಿಚಾರಣೆಯನ್ನು ಮುಂದಿನ ಆಗಸ್ಟ್ 31ರ ಶನಿವಾರ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಲಾಗಿದೆ. ಶನಿವಾರ ರಾಜ್ಯಪಾಲರ ಪರ SGI ತುಷಾರ್​ ಮೆಹ್ತಾ ವಾದ ಮಂಡಿಸಲು ಸೂಚನೆ ನೀಡಲಾಗಿದೆ.

ಅಭಿಷೇಕ್​ ಮನುಸಿಂಘ್ವಿ ವಾದವೇನು?
ಸಿಎಂ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಬೇಕಿರುವುದು ತನಿಖಾಧಿಕಾರಿ. ಆದರೆ ಇಲ್ಲಿ ಮೂರನೇ ವ್ಯಕ್ತಿಯೊಬ್ಬರು ಸ್ಯಾಂಕ್ಷನ್​​ ಕೇಳಿದ್ದಾರೆ. ಮೂರನೇ ವ್ಯಕ್ತಿಯ ದೂರು ಆಧರಿಸಿ ಸ್ಯಾಂಕ್ಷನ್​ ನೀಡಲಾಗಿದೆ.

ಗವರ್ನರ್​ ಸ್ಯಾಂಕ್ಷನ್​ ಬಳಿಕ ಅಬ್ರಹಾಂ ಪಿಸಿಆರ್​ ದಾಖಲಿಸಿದ್ದಾರೆ. ಅದೇ ಪಿಸಿಆರ್​ ಅಲ್ಲಿ 17A ಗೆ ಅನುಮತಿ ಬೇಕಿಲ್ಲ ಎಂದಿದ್ದಾರೆ. ಈ ದ್ವಂದ್ವ ನಡವಳಿಕೆ ಆಧಾರದ ಮೇಲೆ ಸ್ಯಾಂಕ್ಷನ್​ ರದ್ದು ಮಾಡಬೇಕು. ರಾಜ್ಯಪಾಲರು ಸ್ಯಾಂಕ್ಷನ್​ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಆತುರ ಆತುರವಾಗಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ.

ಇದನ್ನೂ ಓದಿ: ಕೈ ಪಾಳಯದ ಆಪತ್ಬಾಂಧವ ಅಭಿಷೇಕ್ ಮನು ಸಿಂಘ್ವಿ: ಆದಾಯವೆಷ್ಟು, ವಿವಾದವೆಷ್ಟು? 

ಶಶಿಕಲಾ ಜೊಲ್ಲೆ, ಮುರುಗೇಶ್​ ನಿರಾಣಿ ಹಾಗೂ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರ ಕೇಸು ಪೆಂಡಿಂಗ್‌ನಲ್ಲಿದೆ. ಈ ಪ್ರಕರಣದಲ್ಲಿ ತನಿಖೆ ನಡೆದಿದ್ದರೂ ಚಾರ್ಜ್​ಶೀಟ್​​ಗೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ರಾಜ್ಯಪಾಲರು ಸಚಿವ ಸಂಪುಟ ನೀಡಿದ ಸಲಹೆ ಕೂಡ ಪರಿಗಣಿಸಿಲ್ಲ. ಜನರಿಂದ ಆಯ್ಕೆಯಾದ ಸರ್ಕಾರವನ್ನು ಈ ಕ್ರಮಗಳಿಂದ ಬದಲಿಸಲಾಗಲ್ಲ. ರಾಜ್ಯಪಾಲರ ನಿರ್ಧಾರ ಸಹಜ ನ್ಯಾಯ ಪ್ರಕ್ರಿಯೆಯ ಉಲ್ಲಂಘನೆಯಾಗಿದೆ.
2004ರವರೆಗೂ ಸಿಎಂಗೆ ಆ ಜಮೀನಿನ ಜೊತೆ ಯಾವ ಸಂಬಂಧವೂ ಇಲ್ಲ. 2004ರಲ್ಲಿ ಸಿದ್ದರಾಮಯ್ಯ ಬಾಮೈದ ಆ ಭೂಮಿಯನ್ನು ಖರೀದಿಸಿದ್ದಾರೆ. 2005ರಲ್ಲಿ ಆ ಜಮೀನಿನ ಭೂ ಪರಿವರ್ತನೆ ಪ್ರಕ್ರಿಯೆ ಮಾಡಲಾಗಿದೆ. 2010ರಲ್ಲಿ ಸಿಎಂ ಪತ್ನಿ ಹೆಸರಿಗೆ ಜಮೀನನ್ನು ಗಿಫ್ಟ್​ ಡೀಡ್​ ಮಾಡಿದ್ದಾರೆ. ಈ ಯಾವ ಪ್ರಕ್ರಿಯೆಯಲ್ಲೂ ಸಿದ್ದರಾಮಯ್ಯ ಅವರ ಪಾತ್ರವಿಲ್ಲ. ಅವರು ಪ್ರಭಾವವನ್ನು ಬೀರಿಲ್ಲ, ಖಾತೆಯ ಸಚಿವರೂ ಅಗಿರಲಿಲ್ಲ. ಸಿದ್ದರಾಮಯ್ಯ ಪಾತ್ರವೇ ಇಲ್ಲದೇ ಇರುವಾಗ ಸ್ಯಾಂಕ್ಷನ್​​ ಯಾಕಾಗಿ ಎಂದು ಅಭಿಷೇಕ್ ಮನು ಸಿಂಘ್ವಿ ಅವರು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್‌ಗೂ ತಾತ್ಕಾಲಿಕ ರಿಲೀಫ್‌!
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ. ಶಿವಕುಮಾರ್​ ವಿರುದ್ಧ ಸಿಬಿಐ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿಬಿಐ ಹಾಗೂ ಯತ್ನಾಳ್​ಗೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸೋದಕ್ಕೆ ಅವಕಾಶವಿದ್ದು, ಸದ್ಯಕ್ಕೆ ಸಿಬಿಐ ತನಿಖೆಯಿಂದ ಡಿ.ಕೆ. ಶಿವಕುಮಾರ್ ಬಚಾವ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಎಂ, ಡಿಸಿಎಂ ಇಬ್ಬರಿಗೂ ತಾತ್ಕಾಲಿಕ ರಿಲೀಫ್.. ಎರಡೂ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ಟ್ವಿಸ್ಟ್; ಆಗಿದ್ದೇನು?

https://newsfirstlive.com/wp-content/uploads/2024/08/SIDDARAMAIAH-3.jpg

Load More