newsfirstkannada.com

‘ಬರೆ ಹಾಕಿ, ಲಾರಿಗೆ ತಲೆ ಹೊಡೆದು ಕೊಂದರು’- ರೇಣುಕಾಸ್ವಾಮಿ ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಆಫೀಸರ್‌!

Share :

Published June 14, 2024 at 5:15pm

Update June 14, 2024 at 5:29pm

    ಪೊಲೀಸ್​ ಅಧಿಕಾರಿ ಬಾಯಿಂದ ರೇಣುಕಾಸ್ವಾಮಿ ಕೊಲೆ ಸತ್ಯ ಬೆಳಕಿಗೆ

    ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ ಯುವಕನ ಕೊಲೆ ಕೇಸ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಈ ಆಡಿಯೋ ಕ್ಲಿಪ್

ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ರೇಣುಕಾಸ್ವಾಮಿಯನ್ನು ಆರೋಪಿಗಳು ಅದೆಷ್ಟು ಕ್ರೂರವಾಗಿ ಕೊಲೆ ಮಾಡಿದ್ದಾರೆ ಎಂಬುವುದರ ಬಗ್ಗೆ ಆಡಿಯೋ ಕ್ಲಿಪ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ನನ್ನ ಗಂಡನಿಗೆ ನಾನೊಬ್ಬಳೇ ಹೆಂಡ್ತಿ’- ಡಿವೋರ್ಸ್‌ ರಿಜೆಕ್ಟ್ ಬೆನ್ನಲ್ಲೇ ದುನಿಯಾ ವಿಜಯ್ ಪತ್ನಿ ಖಡಕ್ ಮಾತು

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಈಗ ಲಭ್ಯವಾಗಿರೋ ಪೊಲೀಸ್ ಅಧಿಕಾರಿಯೊಬ್ಬರದ್ದು ಎನ್ನಲಾದ ಆಡಿಯೋದಲ್ಲಿ  ದರ್ಶನ್ ಮತ್ತವರ ಗ್ಯಾಂಗ್ ರೇಣುಕಾಸ್ವಾಮಿಯನ್ನು ಅದೆಷ್ಟು ಕಠೋರವಾಗಿ ಸಾಯಿಸಿದ್ದಾರೆ ಎನ್ನುವ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ನ್ಯೂಸ್​ಫಸ್ಟ್​ಗೆ ಸಿಕ್ಕಿರೋ ಆಡಿಯೋ ಕ್ಲಿಪ್​ ಕೇಳಿದರೇ ಒಂದು ಕ್ಷಣ ಮೈ ಜುಮ್ಮೆನ್ನಿಸುವಂತಿದೆ. ಈ ಕೊಲೆ ಕೇಸ್​ನಲ್ಲಿ ಈಗಾಗಲೇ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್‌ ಅನ್ನು ಪೊಲೀಸರು ಅರೆಸ್ಟ್ ಮಾಡಿ ತೀವ್ರವಾದ ತನಿಖೆ ನಡೆಸುತ್ತಿದ್ದಾರೆ. ಇನ್ನು ವೈರಲ್​ ಆದ ಆಡಿಯೋದಲ್ಲಿ ಅಧಿಕಾರಿ ಮಾಡಿದ್ದ ಬಗ್ಗೆ ಎಳೆ ಎಳೆಯಾಗಿ ವಿವರಿಸಲಾಗಿದೆ.

ಇದನ್ನೂ ಓದಿ: ‘ಕೋಳಿ ಎಸೆದಂಗೆ ಗೋಡೆಗೆ ಎಸೆದಿದ್ದ’- ದರ್ಶನ್ ಕ್ರೌರ್ಯ ಎಳೆ ಎಳೆಯಾಗಿ ಬಿಚ್ಚಿಟ್ರಾ ಪೊಲೀಸ್ ಅಧಿಕಾರಿ?

ಅಪರಿಚಿತ: ಏನೋ ಅಷ್ಟೊಂದು ಸಾಕ್ಷಿ ಇದೆಯಾ 302 ಎಫ್ಐಆರ್​ಗೆ ಹೆಸರು ತರಬೇಕು ಅಂದ್ರೆ.
ಪೊಲೀಸ್: ಸುಖಾ ಸುಮ್ಮನೆ ಈ ಕೇಸ್​​ ಅನ್ನು ದಾಖಲು ಮಾಡಿಲ್ಲ. ಇದು ಲೈಫ್ ಅಲ್ವಾ.
ಅಪರಿಚಿತ: ಹೌದಾ.
ಪೊಲೀಸ್ : ಸುಮ್ಮನೆ ವಾರ್ನ್ ಮಾಡಿ ಬಿಟ್ಟಿದ್ದರೆ ಆಗೋಗಿತ್ತು.
ಅಪರಿಚಿತ: ಹುಡುಗರು ಮಾಡಿದ್ದಾರೆ ಅಂತಾರೆ ನಿಜನಾ?
ಪೊಲೀಸ್ : ಯಾರು ಆ ಹುಡುಗರಾ? ಎಲ್ಲರೂ ಸೇರಿ ಹೊಡೆದಿರೋದು, ಬರೆ ಎಲ್ಲಾ ಹಾಕಿದ್ದಾರಲ್ಲ.
ಅಪರಿಚಿತ: ಬರೆ ಹಾಕಿದ್ದಾರೆ ಮತ್ತೆ.
ಪೊಲೀಸ್: ಬರೆ ಹಾಕಿ, ಲಾರಿಗೆ ತಲೆಗೆ ಹೊಡೆದು ಎಲ್ಲಾ ಮಾಡಿದ್ದಾರೆ.
ಅಪರಿಚಿತ: ಲಾರಿಗಾ?
ಪೊಲೀಸ್: ಅಲ್ಲಿ ಸೀಸಿಂಗ್ ಗಾಡಿ ಇರತ್ತೆ. ಲಾರಿ ಬಸ್ ಎಲ್ಲಾ.
ಅಪರಿಚಿತ: ಹೂಂ.
ಪೊಲೀಸ್ : ಇವನಿಗೆ ಇರೋ ಬಾಡಿಗೆ, ಚಿಕ್ಕ ಹುಡುಗನಿಗೆ ಒಳ್ಳೆ ಕೋಳಿ ಎತ್ತಿಕೊಂಡು ಎಸದಂಗೆ ಎಸಿತಾನೆ.. ಗೋಡೆಗೆ.
ಅಪರಿಚಿತ: ಯಾರು?
ಪೊಲೀಸ್ : ದರ್ಶನ್
ಅಪರಿಚಿತ: ವಿಡಿಯೋ ಇದೆಯಾ.?
ಪೊಲೀಸ್: ಎಲ್ಲಾ ಸಿಸಿಟಿವಿ ಇದೆ.
ಅಪರಿಚಿತ: ಹೌದಾ..?
ಪೊಲೀಸ್ : ಇಲ್ಲಾಂದ್ರೆ ಸುಳ್ಳು ಹೇಳಕೆ ಆಗಲ್ಲ, ಎಂಥಾ ಹೈ ಪ್ರೆಶರ್ ಇದೆ ಗೊತ್ತಾ.? ಇನ್ಫ್ಲೂಯೆನ್ಸ್​ಗಳು
ಅಪರಿಚಿತ: ಹೌದಾ.?
ಪೊಲೀಸ್: ಎಷ್ಟು ಇನ್ಫ್ಲೂಯೆನ್ಸ್​ಗಳು ಗೊತ್ತಾ.. ಅವನ ಅರೆಸ್ಟ್​ ಮಾಡಬಾರದು ಅಂತಾ.
ಅಪರಿಚಿತ: ಕಾಂಗ್ರೆಸ್​ ಇರಲ್ಲ.. ಯಾಕಂದ್ರೆ ಹಿ ಇಸ್ ಎಗೆನೆಸ್ಟ್ ಇವರಲ್ಲ
ಪೊಲೀಸ್: ಬಟ್ ಇದರಲ್ಲಿ ಯಾರು ರಾಜಕೀಯ ತಂದಿಲ್ಲ. ಇನ್ಫ್ಲೂಯೆನ್ಸ್ ಹೈ ಪ್ರೆಶರ್ ಬಂತು
ಅಪರಿಚಿತ: ಹೌದಾ?
ಪೊಲೀಸ್: ಸಿಪಿ ಸಾಹೇಬ್ರಿಗೆ ಹೈ ಪ್ರೆಶರ್ ಬಂತು. ಅರೆಸ್ಟ್​ ಮಾಡಬೇಡಿ ಅರೆಸ್ಟ್​ ಮಾಡಬೇಡಿ ಅಂತಾ. ಯಾವುದಕ್ಕೂ ಜಗ್ಗಿಲ್ಲ. ಸುಮ್ಮನೆ ಎತ್ತಾಕಿಕೊಂಡು ಬಂದ್ರು.
ಅಪರಿಚಿತ: ಸಖತ್ ಸ್ಟ್ರಾಂಗ್.?
ಪೊಲೀಸ್: ಇನ್ನೂ ಇವತ್ತಿಂದ ಆಟ ಸ್ಟಾರ್ಟ್, 6 ದಿನ.
ಅಪರಿಚಿತ: ಮತ್ತೆ?
ಪೊಲೀಸ್: ಇವತ್ತಿಂದ ಎಲ್ಲಾ ಮೆಟಿರಿಯಲ್ ರಿಕವರಿ ಮಾಡೋಕೆ ಹೋಗಬೇಕು. ಆಮೇಲೆ ಮಹಜರ್ ಮಾಡಬೇಕು. ಎಲ್ಲಾ ಮಾಡಬೇಕು.
ಅಪರಿಚಿತ: ಅದು, ಇಲ್ಲಿ ಹೊಡೆದಿದ್ದಕ್ಕೆನು ಸತ್ತಿರೋದು ಅಲ್ವಾ.?
ಪೊಲೀಸ್: ಹೌದು ಹೌದು.
ಅಪರಿಚಿತ: ಇವನು ಇರೋ ಇದಕ್ಕೆ, ಅರಾಮಾಗಿ ವಾರ್ನಿಂಗ್ ಕೊಟ್ಟುಕೊಂಡು ಹೋಗಬಹುದಿತ್ತು.
ಪೊಲೀಸ್: ಅಲ್ಲಾ ಸಿಕ್ಕಪಟ್ಟೆ ಟಾರ್ಚರ್ ಮಾಡಿದ್ದಾರೆ. ರಾಡ್ ಅಲ್ಲಿ ಹೊಡೆದು. ಆ ಬೌನ್ಸರ್ ಗಳು ಹೊಡೆಯೋ ಏಟು. ತಡೆಯೋಕೆ ಆಗತ್ತಾ.? ಆ ಚಿಕ್ಕ ಹುಡುಗ. ಏನೋ ಕುಡಿದು ಬಂದು ಏನೋ ಮಾಡಿರೋದು ಹ್ಹಾ ಸುಮ್ಮನೆ ವಾರ್ನ್ ಮಾಡಿಬಿಟ್ಟಿದ್ರೆ, ಒಂದು ಸ್ಟೇಷನ್​ಗೆ ಕಂಪ್ಲೇಂಟ್ ಕೊಟ್ಟಿದ್ರೆ ಆಗ್ತಾ ಇತ್ತು. ಪೊಲೀಸ್ರು ಕರೆದು ವಾರ್ನ್ ಮಾಡ್ತಾ ಇದ್ರು.
ಪೊಲೀಸ್: ಒಟ್ಟು 13 ಜನ ಸೇರಿದ್ದರಲ್ಲ. ಬಟ್ ಬೇಲ್ ಸಿಗೋದು ತುಂಬಾ ಕಷ್ಟ.
ಅಪರಿಚಿತ: ಹೌದಾ?
ಪೊಲೀಸ್: ಒಂದು ವರ್ಷ ಎಳೆದುಕೊಂಡು ಹೋಗ್ತಾರೆ
ಅಪರಿಚಿತ: ಒಂದು ವರ್ಷ, ಮಿನಿಮಮ್ ಅಂದ್ರೆ 3 ತಿಂಗಳು ಹೊರಗೆ ಬರಲ್ಲ.
ಪೊಲೀಸ್: 3 ತಿಂಗಳಲ್ಲ 6 ತಿಂಗಳಾದ್ರೂ ಹೊರಗೆ ಬರಲ್ಲ.
ಅಪರಿಚಿತ: ಹೌದಾ?
ಪೊಲೀಸ್: ಸುಪ್ರಿಂಕೋರ್ಟ್​ಗೆ ಹೋದ್ರು ಹೊರೆಗೆ ಬರಲ್ಲ, ಅಲ್ಲೇ ಹೈಕೋರ್ಟ್‌ಗೂ ಸಿಗಲ್ಲ.
ಅಪರಿಚಿತ: ಹೌದಾ.?
ಪೊಲೀಸ್: ಬಾಸ್ ಪೋಸ್ಟ್ ಮಾಟರ್ಮ್​ನಲ್ಲಿ ಎಷ್ಟು ಭೀಕರ ಆಗಿದೆ ಗೊತ್ತಾ?
ಅಪರಿಚಿತ: ಥ್ರೋಟ್ ಕಟ್ಟಾಗಿದೆ, ನೋಸ್ ಕಟ್ಟಾಗಿದೆ.
ಪೊಲೀಸ್: ಹೌದು ಎಷ್ಟು ಬ್ರೂಟಲ್ ಮರ್ಡರ್ ಗೊತ್ತಾ ಇದು.
ಅಪರಿಚಿತ: ಅಷ್ಟೊಂದು ಸಿಟ್ಟು.. ಅಷ್ಟೊಂದು ಸಿಟ್ಟು ಏನಕ್ಕೆ ತೋರಿಸದ ಅಂತಾ ಗೊತ್ತಾಗಿಲ್ಲ
ಪೊಲೀಸ್: ಬಾಸ್ ಅವನು ರೂಡ್. ಅದು ಕುಡಿದು ಬಿಟ್ರೆ ಅವನ ಹಿಡಿಯೋಕೆ ಆಗಲಿಲ್ಲ. ಕುಡಿದ್ರಂತೆ ಅವನ ಹಿಡಿಯೋಕೆ ಆಗಲ್ಲ.
ಅಪರಿಚಿತ: ಹೂಂ
ಪೊಲೀಸ್: ಸುಮ್ಮನೆ ನೋಡ್ಬಿಟ್ಟು. ತಿರಗ ನೋಡ ಅಲ್ಲಿ ಆ ಹುಡುಗಿಗೂ ಹೊಡೆದಿದ್ದಾನೆ ಅಲ್ಲಿ.
ಅಪರಿಚಿತ: ಹ್ಹಾ
ಪೊಲೀಸ್: ಆ ಹುಡುಗಿಗೂ ಹೊಡೆದಿದ್ದಾನೆ.
ಅಪರಿಚಿತ: ಯಾರು?
ಪೊಲೀಸ್: ಆ ಪವಿತ್ರ ಗೌಡಗೆ
ಅಪರಿಚಿತ: ವಿಡಿಯೋದಲ್ಲಾ?
ಪೊಲೀಸ್: ಪವಿತ್ರ ಗೌಡಗೆ ಹೊಡೆದಿದಕ್ಕೆ ಆರ್ ಆರ್ ನಗರ ಆಸ್ಪತ್ರೆಯಲ್ಲಿ ದಾಖಲಾಗಿದ್ರು.
ಅಪರಿಚಿತ: ಹೌದಾ.?
ಪೊಲೀಸ್: ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ. ನಾವೇ ಮಾಡಿದ್ದು ಅಂತಾ ಬಂದು ಕಾಮಾಕ್ಷಿಪಾಳ್ಯಗೆ ಸರಂಡರ್ ಆಗಿ ಬಿಟ್ರು. ಅಲ್ಲಿ ಒಬ್ಬೊಬ್ಬರು ಒಂದೊಂದು ಸ್ಟೇಟ್ಮೆಂಟ್ ಕೊಟ್ಟುಬಿಟ್ಟರು.
ಅಪರಿಚಿತ: ಎಲ್ಲಿ ಸ್ಟೇಷನ್​ನಲ್ಲಿ..?
ಪೊಲೀಸ್: ಸ್ಟೇಷನ್​ನಲ್ಲಿ ನಾವು ಫೈನಾನ್ಸ್ ಮಾಡಿದ್ವಿ ಅಂತಾ ಒಬ್ಬ. ನಾವು ಸ್ಟೇಷನ್​ನಲ್ಲಿ ವಿಚಾರಣೆ ಮಾಡಬೇಕಾದ್ರೆ, ಒಬ್ಬೊಬ್ಬರನ್ನು ದೂರ ದೂರು ಕುರಿಸಿಬಿಟ್ಟುಬಿಟ್ಟು. ಒಂದು ರೂಂನಲ್ಲಿ ಒಬ್ಬರು. ಇನ್ನೊಂದು ರೂಂನಲ್ಲಿ ಒಬ್ಬರು. ಏನೋ ಅವನು ಹಿಂಗೆ ಹೇಳ್ತಾನಲ್ಲ ಅಂತಾ ಸುಮ್ಮನೆ ಕೇಳೋದು. ಆಗ ನಿಜ ಬಂದುಬಿಡ್ತತೆ. ಸ್ಟೇಷನ್ ಮೆಟ್ಟಿಲತ್ತಿದಾಗ ನಿಜ ಬಂದು ಬಿಡ್ತತೆ. ಅವರು ಏನ್ ತಿಳ್ಕೊಂಡು ಬಂದು ಬಿಡ್ತಿತ್ತೋ ಎಲ್ಲಾ ಉಲ್ಟಾ ಆಗತ್ತೆ.
ಅಪರಿಚಿತ: ಫೀಲ್ಮ್ ಥರಾ ಆಗಲ್ಲ
ಪೊಲೀಸ್: ಹ್ಹಾ ಫೀಲ್ಮ್ ಅಂದ್ರೆ
ಅಪರಿಚಿತ: ಅದು ಇನ್ನೊಂದು ಅದೆಂಗೆ ಒಪ್ಲಸ್ ರೋಟ್​ನಲ್ಲಿ ಎಸೆದ್ರು ಗೊತ್ತಾಗಲಿಲ್ಲ!
ಪೊಲೀಸ್: ಇನ್ನೇನು ಮಾಡ್ತಿರಾ? ಇನ್ನೂ ಎಷ್ಟು ದೂರ ಅಂತಾ ಎತ್ಕೊಂಡು ಹೋಗಬೇಕಾಗತ್ತೆ? ಏನೋ ಮಾಡೋಕೆ ಹೋಗಿ ಏನೇನೋ ಆಗೋಯ್ತು.
ಅಪರಿಚಿತ: ಹೂಂ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬರೆ ಹಾಕಿ, ಲಾರಿಗೆ ತಲೆ ಹೊಡೆದು ಕೊಂದರು’- ರೇಣುಕಾಸ್ವಾಮಿ ಕೊಲೆಯ ಇಂಚಿಂಚು ಮಾಹಿತಿ ಬಿಚ್ಚಿಟ್ಟ ಆಫೀಸರ್‌!

https://newsfirstlive.com/wp-content/uploads/2024/06/Darshan-Arrest.jpg

Load More