ಪ್ರತಾಪ್ ಸಿಂಹ ವಿರುದ್ಧ ಸಿಡಿದೆದ್ದ ಮಾಜಿ ಸಚಿವ ರೇಣುಕಾಚಾರ್ಯ
ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡರು ನಿಲ್ಲದ ಮಾತಿನ ಯುದ್ಧ
ನೋಟಿಸ್ಗೆಲ್ಲಾ ಹೆದರ್ತಿನಾ ಎಂದ ಮಾಜಿ ಸಚಿವ ರೇಣುಕಾಚಾರ್ಯ
ಬಿಜೆಪಿಯೊಳಗಿನ ಅಂತರ್ಯುದ್ಧ ನಿಲ್ಲಿಸಲು ಅದೆಷ್ಟೇ ಕಸರತ್ತು ನಡೆಸಿದ್ರೂ, ಕಮಲ ಮಾತ್ರ ಮಾತಿನ ಕೆಸರಲ್ಲಿ ಮುಳುಗ್ತಿದೆ. ಕ್ರಿಯೆಗೆ ಪ್ರತಿಕ್ರಿಯೆ, ಏಟಿಗೆ ಎದಿರೇಟು, ಕೇಸರಿ ಸೇನೆಯಲ್ಲಿ ಘಾಟು ಎಬ್ಬಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಮನದ ಗರ್ಭದಲ್ಲಿ ಹುದುಗಿದ್ದ ಜ್ವಾಲಾಮುಖಿ ಮಾತಿನ ಮೂಲಕವೇ ಸ್ಫೋಟಗೊಳ್ತಿದೆ. ವಿಧಾನಸಭೆ ಸೋಲಿನ ಬೆನ್ನಲ್ಲೆ ಸಿಡಿಯುತ್ತಿರುವ ಬಿಜೆಪಿಯಲ್ಲಿನ ಬಣಗಳ ಬಡಿದಾಟ, ಬಲಿಷ್ಠ ಹೈಕಮಾಂಡ್ ನಿಯಂತ್ರಣವನ್ನೂ ಮೀರಿದೆ.
ನೋಟಿಸ್ ಕೊಟ್ರು ಸುಮ್ಮನಾಗದ ರೇಣುಕಾಚಾರ್ಯ!
ಚುನಾವಣೆ ಫಲಿತಾಂಶ ಬಂದು ಇವತ್ತಿಗೆ ಬರೊಬ್ಬರಿ 50 ದಿನ. ಬಿಜೆಪಿ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದು 50 ದಿನ. ಕುಸಿದಿದ್ದು ಕೂಡ 50 % ಸೀಟ್ಗಳು. ಹೀಗೆ ಪಾತಾಳಕ್ಕಿಳಿದ ಸೀಟುಗಳ ಕಾರಣಕ್ಕೆ ಬಿಜೆಪಿಯಲ್ಲಿ ಸಿಟ್ಟು ಸ್ಫೋಟಗೊಂಡಿದೆ. ನಾಯಕರ ಬಾಯಿಗೆ ಈಗ ಬೀಗ ಹಾಕುವ ಪ್ರಯತ್ನಗಳ ಕೈ ಸೋತಿವೆ. ನಿನ್ನೆಯಷ್ಟೇ ಬಿಜೆಪಿ ಪ್ರಮುಖರ ಸಭೆಯಲ್ಲಿ ಹದ್ದುಬಸ್ತಿನ ಸರಹದ್ದಿನ ಗೆರೆ ಎಳೆದ್ರೂ ಕೂಡ ಮಾಜಿ ಸಚಿವ ರೇಣುಕಾಚಾರ್ಯ ಮಾತ್ರ ಮತ್ತೆ ಗುಡುಗಿದ್ದಾರೆ..
ಯಡಿಯೂರಪ್ಪನವರು ಕರೆ ಮಾಡಿದ್ದಕ್ಕೆ ಭೇಟಿ ಆಗಿದ್ದೀನಿ. ಬಿಎಸ್ವೈರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಬಿಜೆಪಿಗೆ ಈ ಸ್ಥಿತಿ ಬಂದಿದೆ. ಬಿಎಸ್ವೈ ವಿರುದ್ಧ ಮಾತಾಡಿದವರಿಗೆ ರಾಜ ಮರ್ಯಾದೆ ಸಿಗ್ತಿದೆ ಅಂತ ಗುಡುಗಿದ್ರು. ಅಲ್ಲದೆ, ನೋಟಿಸ್ ಕೊಟ್ಟಿದ್ದಕ್ಕೆ ಕೊಟ್ಟ ಉತ್ತರ ಮಾತ್ರ ಮುಟ್ಟಿನೋಡಿಕೊಳ್ಳುವಂತಿತ್ತು.
ರೇಣುಕಾಚಾರ್ಯ, ಮಾಜಿ ಸಚಿವ
‘ನೋಟಿಸ್ಗೆಲ್ಲಾ ಹೆದರ್ತಿನಾ?’ ‘ಉಳಿದವರಿಗೆ ನೋಟಿಸ್ ಎಲ್ಲಿ?’
ಮಾಜಿ ಸಚಿವ ರೇಣುಕಾಚಾರ್ಯ ಮಾತಿಗೆ ಇವತ್ತು ಆಹಾರ ಆಗಿದ್ದು ಸಂಸದ ಪ್ರತಾಪ್ ಸಿಂಹ. ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಕಿಡಿ ಹೊತ್ತಿಸಿದ್ದ ಸಿಂಹ ವಿರುದ್ಧ ರೇಣುಕಾಚಾರ್ಯ ಘರ್ಜಿಸಿದ್ದಾರೆ. ಲೋಕಸಭಾ ಸದಸ್ಯರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ವಾ ಅಂತ ಬಾಂಬ್ ಸಿಡಿಸಿದ್ದಾರೆ..
‘ಬಿಎಸ್ವೈ ವಿರುದ್ಧ ಮಾತಾಡಿದ್ರೆ ಮರ್ಯಾದೆ’ ‘ದಳ ಜೊತೆ ಸಿಂಹ ಹೊಂದಾಣಿಕೆ’
ಒಬ್ರು ಗ್ಯಾರಂಟಿ ಅಂದ್ರೆ ಇನ್ನೊಬ್ರು ಹೊಂದಾಣಿಕೆ ರಾಜಕಾರಣದತ್ತ ಬೊಟ್ಟು ಮಾಡ್ತಿದ್ದಾರೆ. ಇದನ್ನ ಒಪ್ಪದ ಮತ್ತೊಂದು ಬಣ ಅತಿಯಾದ ಪ್ರಯೋಗವೇ ಸೋಲಿಗೆ ಕಾರಣ ಕೊಡ್ತಿದೆ. ಒಟ್ಟಾರೆ, ಬಿಜೆಪಿ ಸೋಲಿಗೆ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚಲು ನಾಯಕರು ಪರದಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ