newsfirstkannada.com

DevilTheHero: ನಟ ದರ್ಶನ್​ ಕೊಲೆ ಮಾಡುವಷ್ಟು ಕಟುಕರಲ್ಲ ಎಂದ ಕಾಂಗ್ರೆಸ್ ಶಾಸಕ; ಕಾರಣವೇನು?

Share :

Published June 21, 2024 at 5:52pm

Update June 21, 2024 at 6:06pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪೊಲೀಸ್​​ ಕಸ್ಟಡಿಯಲ್ಲಿರೋ ದರ್ಶನ್​

  ನಟ ದರ್ಶನ್​ ಜೊತೆಗಿರುವವರು ಈ ಕೊಲೆ ಮಾಡಿರಬಹದು ಎಂದ ಶಾಸಕ

  ನನಗೆ ಹಲವು ವರ್ಷಗಳಿಂದ ನಟ ದರ್ಶನ್ ಸ್ನೇಹಿತ ಎಂದ ಉದಯ್ ಗೌಡ

ಬೆಂಗಳೂರು: ರೇಣುಕಾಸ್ವಾಮಿ ಕ್ರೂರ ಕೊಲೆಯ ಸುದ್ದಿ ಕೇಳಿಯೇ ಇಡೀ ರಾಜ್ಯ ಬೆಚ್ಚಿ ಬಿದ್ದಿದೆ. ದಿನ ಕಳೆದಂತೆ ಈ ಕೊಲೆ ಹಿಂದಿನ ಅಸಲಿ ಸತ್ಯವನ್ನು ಪೊಲೀಸರು ಬಯಲು ಮಾಡುತ್ತಿದ್ದಾರೆ. ಇದೇ ಪ್ರಕರಣದಲ್ಲಿ A2 ದರ್ಶನ್ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಪೊಲೀಸರ ವಿಚಾರಣೆ ನಡೆಯುತ್ತಿರುವಾಗಲೇ ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಗೌಡ ಅವರು ದರ್ಶನ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: HDK ವಿರುದ್ಧ ನಾಲಿಗೆ ಹರಿಬಿಟ್ಟ ದರ್ಶನ್ ಮಹಿಳಾ ಅಭಿಮಾನಿಗೆ ಸಂಕಷ್ಟ; ಆಗಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಹಾಗೂ ಇನ್ನೂ ಕೆಲವು ಆರೋಪಿಗಳು ಈಗ ಪೊಲೀಸ್​​ ಕಸ್ಟಡಿಯಲ್ಲಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿರುವ ಮದ್ದೂರು ಶಾಸಕ ಉದಯ್ ಗೌಡ ಅವರು, ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ. ತುಂಬಾ ಸಿಡುಕು, ಸಿಟ್ಟು ಸ್ವಭಾವದವರು ಅಂತ ಹೇಳಿದ್ದಾರೆ.

ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗಲ್ಲ. ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ತನಿಖೆ ಆಗಲಿ ಸತ್ಯ ಹೊರಗೆ ಬರಲಿ. ಇನ್ನೇನು‌ ಕೆಲವೇ ದಿನಗಳಲ್ಲಿ ಏನು ಎತ್ತ ಅಂತ ಹೊರಬರುತ್ತೆ. ರಾಜ್ಯದ ಜನರಿಗೂ ‌ಗೊತ್ತಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

DevilTheHero: ನಟ ದರ್ಶನ್​ ಕೊಲೆ ಮಾಡುವಷ್ಟು ಕಟುಕರಲ್ಲ ಎಂದ ಕಾಂಗ್ರೆಸ್ ಶಾಸಕ; ಕಾರಣವೇನು?

https://newsfirstlive.com/wp-content/uploads/2024/06/DARSHAN-25.jpg

Load More