newsfirstkannada.com

ಜೈಲಿನಲ್ಲಿ ತಮ್ಮನ ನೋಡಿ ತುಂಬಾ ನೋವಾಯಿತು -ವಕೀಲರ ನೇಮಿಸದಕ್ಕೆ ನಂದೀಶ್ ಅಕ್ಕ ಕಣ್ಣೀರು

Share :

Published July 4, 2024 at 3:03pm

    ದರ್ಶನ್ ಅಂಡ್ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್

    ತಂದೆ, ತಾಯಿ, ಅಕ್ಕ ಹಾಗೂ ಅಕ್ಕನ ಮಕ್ಕಳಿಂದ ನಂದೀಶ್​ನ ಭೇಟಿ

    ನಂದೀಶ್ ಪರವಾಗಿ ವಕೀಲರನ್ನ ನೇಮಿಸದ ನಟ ದರ್ಶನ್

ಮಂಡ್ಯ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಐದನೇ ಆರೋಪಿ ನಂದೀಶ್​ನನ್ನು ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತಂದೆ, ತಾಯಿ, ಅಕ್ಕ ಹಾಗೂ ಅಕ್ಕನ ಮಕ್ಕಳು ಭೇಟಿ ಮಾಡಿದ್ದಾರೆ.

ನಂದೀಶ್ ಭೇಟಿ ಬಳಿಕ ತಾಯಿ ಭಾಗ್ಯಮ್ಮರ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದೆ. ಮಗನ ಬಂಧನದಿಂದ ಭಾಗ್ಯಮ್ಮ ಆತಂಕಗೊಂಡು ಅಸ್ವಸ್ಥರಾಗಿದ್ದರು. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ನಂದೀಶ್ ಅಕ್ಕ.. ನನ್ನ ತಮ್ಮನನ್ನು ಜೈಲಲ್ಲಿ ನೋಡಿ ನೋವಾಯಿತು. ಕೇಸ್‌ ಬಗ್ಗೆ ನಂದೀಶ್‌ನನ್ನು ನಾವು ಏನೂ ಕೇಳಿಲ್ಲ. ಅಪ್ಪ-ಅಮ್ಮನ ಆರೋಗ್ಯ ವಿಚಾರಿಸಿದ ಅಷ್ಟೇ. ನನ್ನ ಮಕ್ಕಳ ಜೊತೆ ಮಾತಾಡುವಾಗ ನಂದೀಶ್ ಕಣ್ಣೀರು ಹಾಕಿದ. ನಾವು ಅವನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ವಿ ಎಂದರು.

ಇದನ್ನೂ ಓದಿ:ಇರುವೆಗಳೂ ಆಪರೇಷನ್ ಮಾಡ್ತವೆ..! ಮನುಷ್ಯರ ಹೊರತುಪಡಿಸಿದ್ರೆ ಈ ಕಲೆಗಾರಿಕೆ ಇರೋದು ಇವುಗಳಿಗೆ ಮಾತ್ರ..!

ನಾವು ವಕೀಲರನ್ನು ಇನ್ನೂ ನೇಮಕ ಮಾಡಿಲ್ಲ. ಇವತ್ತು ಕೇಸ್ ನೋಡಿಕೊಂಡು ಮುಂದೆ ನೋಡುತ್ತೇವೆ. ನಮಗೆ ಹಣಕಾಸು ಸೌಲಭ್ಯ ಇಲ್ಲ. ಸಾಲ ಮಾಡಿಕೊಂಡು ವಕೀಲರ ನೇಮಕ ಮಾಡಬೇಕು. ನಮ್ಮ ಸಂಬಂಧಿಕರು ಹಣ ಹಾಕಿಯೇ ಎಲ್ಲಾ ಮಾಡಬೇಕಾಗಿದೆ. ದರ್ಶನ್ ನಮ್ಮ ನೆರವಿಗೆ ಬರ್ತಾರೆ ಅಂದುಕೊಂಡಿದ್ದೇವೆ. ಇದುವರೆಗೆ ದರ್ಶನ್ ಕಡೆಯವರು ಯಾರೂ ಬಂದಿಲ್ಲ. ನಾವು ಈಗಲೂ ಕೂಲಿ ಮಾಡಿಕೊಂಡೇ ಜೀವನ ಮಾಡುತ್ತಿದ್ದೇವೆ. ನಂದೀಶ್ ಬರುವವರೆಗೆ ಕೂಲಿ ಮಾಡಿಕೊಂಡು ಜೀವನ ಮಾಡುತ್ತೇವೆ ಎಂದರು.

ಬೇರೆ ಅವರ ಜಮೀನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತೀವಿ. ಜೈಲಿಗೆ ಹೋದಾಗ ಏನಾಗಿದೆ ಎಂದು ನಂದೀಶ್ ಏನೂ ಮಾತಾಡಿಲ್ಲ. ನಮ್ಮ ಅಮ್ಮನ ಆರೋಗ್ಯ ಸರಿ‌ ಇಲ್ಲ. ಅಮ್ಮನನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾನೆ. ದರ್ಶನ್ ಕಡೆಯವರು ಏನು ಮಾಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅವರು ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ನಮಗೆ ಏನೂ ಬೇಡ ನಂದೀಶ್‌ನನ್ನು ಮನೆಗೆ ಕಳುಹಿಸಿದರೆ ಸಾಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಫ್ರಿಡ್ಜ್​​​ ಮುಟ್ಟುವ ಮುನ್ನ ಹುಷಾರ್.. ವಿದ್ಯುತ್ ಶಾಕ್ ಹೊಡೆದು ತಾಯಿ-ಮಗಳು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿ ತಮ್ಮನ ನೋಡಿ ತುಂಬಾ ನೋವಾಯಿತು -ವಕೀಲರ ನೇಮಿಸದಕ್ಕೆ ನಂದೀಶ್ ಅಕ್ಕ ಕಣ್ಣೀರು

https://newsfirstlive.com/wp-content/uploads/2024/07/NANDISH-SISTER-1.jpg

Load More