newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್‌ಗೆ ಸಹಾಯ ಮಾಡಿದ್ದ ಮತ್ತಿಬ್ಬರು ಅರೆಸ್ಟ್; ಯಾರಿವರು?

Share :

Published June 14, 2024 at 4:09pm

Update June 14, 2024 at 4:12pm

  ರೇಣುಕಾಸ್ವಾಮಿ ಕೇಸ್​ನಲ್ಲಿ ಎಲ್ಲ ಆರೋಪಿಗಳು ಅರೆಸ್ಟ್ ಆದ್ರಾ?

  ಕೊಲೆ ಕೇಸ್​ನಲ್ಲಿ ಪೊಲೀಸರಿಗೆ ಕೆದಕಿದಷ್ಟು ಮಾಹಿತಿ ಸಿಗುತ್ತಿದೆ

  ದರ್ಶನ್ ಆ್ಯಂಡ್ ಗ್ಯಾಂಗ್​ನ ಸುದ್ದಿಯೇ ರಾಜ್ಯದಲ್ಲಿ ಸದ್ದು ಮಾಡ್ತಿದೆ

ಚಿತ್ರದುರ್ಗ: ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಂದ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿ ಇನ್ನುಳಿದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಥಳ ಮಹಜರು ಸೇರಿದಂತೆ ಆರೋಪಿಗಳ ವಿಚಾರಣೆಯು ಸುಸೂತ್ರವಾಗಿ ನಡೆಯುತ್ತಿದೆ. ಈ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಪೊಲೀಸರು ಕೆದಕಿದಷ್ಟು ಮಾಹಿತಿ ಸಂಗ್ರಹವಾಗುತ್ತಿದೆ. ಇದರ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳನ್ನು ಚಿತ್ರದುರ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳಾದ ಜಗ್ಗು, ಅನು ಎಂಬುವರು ಚಿತ್ರದುರ್ಗದ ಡಿವೈಎಸ್​​ಪಿ ಕಚೇರಿಗೆ ತಾವೇ ಬಂದು ಸೆರೆಂಡರ್ ಆಗಿದ್ದಾರೆ. ಇವರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ರೇಣುಕಾಸ್ವಾಮಿ ಕೊಲೆ ನಡೆದ ಮೇಲೆ ಆರೋಪಿಗಳಾದ ಜಗ್ಗು, ಅನು ತಲೆಮರೆಸಿಕೊಂಡಿದ್ದರು. ಹೀಗಾಗಿ ಪೊಲೀಸರು ಹುಡುಕಾಟದಲ್ಲಿ ಇರುವಾಗಲೇ ತಾವೇ ಪೊಲೀಸ್​ ಕಚೇರಿಗೆ ಬಂದು ಶರಣಾಗಿದ್ದಾರೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯ ಬ್ಯಾಟಿಂಗ್ ಸ್ಲಾಟ್ ಚೇಂಜ್ ಮಾಡಿ ತಮಾಷೆ ನೋಡ್ತಿದ್ದಾರಾ.. ವಿರಾಟ್​ ವೈಫಲ್ಯಕ್ಕೆ ಕಾರಣವೇನು?

ಇನ್ನು ಈ ಕೊಲೆ ಕೇಸ್​ನಲ್ಲಿ ಜಗ್ಗು ಎ6 ಆರೋಪಿಯಾದರೆ, ಅನು ಅನ್ನುವನು ಎ7 ಆರೋಪಿಯಾಗಿದ್ದಾನೆ. ಈ ಇಬ್ಬರು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದವರು ಆಗಿದ್ದಾರೆ. ಅದರಂತೆ ಪವಿತ್ರಾಗೌಡ ಎ1, ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ರಾಜ್ಯಾದ್ಯಂತ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಮಾಡಿರುವ ಸುದ್ದಿಯೇ ಹೆಚ್ಚು ಸದ್ದು ಮಾಡುತ್ತಿದೆ. ಸದ್ಯ ಪ್ರಕರಣ ಸಂಬಂಧ ಎಲ್ಲ ಆರೋಪಿಗಳನ್ನು ಬಂಧಿಸಿದಂತೆ ಆಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ದರ್ಶನ್‌ಗೆ ಸಹಾಯ ಮಾಡಿದ್ದ ಮತ್ತಿಬ್ಬರು ಅರೆಸ್ಟ್; ಯಾರಿವರು?

https://newsfirstlive.com/wp-content/uploads/2024/06/DARSHAN_2_AIDE.jpg

Load More