newsfirstkannada.com

‘ಬಡವರ ಮನೆ ಮಕ್ಕಳನ್ನು ಬಳಸ್ಕೊಂಡ್ರು’- ದರ್ಶನ್‌ಗಾಗಿ ಜೈಲು ಸೇರಿದವರ ಕಥೆ ಕೇಳಿದ್ರೆ ಕರುಳು ಚುರ್ ಅನ್ನುತ್ತೆ!

Share :

Published June 23, 2024 at 10:20pm

  ಬಡವರ ಮನೆ ನೆಮ್ಮದಿಗೆ ಕೊಳ್ಳಿಯಿಟ್ಟಿತು ನಟ ದರ್ಶನ್​​ ಹುಚ್ಚು

  ಪತಿಯೂ ಇಲ್ಲ, ಮಗನೂ ಇಲ್ಲ, ಅನು ತಾಯಿಯ ಮೂಕ ರೋದನೆ

  ಆರೋಪಿ ಜಗ್ಗ, ನಂದೀಶ, ಅನು, ನಾಗನ ಕುಟುಂಬಗಳಿಗೆ ಯಾರು ದಿಕ್ಕು?

2011ರಲ್ಲಿ ಅತಿರಥ ಮಹಾರಥ ಸಾರಥಿ. ಇಂದು ಬಡವರ ಮನೆ ಮಕ್ಕಳನ್ನು ತನ್ನೊಟ್ಟಿಗೆ ಜೈಲು ಸೇರುವಂತೆ ಮಾಡಿರೋ ಕಣ್ಣೀರಿನ ಸಾರಥಿ. ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ ಜೊತೆ ಜೈಲುಪಾಲಾಗಿರೋ ಬಹುತೇಕ ಆರೋಪಿಗಳ ಕುಟುಂಬಗಳು ನೋವಿನ ಕೂಪದಲ್ಲಿ ಮುಳುಗಿ ತತ್ತರಿಸ್ತಿವೆ. ಕಣ್ಣೀರಿನಲ್ಲೇ ಕೈ ತೊಳೆಯುತ್ತಿದ್ದಾರೆ. ಆಟೋ ಓಡಿಸ್ತಿದ್ದ ಜಗ್ಗ, ಅನು ಹೆತ್ತವರ ಗೋಳಾಟ ಕರುಳು ಹಿಂಡುವಂತಿದೆ. ಕೇಬಲ್ ಎಳೆಯುತ್ತಿದ್ದ ನಂದೀಶನ ತಾಯಿಯ ಸ್ಥಿತಿ ಎಂಥವರಿಗೂ ದುಃಖ ತರಿಸುತ್ತೆ.

2011ರಲ್ಲಿ ದರ್ಶನ್ ನಟನೆಯ ಈ ಸಾರಥಿ ಸಿನಿಮಾ ತೆರೆಕಂಡ ವರ್ಷ. ಅದೇ ವರ್ಷವೇ ದರ್ಶನ್ ತನ್ನ ಪತ್ನಿಗೆ ಹಲ್ಲೆ ಮಾಡಿದ್ದ ಆರೋಪದಲ್ಲಿ ಜೈಲು ಸೇರಿ 28 ದಿನ ಜೈಲೂಟ ಮಾಡಿ ಹೊರಬಂದಿದ್ರು. ದರ್ಶನ್ ಹೊರಬಂದಾಗ ಸಾರಥಿ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸಾರಥಿ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳ ಬಳಗವನ್ನು ಹಿಮ್ಮಡಿಗೊಳಿಸ್ಕೊಂಡ ದರ್ಶನ್ ಸ್ಯಾಂಡಲ್‌ವುಡ್ ಬಾಕ್ಸಾಫೀಸ್ ಸಾರಥಿಯಾಗಿ ಹೊರಹೊಮ್ಮಿದ್ರು. ಆದ್ರೆ, ಅಂದು ಗೆಲುವಿನ ಸಾರಥಿಯಾಗಿದ್ದ ದರ್ಶನ್ ಇಂದು ಕಣ್ಣೀರಿನ ಸಾರಥಿಯಾಗಿದ್ದಾರೆ.

ದರ್ಶನ್ ಈಗ ಹತ್ತಾರು ಕುಟುಂಬಗಳ ಪಾಲಿಗೆ ಅಕ್ಷರಶಃ ಕಣ್ಣೀರನ ಸಾರಥಿಯಾಗಿಯಾಗಿದ್ದಾರೆ. ತನಗಾಗಿ ಬಂದವರ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರೋ ಡಿಗ್ಯಾಂಗ್‌ನ ಬಹುತೇಕ ಆರೋಪಿಗಳು ಬಡಮಧ್ಯಮ ಕುಟುಂಬದವರು. ಆಟೋ ಓಡಿಸ್ತಾ.. ಕೂಲಿ ಮಾಡುತ್ತಾ.. ಕೇಬಲ್ ಎಳೆಯುತ್ತಾ ಬಿಡಿಗಾಸು ದುಡಿಯುತ್ತಿದ್ದವರು. ಇಡೀ ಕುಟುಂಬ ಆ ಆರೋಪಿಗಳು ದುಡಿಯುತ್ತಿದ್ದ 500, ಸಾವಿರ ರೂಪಾಯಿಯನ್ನೇ ನೆಚ್ಚಿಕೊಂಡಿತ್ತು. ಮಗ ಒಂದು ದಿನ ದುಡಿಯೋಕೆ ಹೋಗದಿದ್ರೆ ಮೂರೊತ್ತಿನ ಊಟಕ್ಕೂ ಪರದಾಡೋ ಪರಿಸ್ಥಿತಿಯಿತ್ತು. ಆದ್ರೀಗ ಆ ಬಡವರ ಮನೆ ಮಕ್ಕಳು ದರ್ಶನ್‌ನಿಂದ, ದರ್ಶನ್‌ಗಾಗಿ, ದರ್ಶನ್‌ಗೋಸ್ಕರ ಜೈಲು ಸೇರಿದ್ದಾರೆ. ಇತ್ತ, ಮನೆಗೆ ಆಧಾರವಾಗಿದ್ದ ಮಕ್ಕಳು ಜೈಲುಪಾಲಾಗಿರೋದು. ಕುಟುಂಬಗಳು ದಿಕ್ಕೆಟ್ಟು ಕೂರುವಂತೆ ಮಾಡಿದೆ. ಅವರ ನೋವು, ದುಃಖ, ಕಣ್ಣೀರು, ಯಾತನೆ ಯಾವ ಪಾಪಿಗೂ ಬೇಡ.

ಜಗದೀಶ. ಚಿತ್ರದುರ್ಗದಲ್ಲಿ ಆಟೋ ಓಡಿಸುತ್ತಾ ಮಳೆ, ಗಾಳಿ, ಬಿಸಿಲು, ಧೂಳು ಯಾವುದನ್ನೂ ಲೆಕ್ಕಿಸದೆ ಕಷ್ಟಪಟ್ಟು ದುಡಿದು ತನ್ನ ಮನೆಯ ಊಟ, ಬಟ್ಟೆಗೆ ಆಧಾರವಾಗಿದ್ದ. ಆದ್ರೀಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಗದೀಶ್ ಜೈಲು ಸೇರಿದ್ದಾನೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಈ ಜಗದೀಶ್​ ಕೇಸ್‌ನ ಆರನೇ ಆರೋಪಿಯಾಗಿ ಪರಪ್ಪನ ಆಗ್ರಹಾರ ಸೇರಿದ್ದಾನೆ. ಇತ್ತ ಈ ಜಗದೀಶನ ಕುಟುಂಬ ನೋವಿನ ಕೂಪದಲ್ಲಿ ಮುಳುಗಿದೆ. ಮಗ ಜೈಲು ಸೇರಿರೋ ನೋವು ಒಂದು ಕಡೆಯಾದ್ರೆ. ಆತನಿಲ್ಲದೇ ಮನೆ ಸಂಬಾಳಿಸಲಾಗದ ಸಂಕಷ್ಟ ಮತ್ತೊಂದು ಕಡೆ. ಇನ್ನೂ ಘೋರ ಸ್ಥಿತಿ ಅಂದ್ರೆ, ಜಗದೀಶನ ತಾಯಿಗೆ ನರ ಬ್ಲಾಕ್ ಆಗಿದೆಯಂತೆ. ಪಾಪ ಈ ಹೆತ್ತಕರುಳು ಈಗ ಮಾತ್ರೆ, ಔಷಧಿಗಳನ್ನೂ ಖರೀದಿಸೋದಕ್ಕೂ ದುಡ್ಡಿಲ್ಲದೆ ಪರದಾಡುವಂತಾಗಿದೆ.

ಇದನ್ನೂ ಓದಿ: ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ದರ್ಶನ್ ಒಬ್ಬ ಸೆಲೆಬ್ರಿಟಿ. ಹುಟ್ಟು ಸಿರಿವಂತನಲ್ಲದೇ ಹೋದ್ರೂ ಬಣ್ಣ ಹಚ್ಚಿ ಮಿಂಚಿದ ಬಳಿಕ ಕೋಟಿ ಕೋಟಿ ಕಾಸು ಮಾಡ್ಕೊಂಡಿದ್ದಾನೆ. ಈತನ ಮನೆಯಲ್ಲಿ ಕಾಲಿಗೊಬ್ಬ ಆಳುಗಳಿದ್ದಾರೆ. ಮಿಡಲ್ ಕ್ಲಾಸ್ ಫ್ಯಾಮಿಲಿಗಳಲ್ಲಿ ಮಕ್ಕಳಿಗೆ ಆಟದ ಸಾಮಾನು ತಂದುಕೊಡುವಂತೆ. ಈತ ತನ್ನ ಕ್ರೇಜ್‌ಗೆ ಹತ್ತಾರು ಲಕ್ಷುರಿ ಕಾರ್‌ಗಳನ್ನು ತಂದು ಶೋ ಅಫ್​ಗೆ ಇಟ್ಕೊಂಡಿದ್ದಾನೆ. ಈತ ಜೈಲಿಗೆ ಹೋದ್ರೆ ಇವನ ಕುಟುಂಬಕ್ಕೆ ಕೇವಲ ನೋವುಂಟಾಗುತ್ತೇ ಹೊರತು, ಬದುಕು ಸಾಗಿಸೋದಕ್ಕೆ. ಊಟ, ಬಟ್ಟೆ, ಔಷಧಿಗೆ ಹೆಂಗಪ್ಪಾ ಅನ್ನೋ ಪರಿಸ್ಥಿತಿಯಿಲ್ಲ. ಆದ್ರೆ, ಈ ನಟನನ್ನ ನಂಬಿಕೊಂಡು ನಟನ ಮೇಲಿನ ಅಭಿಮಾನಕ್ಕೆ ಬಂದಿದ್ದಾರೆ.

ಜಗದೀಶನ ಮನೆಯ ಪರಿಸ್ಥಿತಿ, ಹೆತ್ತಕರುಳಿನ ಕಣ್ಣೀರಿನ ಸಾರಥಿಯಲ್ಲದೇ ಮತ್ತೇನು!

‘ಅಯ್ಯೋ ದೇವರೇ ಯಾಕ್ ಹೀಗೆ ಮಾಡ್ಬಿಟ್ಪಪ್ಪಾ… ನನ್‌ ಮಗ ಅಲ್ಲಿಗೆ ಹೋಗಲೇಬಾರ್ದಿತ್ತು’ ಎಂದು ಎದೆಯೊಳಗೆ ಸುಡುತ್ತಿರೋ ನೋವಿನ ಜ್ವಾಲೆಯಲ್ಲಿ ತತ್ತರಿಸ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ ಜೊತೆ ಕಂಬಿಹಿಂದೆ ಸೇರಿರೋ ಜಗ್ಗ ಅಲಿಯಾಸ್ ಜಗದೀಶ್​ ಯಾರ ತಂಟೆಗೂ ಹೋಗದೇ ನಿತ್ಯ ಆಟೋ ಓಡಿಸ್ಕೊಂಡು ಕೆಲಸಕ್ಕೆ ಹೋಗಿ 800 ರೂಪಾಯಿ ತಗೊಂಡು ಮನೆಗೆ ಬರ್ತಿದ್ನಂತೆ. ಆ 800 ರೂಪಾಯಿಯಲ್ಲೇ ಮನೆಯವರ ಊಟ, ಔಷಧಿ ಖರ್ಚು ಎಲ್ಲವೂ ನಡೀತಿತ್ತಂತೆ. ಅಲ್ಲದೇ, ಜಗದೀಶನ ತಾಯಿಗೆ ನರದ ತೊಂದರೆ ಇದೆಯಂತೆ. ಅದಕ್ಕಾಗಿ ಮಾತ್ರೆ, ಔಷಧಿಯನ್ನೂ ಜಗದೀಶ ತಂದುಕೊಂಡಿದ್ನಂತೆ. ಆದ್ರೀಗ ತಾನು ಮಾತ್ರೆ ನುಂಗದಿದ್ರೂ ಪರ್ವಾಗಿಲ್ಲ, ನೋವು ಅನುಭವಿಸಿಕೊಂಡೇ ಇದ್ದುಬಿಡ್ತೀನಿ ಎನ್ನುತ್ತಿರೋ ತಾಯಿಗೆ ಕಾಡುತ್ತಿರೋ ಅತಿದೊಡ್ಡ ನೋವೇನು ಅಂತ ಕೇಳಿದ್ರೆ ನಿಮಗೂ ದುಃಖ ಹುಮ್ಮಳಿಸುತ್ತೆ.

ನೋಡೋಕೆ ದುಡ್ಡಿಲ್ಲ.. ಬೇಲ್‌ಗೆ ಲಾಯರ್ ಇಡೋಕೆ ಕಾಸಿಲ್ಲ

ಈ ಜಗದೀಶ ತನ್ನ ಆಟೋ ಹಿಂದೆ ನಟ ದರ್ಶನ್‌ನ ಫೋಟೋ ಹಾಕ್ಕೊಂಡಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಆ ಆಟೋ ಕೂಡ ಈಗ ಸೀಜ್ ಆಗಿದೆ. ದರ್ಶನ್‌ನಾಗಿ ಜೈಲಿಸೇರಿರೋ ಮಗನನ್ನು ನೋಡಿಕೊಂಡು ಧೈರ್ಯ ತುಂಬಿ ಬರೋಣ ಅಂದ್ರೂ ಈ ತಾಯಿಯ ಬಳಿ ದುಡ್ಡಿಲ್ಲವಂತೆ. ಇನ್ನು, ತನ್ನ ಮಗನ ಪರವಾಗಿ ಲಾಯರ್ ನೇಮಿಸೋ. ಮಗನನ್ನು ಬೇಲ್‌ ಮೇಲೆ ಬಿಡಿಸೋಕೆ ಖರ್ಚು ಮಾಡೋಕೆ ದುಡ್ಡು ಎಲ್ಲಿಂದ ಹುಟ್ಟಬೇಕು. ನಮ್ ಮನೆಯ ಪರಿಸ್ಥಿತಿ ನೋಡಿದ್ರೆ ನೇಣು ಹಾಕ್ಕೋಬೇಕು ಅನಿಸುತ್ತೆ ಎಂಬ ಜಗದೀಶನ ಸಹೋದರನ ನೋವು, ದುಗುಡದ ಮಾತೇ ಎಲ್ಲವನ್ನೂ ಹೇಳ್ತಿದೆ.

ದರ್ಶನ್ ಗ್ಯಾಂಗ್ ವಿರುದ್ಧದ ಮರ್ಡರ್‌ ಕೇಸ್‌ನಲ್ಲಿ ತನಗೆ ಅರಿವಿಲ್ಲದೇ ಪರೋಕ್ಷವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗ್ತಿರೋ ಅನುಕುಮಾರ ಕೇಸ್‌ನಲ್ಲಿ ಏಳನೇ ಆರೋಪಿಯಾಗಿ ಜೈಲುಸೇರಿದ್ದಾನೆ. ಈತ ಚಿತ್ರದುರ್ಗದಲ್ಲಿ ಆಟೋ ಓಡಿಸಿಕೊಂಡು ಕಷ್ಟದಲ್ಲಿ ಬದುಕು ಸಾಗಿಸ್ತಿದ್ನಂತೆ. ಈತನ ಬಂಧನದ ಬಳಿಕ ಆಘಾತಗೊಂಡಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ಮತ್ತು ತನ್ನ ಗಂಡನನ್ನು ಕಳೆದುಕೊಂಡಿರೋ ಈ ತಾಯಿಗೆ ಸಂಕಷ್ಟ, ಯಾತನೆಯನ್ನು ಅನುಭವಿಸೋದಕ್ಕಲ್ಲ. ಕಲ್ಪಿಸಿಕೊಳ್ಳೋಕೂ ಸಾಧ್ಯವಿಲ್ಲ. ದರ್ಶನ್‌ನಿಂದಾಗಿ ಈ ತಾಯಿಯ ಮಗ ಜೈಲುಪಾಲಾಗಿದ್ರೆ. ಇವರ ಪತಿಯ ಸಾವಿಗೂ ದರ್ಶನ್ ಪರೋಕ್ಷವಾಗಿ ಕಾರಣರಾಗಿದ್ದಾರೆ. ಅನುಕುಮಾರ ಈ ಕೇಸ್‌ನಲ್ಲಿ ನೇರವಾಗಿ ಭಾಗಿಯಾಗಿಲ್ಲ ಎನ್ನಲಾಗುತ್ತಿದ್ರೂ ಆತ ತಗ್ಲಾಕ್ಕೊಂಡಿದ್ದಾನೆ. ಅವರಿವರ ಮನೆಯಲ್ಲಿ ಕೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದೇ ಎಂದು ಗೋಳಾಡುತ್ತಿರೋ ಅನುಕುಮಾರನ ತಾಯಿಯ ಒಂದೊಂದು ಮಾತು ಕೂಡ ಕಣ್ಣೀರು ತರಿಸುವಂತಿದೆ. ಆಟೋ ಚಾಲಕ ಅನುಕುಮಾರ ಈ ದರ್ಶನ್‌ಗಾಗಿ ಎಂಥಾ ಸ್ಥಿತಿ ತಂದುಕೊಂಡುಬಿಟ್ಟ ಅನ್ನಿಸುತ್ತೆ. ಅಲ್ಲದೇ, ಮಗ ಯಾವ ತಪ್ಪನ್ನೂ ಮಾಡಿಲ್ಲ ಆತನನ್ನ ಬಿಡಿಸಿಕೊಡಿ ಅಂತ ಈ ತಾಯಿ ಅಂಗಲಾಚೋದನ್ನು ನೋಡಿದ್ರೆ ಎಂಥಾ ಪಾಪಿಯ ಮನಸ್ಸೂ ಕೂಡ ಮಿಡಿಯದೇ ಇರದು.

ಇದನ್ನೂ ಓದಿ: ದರ್ಶನ್ ಗ್ಯಾಂಗ್​ನಿಂದ ಸೀಕ್ರೆಟ್ ಮೆಂಟೇನ್.. ಈ ಪ್ರಶ್ನೆಗಳಿಗೆ ಇನ್ನೂ ಪೊಲೀಸರಿಗೆ ಉತ್ತರ ಸಿಕ್ಕಿಲ್ಲ

ಇನ್ನು, ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಡಿಗ್ಯಾಂಗ್‌ ಜೊತೆ ಜೈಲು ಸೇರಿರೋ ಐದನೇ ಆರೋಪಿ ನಂದೀಶನ ಕುಟುಂಬ. ಈ ಕುಟುಂಬ ಇರೋ ಸ್ಥಿತಿಯೇ ಎಲ್ಲವನ್ನೂ ಹೇಳುತ್ತೆ. ಅಸಲಿಗೆ ಆರೋಪಿ ನಂದೀಶ ಮರ್ಯಾದೆಗೆ ಅಂಜಿ ಬದುಕುತ್ತಿದ್ದನಂತೆ. ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿಯಾಗಿರೋ ನಂದೀಶನ ಕುಟುಂಬಸ್ಥರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ 8 ವರ್ಷಗಳ ಹಿಂದೆ ಸಿಲಿಕಾನ್​ ಸಿಟಿ ಬೆಂಗಳೂರಿಗೆ ಬಂದು ಕೇಬಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂದೀಶ ಈಗ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್‌ ಜೊತೆ ಬಂಧನವಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.

ಮೊದಲೇ ಕಡುಕಷ್ಟದ ಜೀವನ ಸಾಗಿಸ್ತಿದ್ದ ನಂದೀಶನ ಕುಟುಂಬವೀಗ ಮನೆ ನಿಭಾಯಿಸೋದು ಹೇಗೆ ಅಂತ ಚಿಂತಿಸೋದಾ? ಮನೆಗೆ ಆಧಾರವಾಗಿದ್ದ ಮಗ ಜೈಲಿಗೆ ಹೋಗಿರೋದ್ರ ಬಗ್ಗೆ ಚಿಂತಿಸೋದಾ.? ಈ ತಾಯಿಗೆ ಅಸ್ತಮಾ ಬೇರೆ ಇದೆಯಂತೆ. ಮಗನನ್ನ ನೋಡ್ಬೇಕು ಅಂತ ತಾಯಿ ಭಾಗ್ಯಮ್ಮ ಜೀವಕೈಲಿಡಿದು ಕಾಯ್ತಿದ್ದಾರೆ. ಆದ್ರೆ, ಜೈಲಲ್ಲಿರೋ ನಂದೀಶನನ್ನ ನೋಡಿಕೊಂಡು ಬರೋಣ ಅಂದ್ರೂ ದುಡ್ಡಿಲ್ಲ ಸ್ವಾಮಿ ಅಂತ ನಂದೀಶ್ ಸಹೋದರಿ ಕಣ್ಣೀರಾಗಿದ್ದಾರೆ. ಮಂಡ್ಯದ ನಂದೀಶ್ ಕುಟುಂಬಕ್ಕೆ ಬೆಂಗಳೂರಿಗೆ ಬಂದು ಜೈಲಲ್ಲಿರೋ ಮಗನ ಮುಖ ನೋಡಿಕೊಂಡು ಹೋಗೋದಕ್ಕೂ ದುಡ್ಡಿಲ್ಲ ಅನ್ನೋದು ಈ ಅಭಿಮಾನದ ಹುಚ್ಚಿನ ಪ್ರತಿರೂಪದಂತಿದೆ. ಆ ನಂದೀಶನಿಗೆ ತನಗೆ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ದರ್ಶನ್ ಮೇಲಿನ ಹುಚ್ಚು ಅಭಿಮಾನ ಮಾತ್ರ ಕಡಿಮೆ ಆಗಿರ್ಲಿಲ್ವಂತೆ.

ಆ ದರ್ಶನ್‌ ತನ್ನ ಜೊತೆ ಈತನನ್ನೂ ಜೈಲು ಸೇರುವಂತೆ ಮಾಡಿದ್ದಾನೆ. ಇತ್ತ ಮಗನನ್ನು ನೋಡೋಕೆ ಹೋಗಲು ದುಡ್ಡಿಲ್ಲ. ಲಾಯರ್ ನೇಮಿಸೋದಕ್ಕೂ ದುಡ್ಡಿಲ್ಲದೆ ಪರದಾಡುತ್ತಿರೋ ನಂದೀಶನ ಕುಟುಂಬದ ಸ್ಥಿತಿಗೆ ಈ ದರ್ಶನನೇ ಸಾರಥಿ. ದರ್ಶನ್‌ ಈ ಕುಟುಂಬಗಳ ಕಣ್ಣೀರಿನ ಸಾರಥಿ. ದರ್ಶನ್ ಒಬ್ಬ ಸೆಲೆಬ್ರಿಟಿ. ದುಡ್ಡಿದೆ, ಪ್ರಭಾವಿಗಳ ಬಲವಿದೆ. ಟಾಪ್ ಲೆವೆಲ್ ಲಾಯರ್ ಇಟ್ಟು ಬಚಾವಾಗೋಕೆ ತಾಕತ್ತಿದೆ. ಆದ್ರೆ, ದರ್ಶನ್‌ನೊಟ್ಟಿಗೆ ಜೈಲುಸೇರಿರೋ ಆ ಬಡವರ ಮನೆ ಮಕ್ಕಳ ಗತಿಯೇನು? ದರ್ಶನ್‌ನನ್ನೇ ನಂಬಿಕೊಂಡು 15 ವರ್ಷ ಜೊತೆಗಿದ್ದವನ ಕುಟುಂಬದ ಸ್ಥಿತಿ ಹೇಗಿದೆ? ಹೇಳ್ತೀವಿ ಸ್ಮಾಲ್ ಬ್ರೇಕ್‌ನ ಬಳಿಕ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಡವರ ಮನೆ ಮಕ್ಕಳನ್ನು ಬಳಸ್ಕೊಂಡ್ರು’- ದರ್ಶನ್‌ಗಾಗಿ ಜೈಲು ಸೇರಿದವರ ಕಥೆ ಕೇಳಿದ್ರೆ ಕರುಳು ಚುರ್ ಅನ್ನುತ್ತೆ!

https://newsfirstlive.com/wp-content/uploads/2024/06/cry.jpg

Load More