ಉಳ್ಳವರ ಪರ ತೂಗುತ್ತಿದೆಯಾ ನ್ಯಾಯದೇವತೆಯ ನ್ಯಾಯ ತಕ್ಕಡಿ?
ನ್ಯಾಯದ ಭರವಸೆ ಕೊಟ್ಟಿದ್ರು ಅಂತಾ ರೇಣುಕಾಸ್ವಾಮಿ ತಂದೆ ಕಣ್ಣೀರು!
ದರ್ಶನ್ಗೆ ರಾಜಾತಿಥ್ಯ ಕೊಟ್ಟವರಿಗೂ ಶಿಕ್ಷೆಯಾಗಲಿ ಅಂತಾ ಆಗ್ರಹ!
ಚಿತ್ರದುರ್ಗ: ಸಿಗರೇಟ್,ಕಾಫಿ, ಸ್ಮೈಲ್ ಮತ್ತು ರೌಟಿಶೀಟರ್ ಜೊತೆ ಹರಟೆ.. ಯಾರು ಜೈಲೊಳಗೆ ನರಕದರ್ಶನ್ ಪಡ್ತಿದ್ದಾರೆ ಅಂತ ನಂಬಲಾಗಿತ್ತೋ.. ಅದೇ ದರ್ಶನ್ ಸಿಗರೇಟ್ ಹೊಡ್ಕೊಂಡು ಬಿಂದಾಸಾಗಿದ್ದಾರೆ ಅನ್ನೋ ಶಾಕಿಂಗ್ ರಹಸ್ಯವನ್ನ ಫೋಟೋ ಸ್ಫೋಟಗೊಂಡಿದೆ. ಈ ಬೆಳವಣಿಗೆ ಮೃತ ರೇಣುಕಾಸ್ವಾಮಿ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಸ್ವಾಮಿ ಹೆತ್ತವರ ಕಣ್ಣೀರು ಹೇಳತೀರದಾಗಿದೆ.
ಇದನ್ನೂ ಓದಿ: ಡಿ ಬಾಸ್ಗೆ ಫೋನ್ ಕೊಟ್ಟಿದ್ಯಾರು? ದರ್ಶನ್ ಬಿಂ‘ದಾಸ’ ಜೀವನದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು ಕಳೆದುಹೋಗಿದೆ. ಇನ್ನೇನು ಎರಡ್ಮೂರು ವಾರಗಳಲ್ಲಿ ಡಿಗ್ಯಾಂಗ್ ವಿರುದ್ಧ ತನಿಖಾಧಿಕಾರಿಗಳು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಈ ಹೊತ್ತಲ್ಲಿ ದರ್ಶನ್ ಜೈಲೊಳಗೆ ಮೋಜು ಮಸ್ತಿ ಮಾಡ್ತಿದ್ದಾರೆ ಎನ್ನಲಾದ ಶಾಕಿಂಗ್ ಫೋಟೋ ವೈರಲ್ ಆಗಿದೆ. ಸಿಗರೇಟ್ ಹೊಡ್ಕೊಂಡು, ಕಾಫಿ ಕುಡ್ಕೊಂಡು, ಇಬ್ಬರು ರೌಡಿ ಶೀಟರ್ಗಳ ಜೊತೆ ಕೂತು ಖಾಸ್ಬಾತ್ ನಡೆಸ್ತಿರೋ ಶಾಕಿಂಗ್ ಫೋಟೋ ದೊಡ್ಡ ಸಂಚಲನ ಸೃಷ್ಟಿಸಿದೆ. ಅಲ್ಲದೆ, ಜೈಲೊಳಗೆ ದರ್ಶನ್ಗೆ ರಾಜಾತಿಥ್ಯ ಸಿಗ್ತಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ನ್ಯಾಯದ ಭರವಸೆ ಕೊಟ್ಟಿದ್ರು ಅಂತಾ ಸ್ವಾಮಿ ತಂದೆ ಕಣ್ಣೀರು!
ಮತ್ತೊಂದು ಕಡೆ ಮನೆ ಮಗನನ್ನು ಕಳ್ಕೊಂಡು ಶೋಕದಲ್ಲಿರೋ ರೇಣುಕಾಸ್ವಾಮಿ ಕುಟುಂಬಕ್ಕೆ ಈ ವಿಚಾರ ಆಘಾತ ತಂದಿದೆ. ನ್ಯಾಯ ಸಿಗೋ ನಿರೀಕ್ಷೆಯಲ್ಲಿರೋ ಸ್ವಾಮಿ ಹೆತ್ತವರಿಗೆ ದರ್ಶನ್ ಮೋಜು ಮಸ್ತಿಯ ಫೋಟೋ ಅದೆಂತಾ ನೋವು ತರಿಸಿದೆ ಅನ್ನೋದನ್ನ ಕಲ್ಪಿಸಿಕೊಳ್ಳೋಕೂ ಆಗಲ್ಲ. ರೇಣುಕಾಸ್ವಾಮಿ ತಂದೆಯ ಕಣ್ಣಂಚಲ್ಲಿ ಜಿನುಗುತ್ತಿರೋ ಕಣ್ಣೀರೇ ಎಲ್ಲವನ್ನೂ ಸಾರಿ ಹೇಳ್ತಿದೆ.

ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡ್ತಿದ್ದಾರಾ ಎಂಬ ಪ್ರಶ್ನೆ ಹುಟ್ಟಿಸುವಂತಾ ಫೋಟೋ ವೈರಲ್ ಆಗಿರೋದು ಸಮರ್ಥ, ನ್ಯಾಯಯುತ ತನಿಖೆಯಾಗೋ ಭರವಸೆ ಹುಸಿಗೊಳಿಸುವಂತಿದೆ. ಇನ್ನು, ನ್ಯಾಯ ಸಿಗೋ ಭರವಸೆಯಲ್ಲಿದ್ದ ರೇಣುಕಾಸ್ವಾಮಿ ತಂದೆಯ ಆಕ್ರೋಶ ಮಾತುಗಳು ಎಂಥವರ ಕಣ್ಣಲ್ಲೂ ನೀರು ಜಿನುಗಿಸುವಂತಿವೆ. ಮಗನ ಕೊಲೆ ಕೇಸ್ನ್ನು ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ ರೇಣುಕಾಸ್ವಾಮಿ ತಂದೆ
ರೇಣುಕಾಸ್ವಾಮಿ ತಂದೆ ಬಾಯಲ್ಲಿ ಇದೇ ಮೊದಲ ಬಾರಿಗೆ ಸಿಬಿಐ ತನಿಖೆಯ ಕೋರಿಕೆ ಕೇಳಿಬಂದಿರೋದು ಆಶ್ಚರ್ಯವೇನಲ್ಲ. ಯಾಕಂದ್ರೆ, ಒಬ್ಬ ಕೊಲೆ ಆರೋಪಿಗೆ ಜೈಲಿನಲ್ಲಿ ಸಿಗರೇಟ್ ಸೇದುವ, ಬೇಕೆಂದವರ ಜೊತೆ ಹರಟೆ ಹೊಡೆಯೋ ಅವಕಾಶ ಸಿಗುತ್ತೆ ಅಂದ್ರೆ ನಿಜಕ್ಕೂ ಆಘಾತಕಾರಿ. ದರ್ಶನ್ ಕೇಸ್ನಲ್ಲಿ ಪೊಲೀಸರು ನಡೆದುಕೊಂಡಿರೋ ಮತ್ತು ನಡೆದುಕೊಳ್ತಿರೋ ರೀತಿಗೆ ಎಲ್ಲವೂ ಶಹಬ್ಬಾಶ್ ಎನ್ನುತ್ತಿದ್ದಾರೆ. ಆದ್ರೆ, ಜೈಲೊಳಗೆ ಮಾತ್ರ ದರ್ಶನ್ರನ್ನು ಸೆಲೆಬ್ರಿಟಿ ರೀತಿಯೇ ಟ್ರೀಟ್ ಮಾಡಲಾಗ್ತಿದ್ಯಾ ಎಂಬ ಪ್ರಶ್ನೆ ಹುಟ್ಟುವಂತಾ ಫೋಟೋ ವೈರಲ್ ಆಗಿದೆ.
ಇದನ್ನೂ ಓದಿ: ವಿಲನ್ ಚೆಲುವೆಗೆ ಕಲ್ಯಾಣ ಯೋಗ.. ಆ್ಯಮಿ ಜಾಕ್ಸನ್ ಅದ್ಧೂರಿ ಮದುವೆ ನಡೆದಿದ್ದು ಎಲ್ಲಿ? ಫೋಟೋ ಇಲ್ಲಿವೆ
ಜೈಲೊಳಗೆ ದರ್ಶನ್ ಬಿಂದಾಸ್ ಜಿಂದಗಿ ನಡೆಸ್ತಿರೋ ಅನುಮಾನ ಹುಟ್ಟಿಸುವಂತಾ ಫೋಟೋ ನೋಡಿ ಆಘಾತಕ್ಕೆ ಒಳಗಾಗಿದ್ದರೂ, ಮನದೊಳಗೆ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿದ್ದರೂ ಕೂಡ.. ನಮ್ಮ ನ್ಯಾಯಾಂಗ ವ್ಯವಸ್ಥೆ ಮೇಲೆ, ನಮ್ಮ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ. ರಾಜ್ಯ ಸರ್ಕಾರ, ರಾಜ್ಯ ಪೊಲೀಸರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನ್ಯಾಯ ಕೊಡಿಸೋ ಭರವಸೆ ಇದೆ ಎಂಬ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ. ಜೈಲಿನಲ್ಲಿ ದರ್ಶನ್ಗೆ ಇಂಥಾ ರಾಜಾತಿಥ್ಯ ನೀಡುತ್ತಿರೋದು ಸತ್ಯವೇ ಆಗಿದ್ದಾದ್ರೆ.. ಅದಕ್ಕೆ ಕಾರಣರಾದವರಿಗೆ ತನಿಖೆ ಮಾಡಿ ಶಿಕ್ಷೆ ನೀಡಲಿ ಅಂತಾ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಆಗ್ರಹಿಸಿದ್ದಾರೆ.
ಒಂದು ಕಡೆ ರೇಣುಕಾಸ್ವಾಮಿ ಹೆತ್ತವರ ಕಣ್ಣೀರು. ಮತ್ತೊಂದು ಕಡೆ ಜೈಲಲ್ಲೂ ಸಿಗರೇಟ್ ಹೊಡ್ಕೊಂಡು ಬಿಂದಾಸ್ ಲೈಫ್ ನಡೆಸ್ತಿರೋ ದರ್ಶನ್. ನಿಜಕ್ಕೂ ವಿಪರ್ಯಾಸ ಅನ್ನಿಸದೇ ಇರದು. ಬಟ್, ವೈರಲ್ ಆಗಿರೋ ಈ ಫೋಟೋಗೆ ಸಂಬಂಧಪಟ್ಟಂತೆ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚವೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈಲಿನಲ್ಲಿ ಮೊಬೈಲ್ ಸಿಕ್ಕಿದ್ದು ಹೇಗೆ? ಫೋಟೋ ತೆಗೆದಿದ್ದು ಯಾರು? ದರ್ಶನ್ಗೆ ಸಿಗರೇಟ್ ಕೊಟ್ಟವರು ಯಾರು? ರೌಡಿಶೀಟರ್ಗಳ ಜೊತೆ ದರ್ಶನ್ ಅಷ್ಟು ಆಪ್ತವಾಗಿ, ಹರಟೆ ಹೊಡೆಯುತ್ತಾ ಮಾತನಾಡೋದಕ್ಕೆ ಅವಕಾಶ ಕೊಟ್ಟವರು ಯಾರು? ಹೀಗೆ, ಎಲ್ಲರನ್ನೂ ಕಾಡುತ್ತಿರೋ ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಹಿರಿಯ ಅಧಿಕಾರಿಗಳು ಜೈಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ