newsfirstkannada.com

ರೇಣುಕಾಸ್ವಾಮಿ ಹತ್ಯೆ ಕೇಸ್​; ನಾನೇ ಕೊಲೆಗಾರ ಎಂದು ಒಪ್ಪಿಕೊಂಡಿದ್ದ ಆರೋಪಿಗೆ ಜಾಮೀನು ಸಿಗುತ್ತಾ?

Share :

Published July 2, 2024 at 9:54pm

  ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್​​ ಜೈಲಿಗೆ

  ಪೊಲೀಸ್ ಠಾಣೆಗೆ ಬಂದು ನಾನೇ ಕೊಲೆ ಮಾಡಿದ್ದು ಎಂದಿದ್ದ ಆರೋಪಿ

  ಆರೋಪಿ ನಿಖಿಲ್​ ಜಾಮೀನು ಅರ್ಜಿಗೆ SPP ಪ್ರಸನ್ನಕುಮಾರ್ ಆಕ್ಷೇಪ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನ ಕೊಲೆ ಆರೋಪದಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದೆ. ಯಾವಾಗ ಹೊರಗಿನ ಪ್ರಪಂಚದ ದರ್ಶನವಾಗುತ್ತೆ ಅಂತ ಕಂಬಿಗಳ ಹಿಂದೆ ನಿಂತು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ನಡುವೆಯೇ ಡಿ ಗ್ಯಾಂಗ್ ಸದಸ್ಯ 17ನೇ ಆರೋಪಿಯ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

ನಿಖಿಲ್ ನಾಯಕ್. ರೇಣುಕಾಸ್ವಾಮಿ ಕೊಲೆ ಕೇಸ್​ನ 17ನೇ ಆರೋಪಿ. ‘ಡಿ’ ಗ್ಯಾಂಗ್​ ರೇಣುಕಾಸ್ವಾಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನ ಸಾಗಾಟ ಮಾಡೋದ್ರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಈತನ ಮೇಲಿದೆ. ಅದೂ ಅಲ್ಲದೇ, ಪೊಲೀಸ್ ಠಾಣೆ ಬಂದು ನಾನೇ ಕೊಲೆ ಮಾಡಿದ್ದು ಅಂತಾ ಪೊಲೀಸರ ಮುಂದೆ ಶರಾಣಾಗಿದ್ದ ಈ ನಿಖಿಲ್​ ನಾಯಕ್​. ಆದ್ರೀಗ ಜೆ.ಸಿಯಲ್ಲಿ ಬಂಧಿಯಾಗಿದ್ದಾನೆ. ಈ ವೇಳೆಯೇ ನಿಖಿಲ್ ನಾಯಕ್ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗಿದೆ. ಹೌದು, ಒಂದ್ಕಡೆ ಎ2 ದರ್ಶನ್​ರಿಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಸಕಲ ರೀತಿಯಲ್ಲೂ ಶತಪ್ರಯತ್ನ ಮಾಡ್ತಿದ್ದು, ಹೆಸರಾಂತ ವಕೀಲ ಸಿ.ವಿ.ನಾಗೇಶ್​​ರನ್ನು ನೇಮಿಸಿದ್ದು ಜಾಮೀನು ಅರ್ಜಿ ಸಲ್ಲಿಕೆಗೆ ತಯಾರಿ ನಡೆಸುತ್ತಿದ್ದಾರೆ. ಈ ಮಧ್ಯೆಯೇ ಎ17 ಆರೋಪಿ ನಿಖಿಲ್ ನಾಯಕ್​ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅತ್ತ, ಸೆಷ್ಪಲ್​ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್, ಯಾವುದೇ ಕಾರಣಕ್ಕೂ ನಿಖಿಲ್​ಗೆ ಜಾಮೀನು ನೀಡಬಾರದು ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಆಕ್ಷೇಪಣೆ ಅರ್ಜಿಯಲ್ಲಿ ಏನಿದೆ..?

ನಿಖಿಲ್​ ಕೃತ್ಯದಲ್ಲಿ ಪಿತೂರಿಯ ಪ್ರಮುಖ ಆರೋಪಿಯಾಗಿದ್ದಾನೆ. ಮೃತ ಶರೀರವನ್ನ ಸಾಗಾಟ ಮಾಡಿರುವ ನಿಖಿಲ್ ನಾಯಕ್, ಪ್ರಕರಣದಲ್ಲಿ ನೇರವಾಗಿ ಸಾಕ್ಷ್ಯ ನಾಶದ ಯತ್ನ ಮಾಡಿದ್ದಾನೆ. ಅದಲ್ಲದೇ, ಘಟನೆಗೆ ಮುನ್ನ ಹಾಗೂ ಬಳಿಕ ಇತರೆ ಆರೋಪಿಗಳ ಜೊತೆ ಚರ್ಚೆ ಮಾಡಿದ್ದು, ಕೇಸ್​ನ 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ಜೊತೆ ಮಾತುಕತೆ ನಡೆಸಿದ್ದಾನೆ. ಆತ ಫೋನ್​ನಲ್ಲಿ ಮಾತನಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ತಪ್ಪು ಒಪ್ಪಿಕೊಂಡು ಸರೆಂಡರ್​ ಕೂಡ ಆಗಿದ್ದ. ಅದೂ ಅಲ್ಲದೇ, ಆತನಿಂದ ನಾಲ್ಕೂವರೆ ಲಕ್ಷ ರೂಪಾಯಿ ಸೀಜ್ ಮಾಡಲಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ಇನ್ನೂ ಸಹ ಬಾಕಿ ಇದೆ ಎಂದು ಸರ್ಕಾರದ ಪರ ಪ್ರಸನ್ನ ಕುಮಾರ್ ಆಕ್ಷೇಪಣೆಯಲ್ಲಿ ಉಲ್ಲೇಖ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪಿ ನಿಖಿಲ್ ನಾಯಕ್​ಗೆ ಜಾಮೀನು ಕೊಡಬಾರದು ಅಂತಾ ಸರ್ಕಾರಿ ವಕೀಲರು ಸೂಕ್ತ ಕಾರಣಗಳನ್ನ ಕೊಟ್ಟು ಆಕ್ಷೇಪಣೆ ಸಲ್ಲಿಸಿದ್ದಾರೆ. ಅತ್ತ, ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ರೇಣುಕಾ ಹತ್ಯೆ ಆರೋಪಿಗಳು ತಪ್ಪಿಸಿಕೊಳ್ಳಬಾರದು ಅಂತ ಪೊಲೀಸರು ಪಟ್ಟು ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಎ17 ಆರೋಪಿಗೆ ಜಾಮೀನು ಸಿಗುತ್ತಾ? ಕಾದು ನೋಡ್ಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಹತ್ಯೆ ಕೇಸ್​; ನಾನೇ ಕೊಲೆಗಾರ ಎಂದು ಒಪ್ಪಿಕೊಂಡಿದ್ದ ಆರೋಪಿಗೆ ಜಾಮೀನು ಸಿಗುತ್ತಾ?

https://newsfirstlive.com/wp-content/uploads/2024/07/dboss33.jpg

Load More