newsfirstkannada.com

ಹೈಫೈ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಈಗ ಜೈಲು ಹಕ್ಕಿ.. ಕಂಬಿ ಹಿಂದೆ ಹೋದ ಬೆನ್ನಲ್ಲೇ ಮೊದಲು ಮಾಡಿದ್ದೇನು?

Share :

Published June 21, 2024 at 9:57am

Update June 21, 2024 at 10:10am

  ಪರಪ್ಪನ ಅಗ್ರಹಾರ ಜೈಲಲ್ಲಿ ಒಂದು ದಿನ ಕಾಲ ಕಳೆದ ಪವಿತ್ರಾ ಗೌಡ

  ನಿನ್ನೆ ದಿನ ತಡವಾಗಿ ಜೈಲಿಗೆ ಬಂದಿದ್ದ ಪ್ರರಕಣದ ಎಲ್ಲಾ ಆರೋಪಿಗಳು

  ಪವಿತ್ರಾಗೌಡ ಇಂದು ಬೆಳಗ್ಗೆ ಎಷ್ಟು ಗಂಟೆಗೆ ಎದ್ದಿದ್ದಾರೆ ಗೊತ್ತಾ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಹಾಗೂ ಇನ್ನು ಕೆಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಜೈಲಿನಲ್ಲಿ ಒಂದು ದಿನ ಕಳೆದಿರುವ ಪವಿತ್ರಾ ಗೌಡ ಹಾಗೂ ಗ್ಯಾಂಗ್​​ಗೆ ಇಂದು ವಿಚಾರಣಾಧೀನ ಕೈದಿ ನಂಬರ್​ ನೀಡಲಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡ ಜೈಲಿನಲ್ಲಿ ಸರಿಯಾಗಿ ಊಟ ಮಾಡದೇ, ರಾತ್ರಿಯಲ್ಲಿ ನಿದ್ರೆ ಕೂಡ ಮಾಡದೆ ಚಡಪಡಿಸುತ್ತಿದ್ದಾರೆ. ಹೈಪೈಯಾಗಿ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಜೈಲು ಹಕ್ಕಿಯಾಗಿ ಸೆರೆವಾಸದಲ್ಲಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎದ್ದಿರುವ ಅವರು ಸಿಬ್ಬಂದಿ ನೀಡಿದ ಕಾಫಿ ಕುಡಿದಿದ್ದಾರೆ. ಮಹಿಳಾ ವಿಭಾಗದ ಕೊಠಡಿಯಲ್ಲಿ ಪವಿತ್ರಾ ಮೌನಕ್ಕೆ ಶರಣಾಗಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಯೋಗ ದಿನ.. ಉತ್ತಮ ಆರೋಗ್ಯಕ್ಕಾಗಿ ಯೋಗ..!

ಪ್ರಕರಣದ ಉಳಿದ ಆರೋಪಿಗಳನ್ನು ಜೈಲಿನ ಕ್ವಾರೆಂಟೈನ್ ಬ್ಯಾರಕ್​ಗೆ ಶಿಫ್ಟ್ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನ ಕೈದಿಗಳಿಗೆ ಜೈಲಿನ ಮೆನುವಿನಂತೆ ಬೆಳಗ್ಗೆ ಉಪಾಹಾರವಾಗಿ ಉಪ್ಪಿಟ್ಟು ಅನ್ನು ಜೈಲು ಸಿಬ್ಬಂದಿ ನೀಡಿದ್ದಾರೆ. ನಿನ್ನೆ ಜೈಲಿಗೆ ತಡವಾಗಿ ಬಂದ ಆರೋಪಿಗಳನ್ನು ಕರೆದುಕೊಂಡ ಬಂದ ಹಿನ್ನೆಲೆಯಲ್ಲಿ ಇಂದು ಪ್ರಕರಣದ ಎಲ್ಲ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಇಂದು 10 ಗಂಟೆಯ ನಂತರ ಅಧಿಕಾರಿಗಳು ನೀಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈಫೈ ಲೈಫ್ ಲೀಡ್ ಮಾಡಿದ್ದ ಪವಿತ್ರಾ ಗೌಡ ಈಗ ಜೈಲು ಹಕ್ಕಿ.. ಕಂಬಿ ಹಿಂದೆ ಹೋದ ಬೆನ್ನಲ್ಲೇ ಮೊದಲು ಮಾಡಿದ್ದೇನು?

https://newsfirstlive.com/wp-content/uploads/2024/06/PAVITRA.jpg

Load More