newsfirstkannada.com

BREAKING: ದರ್ಶನ್ ಗ್ಯಾಂಗ್‌ ಬಿಡಿಸಲು ಶಾಸಕ, ಸಚಿವರಿಂದ ಭಾರೀ ಯತ್ನ; ಖಡಕ್ SPP ಬದಲಾಗ್ತಾರಾ?

Share :

Published June 18, 2024 at 10:02pm

  ಉಮಾಪತಿ ಗೌಡರ ಮಾತು ಮಾತ್ರ ಕೆಲ ಕ್ಲ್ಯೂಗಳನ್ನ ಬಿಟ್ಟು ಕೊಡ್ತಿದೆ

  ಸರ್ಕಾರ ಯಾವುದೇ ಒಟ್ಟಡಕ್ಕೆ ಮಣಿಯಲ್ಲ- ಎಂ.ಬಿ ಪಾಟೀಲ್

  ದರ್ಶನ್ ಕೇಸ್ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಏನಂದ್ರು?

ಇದು ಮುಗಿಯದ ಅಧ್ಯಾಯ ಆಗಿದೆ. ಅಧ್ಯಾಯದಲ್ಲಿ ಕೆಲ ಪುಢಾರಿಗಳ ಗೆಸ್ಟ್​​ ಅಪಿರಿಯನ್ಸ್​​ ಕಾಣಿಸ್ತಿದೆ. ಮಾಡಿದ ಪಾಪ-ಕರ್ಮಕ್ಕೆ ದರ್ಶನ್​ರನ್ನ ಕಾನೂನು ಕುಣಿಕೆಯಿಂದ ರಕ್ಷಿಸಲು ಕೆಲ ಸಚಿವರು, ಶಾಸಕರು ಒತ್ತಡ ಹೇರ್ತಿದ್ದಾರೆ ಅನ್ನೋದು ಬಹಿರಂಗ ಸತ್ಯ. ಆದ್ರೆ, ಗೃಹ ಸಚಿವ ಡಾ.ಜಿ ಪರಮೇಶ್ವರ್​​​, ಇನ್ನೋರ್ವ ಸಚಿವ ಎಂ.ಬಿ.ಪಾಟೀಲ್​ ಇದೆಲ್ಲವೂ ಸುಳ್ಳು ಅಂತಿದ್ದಾರೆ.. ಆದ್ರೆ, ನಿರ್ಮಾಪಕ ಉಮಾಪತಿ ಗೌಡರ ಮಾತು ಮಾತ್ರ ಕೆಲ ಕ್ಲ್ಯೂಗಳನ್ನ ಬಿಟ್ಟು ಕೊಡ್ತಿದೆ.

ಈ ಕೇಡಿಗೆ ಈ ಹಾಡು ಕಿವಿ ಬೀಳೋದಕ್ಕೆ ಹೇಗ್​ ಸಾಧ್ಯ. ಬಿದ್ದಿದ್ದೆಲ್ಲವೂ ಕೆಂಚಾಲೋ ಮಂಚಾಲೋ ಅನ್ನೋ ಪುಡಿರೌಡಿಗಳ ಸಂಗದ ಸಾಂಗು. ಆ ಸಾಂಗಿಗೂ ಇವನ ವರ್ತನೆ, ದಪ್ಪ ಚರ್ಮದ ದರ್ಪ, ದೌಲತ್ತು ನೋಡಿ ಜೊತೆಗಿದ್ದವರು ಇದು ಗಬ್ಬೆದ್ದ ಗೊಬ್ಬರ ಅಂತ ಮಾನಕ್ಕಂಜಿ ದೂರಾಗಿದ್ದಾರೆ. ಕಾಲ ಬಂದಾಗ ಬಾಲ ಕಟ್​ ಮಾಡೋದಕ್ಕೆ ಕಾಯ್ತಿದ್ದವರೇನು ಕಡಿಮೆನಾ? ಈಗ ಪರಮ ಪಾಪದ ಕೃತ್ಯದ ಮಾಡಿ ಕಾಲಡಿ ಬಿದ್ದಿದ್ದಾನೆ. ಬಿದ್ದವನನ್ನ ತುಳಿಯದೇ ಬಿಡ್ತಾರಾ? ಪೊಲೀಸರು ಈಗ ಅದೇ ಕೆಲಸದಲ್ಲಿದ್ದಾರೆ.

ಇದನ್ನೂ ಓದಿ: ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್​ ಎಲ್ಲಿದ್ದಾರೆ?

ಒತ್ತಡ ಹೇರ್ತಿದ್ದವರ ಬಾಲ ಕಟ್​ ಮಾಡಿದ್ರಾ ಸಿಎಂ!

ದಾಸನ ದಾಸವಾಳ.. ಈ ಹೂವಿನ ಮಕರಂದಕ್ಕಾಗಿ ಬೆನ್ನುಬಿದ್ದ ದಾಸ, ಈಗ ಹಂಚಿನ ಮೇಲಿನ ದೋಸೆ.. ಜೊತೆಗಿದ್ದವರನ್ನ ಖಾರ ಮೆತ್ತಿ, ಪೊಲೀಸರು, ರೋಸ್ಟ್​​ ಮಾಡ್ತಿದ್ದಾರೆ. ಆದ್ರೆ, ಕೆಲ ಅಡ್ಡಕಸಬಿ ಗಿರಾಕಿಗಳು ಎಲ್ಲ ಕಡೆ ಪಾಪಾಸುಕಳ್ಳಿ ಇದ್ದೆ ಇರ್ತಾವೆ ನೋಡಿ. ಹಂಗೆ ರಾಜಕಾರಣಿಗಳಲ್ಲಿ ಕೆಲವರು ಈ ತಗಡಿನ ಪರ ಲಾಬಿ ಮಾಡ್ತಿರೋದು ವಿಧಾನಸೌಧದ ಗೋಡೆಗಳೇ ಪಿಸುಗುಡ್ತಿವೆ. ಹೆಂಗಾರು ಮಾಡಿ ಬಿಡಿಸಲು ಶತ-ಪಥ ಓಡಿದ್ದಾರಂತೆ.

ಹೀಗೆ ದರ್ಶನ್​ರನ್ನ ಕಾನೂನು ಕುಣಿಕೆಯಿಂದ ರಕ್ಷಿಸಲು ಕೆಲ ಸಚಿವರ ಒತ್ತಡ ಹೇರಿದ್ದಾರೆ ಅನ್ನೋ ವಿಚಾರ ಆ ಬಡ ಕುಟುಂಬವನ್ನೂ ಆತಂಕಕ್ಕೆ ತಳ್ಳಿದೆ. ಆದ್ರೆ, ಅಂಥದ್ದು ಏನು ಆಗಿಲ್ಲ ಅಂತ ಸಚಿವ ಎಂ.ಬಿ ಪಾಟೀಲ್​ ಸಾರಿಸಿದ್ದಾರೆ. ದರ್ಶನ್ ವಿಚಾರದಲ್ಲಿ ಯಾವ ಸಚಿವರೂ ಒತ್ತಡ ಹಾಕ್ತಿಲ್ಲ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಇದೇ ಮಾತನ್ನೇ ಗೃಹ ಸಚಿವ ಪರಮೇಶ್ವರ್​​​ ಸಹ ಉಲ್ಲೇಖಿಸಿದ್ದಾರೆ.

ಯಾವ ಮಿನಿಸ್ಟರ್ ಇದರಲ್ಲಿ ಭಾಗಿಯಾಗಿಲ್ಲ. ಯಾರೂ ಒತ್ತಡ ತಂದಿಲ್ಲ. ನಾವ್ಯಾರು ಒತ್ತಡಕ್ಕೆ ಮಣಿಯೋದಿಲ್ಲ.

ಡಾ.ಜಿ ಪರಮೇಶ್ವರ್, ಗೃಹ ಸಚಿವ

ದರ್ಶನ್ ಕೇಸ್ ಆಗಲಿ ಬೇರೆ ಯಾವ ಕೇಸ್ ಅದರೂ ನಮ್ಮ ಸರ್ಕಾರ, ಪೊಲೀಸ್ ಇಲಾಖೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಅದರ ಬಗ್ಗೆ ಸಂಶಯ ಬೇಕಾಗಿಲ್ಲ. ಯಾವುದೇ ಒತ್ತಡ ಇಲ್ಲಿ ಆಗೋದಿಲ್ಲ.

ಎಂ.ಬಿ ಪಾಟೀಲ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ

ಇನ್ನು, ನ್ಯೂಸ್​​ಫಸ್ಟ್​​ ಜೊತೆ ಎಕ್ಸ್​​ಕ್ಲೂಸಿವ್​​ ಆಗಿ ಮಾತ್ನಾಡಿದ ರಾಬರ್ಟ್​​ ಸಿನಿಮಾ ನಿರ್ಮಾಪಕ, ಅದೇ ಉಮಾಪತಿ ಗೌಡ, ಒತ್ತಡ ಹಾಕೋರಿಗೆ ನಾಚಿಕೆ ಆಗಬೇಕು ಅಂತ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಈ ವಿಚಾರದಲ್ಲಿ ಕಠೋರ ನಿರ್ಧಾರ

ಒಬ್ಬರು ಸಚಿವರು, ಹಲವು ಶಾಸಕರು ಸೇರಿ ದರ್ಶನ್ ಅವರನ್ನ ಬಿಡಿಸಲು ಬಹಳ ಒತ್ತಡ ಹಾಕುತ್ತಿದ್ದಾರೆ. ಇದರಿಂದ ನಮಗೆ ಬಹಳ ಬೇಜಾರ್ ಆಗಿದೆ. ಅವರ ಮನೆಯಲ್ಲೂ ಇದೇ ರೀತಿ ಸಾವಾದ್ರೆ ಬಿಟ್ಟು ಬಿಡ್ತಾರಾ?. ಅವರಿಗೆಲ್ಲ ನಾಚಿಕೆ ಆಗಬೇಕು. ಸಾರ್ವಜನಿಕವಾಗಿ ಛೀಮಾರಿ ಹಾಕಬೇಕು. ಆದ್ರೆ ಸಿಎಂ ಈ ವಿಚಾರದಲ್ಲಿ ಕಠೋರವಾದ ನಿರ್ಧಾರ ತೆಗೆದುಕೊಂಡಿದ್ದಾರೆ.

ಉಮಾಪತಿ ಗೌಡ, ನಿರ್ಮಾಪಕ

ವಿಚಿತ್ರ ನೋಡಿ, ಯಾರದ್ದು ಒತ್ತಡ ಇಲ್ಲ ಅಂತ ಸಿಎಂ ಆದಿಯಾಗಿ ಸಚಿವರು ಹೇಳ್ತಿದ್ರೆ, ಅದೇ ಪಕ್ಷದಿಂದ ಎಲೆಕ್ಷನ್​ ನಿಂತಿದ್ದ ಪರಾಜಿತ ಉಮಾಪತಿಗೌಡ್ರಗೆ ಈ ಬಗ್ಗೆ ಲೈಟ್​​ ಆಗಿ ಕ್ಲ್ಯೂ ಸಿಕ್ಕಂತೆ ಅನಿಸ್ತಿದೆ.. ಈ ಒತ್ತಡ ಹೇರೋದು ಏನಾದ್ರೂ ಮಾಡ್ಕೊಳ್ಳಿ ಆ ಕುಟುಂಬಕ್ಕೆ ನ್ಯಾಯ ಸಿಕ್ರಷ್ಟೇ ಸಾಕು.

ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

SPP ಆಗಿರುವ ಪಿ. ಪ್ರಸನ್ನ ಕುಮಾರ್

ದರ್ಶನ್ ರಕ್ಷಿಸಲು ಮತ್ತೊಮ್ಮೆ ಮುಂದಾಗಿರುವ ಸಚಿವರು, ಶಾಸಕರು ಪ್ರಕರಣದ ಅಧಿಕಾರಿಯನ್ನೇ ಬದಲಾವಣೆ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ಸಿಎಂ ಮೇಲೆ ಒತ್ತಡ ಹಾಕ್ತಿದ್ದಾರೆ. ಸಿಬಿಐ & ಎನ್ಐಎ ಎಎಸ್​​ಪಿಪಿ ಆಗಿದ್ದ ಪ್ರಸನ್ನ ಕುಮಾರ್ ಅವರನ್ನ ಬದಲಾಯಿಸಲು ಒತ್ತಡವಿದೆ. ಪ್ರಸನ್ನ ಕುಮಾರ್ ಇದ್ದರೆ ದರ್ಶನ್ ರಕ್ಷಣೆ ಅಸಾಧ್ಯ. ಈಗಾಗಲೇ ಅನೇಕ ಪ್ರಕರಣದಲ್ಲಿ ಪ್ರಸನ್ನ ಕುಮಾರ್ ಪ್ರೂವ್ ಮಾಡಿದ್ದಾರೆ. ವಿನಯ್ ಕುಲಕರ್ಣಿ ಕೇಸ್​ನಲ್ಲಿ ಸಿಬಿಐ ಆಗಿ ಪ್ರೂವ್ ಆಗಿದೆ. ಜೊತೆಗೆ ಎನ್ಐಎಯಲ್ಲಿ ಅನೇಕ ಮಂದಿ ಉಗ್ರರಿಗೆ ಶಿಕ್ಷೆ ಕೊಡಿಸಿದ್ದಾರೆ. ಅಲ್ಲದೇ ಯಾರ ಒತ್ತಡಕ್ಕೂ ಪ್ರಸನ್ನ ಕುಮಾರ್ ಮಣಿಯಲ್ಲ. ಹೀಗಾಗಿ ಅವರ ಬದಲಾಯಿಸಲು ಒತ್ತಡವಿದೆ. ನ್ಯೂಸ್ ಫಸ್ಟ್​ಗೆ ಪ್ರಕರಣದ ತನಿಖಾ ತಂಡದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ದರ್ಶನ್ ಗ್ಯಾಂಗ್‌ ಬಿಡಿಸಲು ಶಾಸಕ, ಸಚಿವರಿಂದ ಭಾರೀ ಯತ್ನ; ಖಡಕ್ SPP ಬದಲಾಗ್ತಾರಾ?

https://newsfirstlive.com/wp-content/uploads/2024/06/DARSHAN-2-2.jpg

Load More