newsfirstkannada.com

ಪವಿತ್ರಾ ಕಣ್ಣೀರು ಹಾಕಿದ್ರು ಕಣ್ಣೆತ್ತಿ ನೋಡದ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಆಸ್ಪತ್ರೆಯಲ್ಲೇ ಏನ್ ನಡೀತು?

Share :

Published June 12, 2024 at 11:12am

    ಇದು ಪವಿತ್ರಾಗೌಡರ ಪ್ರಾಯಶ್ಚಿತವೋ, ಆತಂಕವೋ, ನೋವೋ?

    ತನ್ನ ಮುಂದೆ ಪವಿತ್ರಾ ನಡೆದುಕೊಂಡು ಹೋದರೂ ನೋಡಲಿಲ್ಲ

    ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಸಂಕಷ್ಟದ ಮೇಲೆ ಸಂಕಷ್ಟನಾ?

ಬೆಂಗಳೂರು: ನಟ ದರ್ಶನ್ ಆ್ಯಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿರುವ ಆರೋಪ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಈಗಾಗಲೇ ಪ್ರಕರಣ ಸಂಬಂಧ ದರ್ಶನ್ ಒಂದು ದಿನ ಜೈಲಿನಲ್ಲಿ ಕಳೆದಿದ್ದಾರೆ. ಅರೆಸ್ಟ್ ಆಗಿರುವ ಪವಿತ್ರಾ ಗೌಡರನ್ನ ಮೆಡಿಕಲ್ ಚೆಕಪ್​ಗೆ ಕರೆದುಕೊಂಡು ಬರುವಾಗ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಎ1 ಆರೋಪಿಯಾಗಿ ಅರೆಸ್ಟ್ ಆಗಿರುವ ಪವಿತ್ರಾ ಗೌಡ ಅವರನ್ನು ಪೊಲೀಸರು ಮೆಡಿಕಲ್ ಚೆಕಪ್​ಗೆಂದು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರ ಮುಂದೆಯೇ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ. ಬೌರಿಂಗ್ ಆಸ್ಪತ್ರೆಯ ವೈದ್ಯರೇ ಪವಿತ್ರಾ ಗೌಡ ಕಣ್ಣೀರು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದು ಈ ಸಂಬಂಧದ ವಿಡಿಯೋ ಕೂಡ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ: ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..

ಪವಿತ್ರಾ ಗೌಡ ಕಣ್ಣೀರು ಒರೆಸುತ್ತಾ, ತನ್ನ ವೇಲ್‌ನಲ್ಲಿ ‌ಮುಖ ಒರೆಸುತ್ತಾ ಬರುತ್ತಿದ್ದರು. ಈ ವೇಳೆ ದರ್ಶನ್ ಅಲ್ಲೇ ಇದ್ದರೂ ಪವಿತ್ರಾ ಗೌಡರನ್ನ ಮುಖವೆತ್ತಿ ನೋಡದೇ ಹಾಗೇ ಹೋದರು. ರೇಣುಕಾಸ್ವಾಮಿ ಕೊಲೆಯಾದ ಮೇಲೆ ಪವಿತ್ರಾಗೌಡ ದರ್ಶನ್ ಮುನಿಸಿಕೊಂಡಿದ್ರಂತೆ. ನಿನ್ನಿಂದಾಗಿ ಈ ಕೊಲೆ ಮಾಡುವಂತೆ ಆಯಿತೆಂದು ಅಂದು ಬೆಳಗ್ಗೆಯೇ ಕಿಡಿ ಕಾರಿದ್ರಂತೆ. ಅಲ್ಲದೇ ಇದೇ ವಿಚಾರವಾಗಿ ಪವಿತ್ರಾಗೌಡ ಮೇಲೆ ರೇಗಾಡಿದ್ದರು. ಆದರೆ ಇದೀಗ ಎದುರಗಡೆ ಪವಿತ್ರಾ ಗೌಡ ಕಣ್ಣೀರು ಒರೆಸುತ್ತಾ ಹೋಗುತ್ತಿದ್ದರೂ ತನ್ನ ಪಾಡಿಗೆ ಲಾಯರ್ ಜೊತೆ ದರ್ಶನ್ ಬ್ಯುಸಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಕಣ್ಣೀರು ಹಾಕಿದ್ರು ಕಣ್ಣೆತ್ತಿ ನೋಡದ ಚಾಲೆಂಜಿಂಗ್ ಸ್ಟಾರ್ ದರ್ಶನ್.. ಆಸ್ಪತ್ರೆಯಲ್ಲೇ ಏನ್ ನಡೀತು?

https://newsfirstlive.com/wp-content/uploads/2024/06/DARSHAN_PAVITRA-1.jpg

Load More