Advertisment

ಕೊನೆಗೂ ದರ್ಶನ್‌ ಬಳಸಿದ SIM ಪತ್ತೆ ಹಚ್ಚಿದ ಪೊಲೀಸರು; ಆಪರೇಷನ್ ಹೇಗಿತ್ತು? ಪಿನ್ ಟು ಪಿನ್ ಮಾಹಿತಿ!

author-image
Gopal Kulkarni
Updated On
ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್‌.. ಡಿ.ಕೆ ರವಿ ಕೇಸ್‌ ಮಾದರಿ ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು; ಕಾರಣವೇನು?
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಆಪರೇಷನ್ ಸಿಮ್​​ಕಾರ್ಡ್
  • ದರ್ಶನ್​ನ ಆ ಸಿಮ್​ಕಾರ್ಡ್ ಹಿಂದೆ ಬಿದ್ದಿದ್ಯಾಕೆ ಪೊಲೀಸ್ ಪಡೆ
  • ಹೇಗಿರಲಿದೆ ಸಿಮ್​ಕಾರ್ಡ್ ರಹಸ್ಯ ಪತ್ತೆಯ ಪೊಲೀಸರ ತನಿಖೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರೋ 2ನೇ ಆರೋಪಿ ದರ್ಶನ್​ಗೆ ಸಂಬಂಧಿಸಿದ ಸಾಕಷ್ಟು ಸಾಕ್ಷಿಗಳನ್ನ ಕಲೆ ಹಾಕಿರೋ ಪೊಲೀಸರು ಇದೀಗ ದರ್ಶನ್​ ಬಳಸಿದ್ದ ಸಿಮ್​ ಹಿಂದೆ ಬಿದ್ದಿದ್ದಾರೆ. ದರ್ಶನ್​ ಬೇರೆಯವರ ಹೆಸರಿನ ಸಿಮ್​ ಬಳಸಿದ್ದು ಯಾಕೆ ಅನ್ನೋದನ್ನ ಪತ್ತೆ ಹಚ್ಚೋಕೆ ಮುಂದಾಗಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್ ಅರೆಸ್ಟ್‌ ಕೇಸ್​ಗೆ ಹೊಸ ಟ್ವಿಸ್ಟ್ ಕೊಟ್ಟ ಪೊಲೀಸರು.. ರಿಮ್ಯಾಂಡ್ ಅರ್ಜಿಯಲ್ಲಿ ಸ್ಫೋಟಕ ಅಂಶ; ಏನದು? 

ಆರೋಪಿಗಳು ಓಡಾಡಿದ್ದ ಜಾಗಗಳಲ್ಲಿ ಮಹಜರ್​ ಆಯ್ತು.. ಸಿಸಿಟಿವಿ ಆಯ್ತು.. ಎಲ್ಲಾ ಆರೋಪಿಗಳ ಮೊಬೈಲ್​ ಫೋನ್​ ಚೆಕ್​ ಮಾಡಿದ್ದಾಯ್ತು.. ರಿಟ್ರೀವ್​ ಮಾಡಿದ್ದಾಯ್ತು. ಈ ವೇಳೆ ಪೊಲೀಸರಿಗೆ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ ಸ್ವಂತ ಹೆಸರಿನ ಸಿಮ್​ ಬದಲು ಬೇರೊಂದು ಹೆಸರಿನಲ್ಲಿರೋ ಸಿಮ್​ ಬಳಸಿದ್ದು ಯಾಕೆ? ಈ ಸಿಮ್​ ಯಾರದ್ದು ಅನ್ನೋದನ್ನ ತಿಳಿದುಕೊಳ್ಳೋದಷ್ಟೇ ಬಾಕಿ ಇದೆ. ಹೀಗಾಗಿ ಪೊಲೀಸರು ಸಿಮ್​ ಮೂಲ ಹುಡುಕುತ್ತಾ ಹೊರಟಿದ್ದಾರೆ.

publive-image

ಇದನ್ನೂ ಓದಿ:ದರ್ಶನ್ ಫ್ಯಾನ್ಸ್‌ಗಳಿಂದ ಕೊಲೆ ಬೆದರಿಕೆ.. ಪೊಲೀಸ್ ಮೊರೆ ಹೋದ ರಾಜ್‌ ಕುಮಾರ್‌ ಅಭಿಮಾನಿ; ಆಗಿದ್ದೇನು?

Advertisment

ದರ್ಶನ್​ ಬಳಸಿದ್ದ ಬೇರೊಂದು ಹೆಸರಿನ ಸಿಮ್​ ಕಾರ್ಡ್​​ನ ಖರೀದಿಸಿ ತಂದು ಕೊಟ್ಟಿದ್ದ ಸ್ನೇಹಿತನ ವಿಚಾರಣೆ ನಡೆಸಿರೋ ಪೊಲೀಸರು 164 ಹೇಳಿಕೆಯನ್ನೂ ದಾಖಲಿಸಿದ್ದಾರೆ. ಇದು ದರ್ಶನ್​ ವಿರುದ್ಧದ ಮಹತ್ವದ ಸಾಕ್ಷಿಯೂ ಆಗಲಿದೆ. ದರ್ಶನ್​ ಸ್ನೇಹಿತ ಯಾವ ಉದ್ದೇಶಕ್ಕಾಗಿ ಸಿಮ್​ ಖರೀದಿ ಮಾಡಲಾಯ್ತು ಅನ್ನೋ ಮಾಹಿತಿಯನ್ನೂ ಪಡೆದಿದ್ದಾರೆ. ಇನ್ನು ಇಂಥ ಕೇಸ್​ಗಳಲ್ಲಿ ಸಿಮ್ ಬೇರೆಯವರ ಹೆಸರಿನಲ್ಲಿ ಇದ್ರೆ ಪೊಲೀಸರು ಹೇಗೆ ಟ್ರೇಸ್ ಮಾಡ್ತಾರೆ ಅನ್ನೋ ವಿವರ ಇಲ್ಲಿದೆ.

ಹೇಗಿರುತ್ತೆ ಆಪರೇಷನ್​ ಸಿಮ್​ ಕಾರ್ಡ್? ​
ಮೊದಲಿಗೆ ಮೊಬೈಲ್ ನಂಬರ್ ಯಾವ ಸಿಮ್ ಕಂಪನಿಯದ್ದು ಅಂತ ಚೆಕ್ ಮಾಡ್ತಾರೆ. ಬಳಿಕ ಆ ಮೊಬೈಲ್ ನಂಬರ್ ಯಾರ ಹೆಸರಿನಲ್ಲಿ ಇದೆ ಅಂತ ಕಂಪನಿಗೆ ರಿಕ್ವಿಜೇಷನ್ ಕೊಡ್ತಾರೆ. ಆಗ ಕಂಪನಿಯಿಂದ ಸಿಮ್ ಕಾರ್ಡ್ ಮಾಲೀಕನ ಸಂಪೂರ್ಣ ವಿಳಾಸ ಸಿಗುತ್ತೆ. ಬಳಿಕ ಆ ವ್ಯಕ್ತಿಯ ಹೆಸರಿನಲ್ಲಿ ಬೇರೆ ಯಾವ ಮೊಬೈಲ್ ನಂಬರ್ ಇದೆ ಅಂತ ಪರಿಶೀಲನೆ ಮಾಡಲಾಗುತ್ತೆ. ಬಳಿಕ ಆ ವ್ಯಕ್ತಿ ಪೊಲೀಸರಿಗೆ ಸಿಕ್ಕರೆ ವಿಚಾರಣೆಗೆ ಹಾಜರಾಗಲು ನೊಟೀಸ್ ಕೊಡ್ತಾರೆ. ಸಿಕ್ಕಿಲ್ಲ ಅಂದ್ರೆ ಟವರ್ ಲೋಕೇಷನ್ ಮೂಲಕ ಆತನ ಪತ್ತೆ ಹಚ್ಚಲಾಗುತ್ತೆ

ಇದನ್ನೂ ಓದಿ:ದರ್ಶನ್​ ಭೇಟಿಗೆ ನಿರಾಕರಿಸಿದ್ರಾ ಸೋನಲ್​? ತರುಣ್​ ಕೈ ಹಿಡಿಯೋ ಹುಡುಗಿ ಕೊಟ್ಟ ಕಾರಣ ಏನು ಗೊತ್ತಾ?

Advertisment

ದರ್ಶನ್ ಹೆಸರಿನಲ್ಲಿ ಸಿಮ್ ಖರೀದಿ ಮಾಡಿದ್ದ ವ್ಯಕ್ತಿಯೂ ಕೂಡ ಮತ್ತೊಂದು ಸಿಮ್ ಖರೀದಿಸಿದ್ದ ಇದ್ರಿಂದ ಆತನನ್ನ ಪತ್ತೆ ಹಚ್ಚೋಕೆ ಸುಲಭವಾಗಿದ್ದು. ಆತನಿಂದ ಹೇಳಿಕೆ ಪಡೆಯಲಾಗಿದೆ. ಆದ್ರೆ ಆತ ಯಾರು ಅನ್ನೋ ಸುಳಿವನ್ನ ಪೊಲೀಸರು ಬಿಟ್ಟುಕೊಟ್ಟಿಲ್ಲ.

publive-image

ದರ್ಶನ್​ ಕೇಸಲ್ಲಿ ಸಾಕ್ಷಿಗಳನ್ನ ಟೈಟ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದು, ಸದ್ಯ FSLನಲ್ಲಿ ವಿಶ್ಯುಲ್ comparison ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳ ಜೊತೆ ಆರೋಪಿಗಳ ಪೋಟೊ ಮ್ಯಾಚಿಂಗ್ ಮಾಡಿ ಇವರು ಅವರೇನಾ ಅನ್ನೋ ಬಗ್ಗೆ ಸಾಕ್ಷಿ ಕಲೆ ಹಾಕಲಾಗ್ತಿದೆ. ಕೆಲ ಸಿಸಿಟಿವಿಗಳು ರಾತ್ರಿ ಇರೋ ಕಾರಣ ಕ್ಲಿಯರ್​ ಆಗಿ ಆರೋಪಿಗಳು ಕಾಣ್ತಿಲ್ಲ. ಹೀಗಾಗಿ ಎಫ್​ಎಸ್ಎ​ಲ್​ನಲ್ಲಿ ಆರೋಪಿಗಳ ಫೋಟೋ ಮ್ಯಾಚ್​ ಮಾಡಿ ಕಂಪೇರಿಷನ್ ಮಾಡಿದ ವ್ಯಕ್ತಿಯಿಂದ ಪ್ರಮಾಣ ಪತ್ರ ಪಡೆಯಲಾಗುತ್ತೆ.

ಎವಿಡೆನ್ಸ್ ಆ್ಯಕ್ಟ್ 65 ಅಡಿಯಲ್ಲಿ ಪ್ರಮಾಣ ಪತ್ರ ಪಡೆದು. ಇದು ಎಡಿಟೆಡ್ ಅಲ್ಲ, ಕಂಪೇರಿಶನ್ ಇಮ್ಯಾಜ್ ಅಂತಾ ನೀಡ್ತಾರೆ. ಈ ಮೂಲಕ ಸಿಸಿಟಿವಿ ದೃಶ್ಯದಲ್ಲಿ ಇರುವುದು ಇದೇ ವ್ಯಕ್ತಿ ಅನ್ನೋ ವಿಚಾರ ಕನ್ಫರ್ಮ್ ಆಗುತ್ತೆ. ಈ ಮೂಲಕ ದರ್ಶನ್​ ವಿರುದ್ಧದ ಸಾಕ್ಷಿಗಳನ್ನ ಟೈಟ್​ ಮಾಡೋಕೆ ಪೊಲೀಸರು ಸಿದ್ದತೆ ನಡೆಸುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment