newsfirstkannada.com

ಕೊಲೆ ಕೇಸ್​ ತನಿಖೆಗೆ ಸಣ್ಣ ಟ್ವಿಸ್ಟ್, ಮತ್ತೋರ್ವ ಅರೆಸ್ಟ್.. ಪವಿತ್ರ ಗೌಡಗೆ ಶುರುವಾಯ್ತು ಢವಢವ..!

Share :

Published June 16, 2024 at 2:48pm

    ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ಚುರುಕು

    ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು

    ಪೊಲೀಸರಿಂದ ಪವಿತ್ರ, ಪವನ್​ ಕರೆತಂದು ಸ್ಥಳ ಮಹಜರು

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪವಿತ್ರಾ ಗೌಡ ಮನೆಯಲ್ಲಿ ಪೊಲೀಸರು ಮಹಜರು ನಡೆಸುತ್ತಿದ್ದಾರೆ. ಕೇಸ್​ನ ಎ1 ಆರೋಪಿಯಾಗಿರೋ ಪವಿತ್ರಾ ಗೌಡ ಹಾಗೂ ಎ3 ಆರೋಪಿ ಪವನ್​ನನ್ನ ಮನೆಗೆ ಕರೆತಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?

ರೇಣುಕಾಸ್ವಾಮಿ ಕೊಲೆಗೈದ ಬಳಿಕ ಪವಿತ್ರಾ ಗೌಡ ಹಾಗೂ ಪವನ್ ಮನೆಗೆ ಬಂದಿರೋ ಮಾಹಿತಿ ಹಿನ್ನೆಲೆ, ಮನೆಯಲ್ಲಿ ಪರಿಶೀಲನೆ ನಡೆಸಲಾಗ್ತಿದೆ. ಪವಿತ್ರಾ ಗೌಡ ಕೊಲೆಗೈದ ದಿನದಂದು ಧರಿಸಿದ್ದ ಬಟ್ಟೆ, ಚಪ್ಪಲಿ ಹಾಗೂ ಪವನ್ ಗೆ ಸಂಬಂಧಿಸಿದ ವಸ್ತುಗಳನ್ನ ವಶಕ್ಕೆ ಪಡೆಯೋ ಸಾಧ್ಯತೆ ಇದೆ.

ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್​​ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!

ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ಮತ್ತೊಬ್ಬ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿ ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪವಿತ್ರಾ ಗೌಡ ಮ್ಯಾನೇಜರ್ ದೇವರಾಜ್ ನನ್ನ ಮೈಸೂರು ರಸ್ತೆಯಲ್ಲಿ ವಶಕ್ಕೆ ಪಡೆಯಲಾಗಿದೆ. ರೇಣುಕಾಸ್ವಾಮಿ ಕೊಲೆಯಾದ ಶೆಡ್​ಗೆ ಪವಿತ್ರಾ ಜೊತೆಗೆ ದೇವರಾಜ್ ಕೂಡ ಹೋಗಿದ್ದ ಎನ್ನಲಾಗ್ತಿದ್ದು, ಇದೇ ಕಾರಣಕ್ಕೆ ದೇವರಾಜ್ ನನ್ನ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ದೇವರಾಜ್ ಗೌಡ ಬಂಧನ ಹಿನ್ನೆಲೆಯಲ್ಲಿ ಪವಿತ್ರಗೌಡಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗಳು ಹೊರ ಬರುವ ಸಾಧ್ಯತೆ ಇದೆ. ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕರೂ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದು ಸಹಜವಾಗಿಯೇ ಪವಿತ್ರಗೌಡಗೆ ಭಯ ಶುರುವಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ:‘ಸಿಟ್ಟು ಬಂದ್ರೆ ಏನ್ಮಾಡ್ತಾಳೆ ಅಂತಾ ಅವಳಿಗೂ ಗೊತ್ತಿರಲ್ಲ..’ ಪವಿತ್ರಳ ಇನ್ನೊಂದು ಮುಖ ಅನಾವರಣ ಮಾಡಿದ ಮಾಜಿ ಪತಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್​ ತನಿಖೆಗೆ ಸಣ್ಣ ಟ್ವಿಸ್ಟ್, ಮತ್ತೋರ್ವ ಅರೆಸ್ಟ್.. ಪವಿತ್ರ ಗೌಡಗೆ ಶುರುವಾಯ್ತು ಢವಢವ..!

https://newsfirstlive.com/wp-content/uploads/2024/06/PAVITRA-2.jpg

Load More