newsfirstkannada.com

ರೇಣುಕಾಸ್ವಾಮಿ ಕೊಲೆ ಮಾಡಿ ಹೊಸ ಹೊಸ ಬಟ್ಟೆ ಖರೀದಿಸಿದ್ದ ಕಿರಾತಕರು.. ಆಮೇಲೆ ಏನ್ ಮಾಡಿದ್ರು?

Share :

Published June 17, 2024 at 6:38pm

    ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ಬಟ್ಟೆ ಖರೀದಿ ಮಾಡಿದ್ದರು.?

    ಕೊಲೆ ಮಾಡಿದ ಬಳಿಕ ಹೊಸ ಬಟ್ಟೆ ಖರೀದಿ ಮಾಡಿದ್ದ ಆರೋಪಿಗಳು

    ಮಹಜರುಗಾಗಿ ಆರೋಪಿಗಳನ್ನು ಕರೆದುಕೊಂಡು ಬಂದ ಪೊಲೀಸರು

ಬೆಂಗಳೂರು: ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಅವರ ಸಹಚರರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೋರ್ಟ್​ ಕಸ್ಟಡಿಗೆ ನೀಡಿದ ಬಳಿಕ ಪೊಲೀಸರು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ಹೊಸ ಬಟ್ಟೆ ಖರೀದಿ ಮಾಡಿ ದೇವಾಲಯಕ್ಕೆ ಭೇಟಿ ನೀಡಿರುವ ಮಾಹಿತಿ ಕೂಡ ಇದೀಗ ಬಹಿರಂಗಗೊಂಡಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಫ್ಯಾನ್ಸ್​ಗೆ ಗುಡ್​ನ್ಯೂಸ್.. ಸೂಪರ್​​ 8ನಲ್ಲಿ ವಿರಾಟರೂಪ ಹೇಗಿರುತ್ತೆ ಗೊತ್ತಾ?

ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್ ಸೇರಿ ಆರ್​​ಆರ್​ ನಗರದಲ್ಲಿರುವ ಟ್ರೆಂಡ್ಸ್​ನಲ್ಲಿ ಹೊಸ ಬಟ್ಟೆ ಖರೀದಿ ಮಾಡಿದ್ದರು. ನಂತರ ಖರೀದಿ ಮಾಡಿದ್ದ ಬಟ್ಟೆಗಳನ್ನು ಹಾಕಿಕೊಂಡಿದ್ದ ಆರೋಪಿಗಳು ಆರ್​ ಆರ್​ ನಗರದಲ್ಲಿರುವ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದರು.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ಸದ್ಯ ಸ್ಥಳ ಮಹಜರು ನಡೆಸುತ್ತಿರುವ ಪೊಲೀಸರು, ಆರೋಪಿಗಳಾದ ಲಕ್ಷ್ಮಣ್ ಹಾಗೂ ನಾಗರಾಜ್​​ನನ್ನ ಕರೆದುಕೊಂಡು ಆರ್​ಆರ್​ ನಗರಕ್ಕೆ ಬಂದಿದ್ದಾರೆ. ಅಂದು ಎಲ್ಲೆಲ್ಲಿಗೆ ಹೋಗಿದ್ದರು ಆ ಎಲ್ಲ ಸ್ಥಳಕ್ಕೆ ಹೋಗಿ ಮಹಜರು ಮಾಡಲಾಗುತ್ತಿದೆ. ಹೀಗಾಗಿ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದ ಬಳಿ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಲಾಗುತ್ತಿದೆ. ಇನ್ನು ದೇವಾಲಯದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಮಾಡಿ ಹೊಸ ಹೊಸ ಬಟ್ಟೆ ಖರೀದಿಸಿದ್ದ ಕಿರಾತಕರು.. ಆಮೇಲೆ ಏನ್ ಮಾಡಿದ್ರು?

https://newsfirstlive.com/wp-content/uploads/2024/06/darshan10.jpg

Load More