newsfirstkannada.com

ತೆಲುಗಿನಲ್ಲಿ ಶ್ರೀಲೀಲಾಗೆ ಭಾರೀ ಡಿಮ್ಯಾಂಡ್​​; ಅಬ್ಬಬ್ಬಾ! ಒಂದು ಸಿನಿಮಾದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

Share :

19-07-2023

  ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡ ಸ್ಯಾಂಡಲ್​ವುಡ್​ ನಟಿ!

  ಕನ್ನಡದ ನಟಿಗೆ ಟಾಲಿವುಡ್​ನಲ್ಲಿ ಇನ್ನು ಬರ್ತಾನೇ ಇದೆ ಡಿಮ್ಯಾಂಡ್​!

  ಈಗ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ ಸಖತ್‌ ಚರ್ಚೆಯಾಗ್ತಿದೆ.. ಏನದು?

ಮಹೇಶ್ ಬಾಬು ನಟನೆಯ ‘ಗುಂಟುರು ಖಾರಂ’, ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’, ಪವನ್ ಕಲ್ಯಾಣ್ ನಟನೆಯ ‘ಉಸ್ತದ್ ಭಗತ್ ಸಿಂಗ್’ ಚಿತ್ರಗಳಲ್ಲಿ ಶ್ರೀಲೀಲಾ ನಟಿಸ್ತಾಯಿದ್ದಾರೆ. ರಾಮ್ ಪೋತಿನೇನಿ, ವೈಷ್ಣವ್ ತೇಜ್ ನಟನೆಯ ಚಿತ್ರಗಳಿಗೂ ಶ್ರೀಲೀಲಾ ಹೀರೋಯಿನ್. ವಿಜಯ್ ದೇವರಕೊಂಡ, ನಿತೀನ್, ನವೀನ್ ಪೋಲಿಶೆಟ್ಟಿ ಜೊತೆಯೂ ಒಂದೊಂದು ಸಿನಿಮಾ ಅಧಿಕೃತವಾಗಿದೆ. ಇನ್ನು, ನಾಲ್ಕೈದು ಚಿತ್ರಗಳು ಮಾತುಕತೆ ಹಂತದಲ್ಲಿದ್ದು, ಶೀಘ್ರದಲ್ಲೇ ಅದು ಕೂಡ ಫೈನಲ್ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ತೆಲುಗು ಇಂಡಸ್ಟ್ರಿಗೆ ಬಂದು ಕೇವಲ ಎರಡು ವರ್ಷಗಳಾಗಿವೆ. ಈ ಅಲ್ಪವಧಿಯಲ್ಲಿಯೇ ಇಷ್ಟೊಂದು ಸಿನಿಮಾಗಳು ಅನ್ನೋದಕ್ಕಿಂತ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ನಟಿಸಿರೋದು ದೊಡ್ಡ ಅಚೀವ್‌ಮೆಂಟ್‌. ಹಾಗಾಗಿಯೇ ನಾವು ಇಂಟ್ರಡಕ್ಷನ್‌ನಲ್ಲಿ ಹೇಳಿದ್ದು, ಸದ್ಯ ಅದೃಷ್ಟ ದೇವತೆ ಶ್ರೀಲೀಲಾ ಅವರ ಮನೆಯಲ್ಲಿದ್ದಾಳೆ ಅಂತಾ. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಸಾಯಿಪಲ್ಲವಿ, ಸಮಂತಾ, ತಮನ್ನಾ ಅಂಥಾ ಘಟಾನುಘಟಿ ನಾಯಕಿರೆಲ್ಲಾ ಇನ್ನೂ ಇಂಡಸ್ಟ್ರಿಯಲ್ಲಿರೋ ಟೈಮ್‌ನಲ್ಲಿಯೇ ಶ್ರೀಲೀಲಾ ಅದ್ಯಾಗೇ ಈ ಮಟ್ಟಿಗೆ ಆಫರ್ಸ್‌ ಪಡೆದುಕೊಂಡಿರೋದು ನಿಜವೇ.

ಈಗ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್‌ ಸಖತ್‌ ಚರ್ಚೆಯಾಗ್ತಿದೆ. ಅದೇನಂದ್ರೆ, ಸೂಪರ್‌ಸ್ಟಾರ್‌ಗಳ ಕಾಲ್‌ಶೀಟ್‌ ಕೇಳೋಕೆ ಹೋಗ್ತಿರೋ ನಿರ್ಮಾಪಕರಿಗೆ ಆ ನಟರು ಏನ್ ಕಂಡೀಶನ್ ಹಾಕ್ತಿದ್ದಾರೆ ಗೊತ್ತಾ? ನಾನ್‌ ಕಾಲ್‌ಶೀಟ್‌ ಕೊಡ್ತೀನಿ ಮೊದಲು ಶ್ರೀಲೀಲಾ ಕಾಲ್‌ಶೀಟ್‌ ಇದ್ಯಾ ಅಂತಾ ಚೆಕ್ ಮಾಡ್ಕೊಳ್ಳಿ ಅಂತಾ ಹೇಳ್ತಿದ್ದಾರಂತೆ. ಹೀಗೊಂದು ಸುದ್ದಿ ಟಾಲಿವುಡ್ ತುಂಬೆಲ್ಲಾ ಹಬ್ಬಿದೆ. ಇದೆಲ್ಲಾ ಶ್ರೀಲೀಲಾ ಕಿವಿಗೂ ಬಿದ್ದಿದೆಯಂತೆ. ಹಾಗಾಗಿ ಮೇಡಂ ಅವರು ಈಗ ಹೊಸ ರೂಲ್ಸ್‌ ಬೇರೇ ಜಾರಿ ಮಾಡಿದ್ದಾರಂತೆ. ಅದೇನೂ ಅಂದ್ರೆ ರೆನಿಮ್ಯುನೇಷನ್‌.

ಯಾವಾಗ ಈ ಸುದ್ದಿ ಶ್ರೀಲೀಲಾ ಕಿವಿಗೆ ಬಿತ್ತೋ ಅವರು ತಮ್ಮ ಸಂಭಾವನೆಯನ್ನ ಡಬಲ್ ಮಾಡಿ ಕೊಂಡಿದ್ದಾರಂತೆ. ಇದು ಸಹಜ ಬಿಡಿ. ಯಾವಾಗ ಡಿಮ್ಯಾಂಡ್ ಇರುತ್ತೋ ಆಗ ಮಾತ್ರ, ನಾವು ಡಿಮ್ಯಾಂಡ್ ಮಾಡಬೇಕು. ಡಿಮ್ಯಾಂಡ್ ಕಡಿಮೆಯಾದಾಗ ಮಾಡಿದ್ರೆ ನೋ ಯೂಸ್‌. ಇತ್ತೀಚಿನ ನಟ-ನಟಿಯರು ಸಂಭಾವನೆ ಬಗ್ಗೆ ಹೆಚ್ಚು ಜಾಗ್ರತಾರಾಗಿದ್ದಾರೆ. ಈ ಹಿಂದೆ ಇಂಡಸ್ಟ್ರಿಯಲ್ಲಿ ಹಲವರು ಮಾಡಿದ ಮಿಸ್ಟೇಕ್‌ನ ಇವತ್ತಿನ ನಟ-ನಟಿಯರು ಮಾಡ್ತಿಲ್ಲ. ನಮಗೆ ಸಿಕ್ಕಿರೋ ಮಾಹಿತಿಯ ಪ್ರಕಾರ ಶ್ರೀಲೀಲಾ ಈ ಮೊದಲು 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಂತೆ. ಈಗ ಡಿಮ್ಯಾಂಡ್ ಕ್ರಿಯೇಟ್ ಆದ್ಮೇಲೆ, ಆ ಸಂಭಾವನೆ ಡಬಲ್ ಆಗಿದೆಯಂತೆ. ಅಂದ್ರೆ 2 ಕೋಟಿಯಾಗಿದೆಯಂತೆ. ಈ ರೀತಿಯ ಬೆಳವಣಿಗೆ ಚಿತ್ರರಂಗದಲ್ಲಿ ಮೊದಲನೇನಲ್ಲ. ಹಲವು ಪೋಷಕರ ಕಲಾವಿದರ ಲಭ್ಯತೆ ಮೇರೆಗೆ ಹೀರೋಗಳು ಕಾಲ್‌ಶೀಟ್‌ ಕೊಡ್ತಿದ್ದ ಪದ್ಧತಿ ಎಲ್ಲಾ ಇಂಡಸ್ಟ್ರಿಯಲ್ಲೂ ನಡೆದಿದೆ.

ಹೀರೋಯಿನ್‌ಗಳ ಡೇಟ್ಸ್ ಪಡೆದು, ಹೀರೋಗಳ ಡೇಟ್ಸ್ ಪಡೆದಿರೋ ಸಂಪ್ರದಾಯವೂ ಎಲ್ಲಾ ಇಂಡಸ್ಟ್ರಿಯಲ್ಲೂ ನಡೆದಿದೆ. ಆದ್ರೆ, ಇಂಪಾರ್ಟ್‌ಟೆಂಟ್ ಏನಂದ್ರೆ, ಆ ಕಾರ್ಡ್‌ನಲ್ಲಿ ಯಾರ್‌ ಇರ್ತಾರೆ ಅನ್ನೋದು. ಸದ್ಯ ಟಾಲಿವುಡ್‌ನಲ್ಲಿ ಶ್ರೀಲೀಲಾಗೆ ತುಂಬಾ ಡಿಮ್ಯಾಂಡ್ ಇರೋದು ಖುಷಿಯ ವಿಚಾರ. ಕನ್ನಡ ಚಿತ್ರರಂಗದಿಂದ ಕರಿಯರ್ ಆರಂಭಿಸಿದ ನಟಿಗೆ ದೊಡ್ಡ ಇಂಡಸ್ಟ್ರಿಯಲ್ಲಿ ಈ ಮಟ್ಟಿಗಿನ ಡಿಮ್ಯಾಂಡ್ ಕ್ರಿಯೇಟ್ ಆಗಿರೋದು ಎಲ್ರೂ ಖುಷಿಪಡೋ ವಿಚಾರವೇ ಅಲ್ವಾ? ಇದೆಲ್ಲಾದರ ನಡುವೆ ಶ್ರೀಲೀಲಾ ಒಂದೆರೆಡು ಕನ್ನಡ ಸಿನಿಮಾಗಳಲ್ಲೂ ನಟಿಸ್ತಿದ್ದಾರೆ. ಒಟ್ಟಾರೆಯಾಗಿ ಕನ್ನಡದಿಂದ ಸಿನಿಮಾ ಜರ್ನಿ ಶುರು ಮಾಡಿದ ಹೀರೋಯಿನ್‌, ಈಗ ತೆಲುಗು ಇಂಡಸ್ಟ್ರಿಯ ನಂಬರ್ ಒನ್ ಆಯ್ಕೆಯಾಗಿರೋದು ಎಲ್ಲರೂ ಖುಷಿ ಪಡೋ ವಿಚಾರ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ತೆಲುಗಿನಲ್ಲಿ ಶ್ರೀಲೀಲಾಗೆ ಭಾರೀ ಡಿಮ್ಯಾಂಡ್​​; ಅಬ್ಬಬ್ಬಾ! ಒಂದು ಸಿನಿಮಾದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

https://newsfirstlive.com/wp-content/uploads/2023/07/sreelilaa-3.jpg

Load More