ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯ
ನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಜಡ್ಜ್‌ಗೆ ಆರೋಪಿ ಮನವಿ
ನನ್ನ ಬೆಂಗಳೂರು ಜೈಲಿನಲ್ಲಿ ಇಡಲು ಅವಕಾಶ ಕೊಡಿ ಎಂದು ಕೋರಿಕೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋಗೋದು ಫಿಕ್ಸ್ ಆಗಿದೆ. ಇಂದು ದರ್ಶನ್ ಗ್ಯಾಂಗ್ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿದ್ದರು.
ಇದನ್ನೂ ಓದಿ: ‘ಇದೆಲ್ಲ ಬೇಕಿತ್ತಾ ನಂಗೆ..’ ಅಧಿಕಾರಿಗಳ ಮುಂದೆ ದರ್ಶನ್ ದುಃಖ; ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲು ಹೆದರಿದ ದಾಸ..!
ಕೊಲೆ ಕೇಸ್‌ನ ಆರೋಪಿಗಳಾದ ದರ್ಶನ್ ಗ್ಯಾಂಗ್ ಇಂದು ಬೆಂಗಳೂರು ಹಾಗೂ ತುಮಕೂರು ಜೈಲಿನಿಂದ ಕೋರ್ಟ್‌ಗೆ ಹಾಜರಾಗಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿಗಳಲ್ಲಿ ಒಬ್ಬೊಬ್ಬರ ಹೆಸರನ್ನು ಕರೆದ ಜಡ್ಜ್ 17 ಮಂದಿಯ ಹಾಜರಾತಿಯನ್ನು ಪಡೆದುಕೊಂಡರು. ಇದೇ ವೇಳೆ ಎಸ್‌ಪಿಪಿ ಜ್ಯೂನಿಯರ್ ವಕೀಲ ಪ್ರಜ್ವಲ್ ಅವರು ಕೋರ್ಟ್‌ಗೆ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಿದರು. ಇದಾದ ಬಳಿಕ ದರ್ಶನ್ ಗ್ಯಾಂಗ್‌ನ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 9ರ ತನಕ ಮುಂದೂಡಿ ಮಹತ್ವದ ಆದೇಶ ನೀಡಲಾಯಿತು.
ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಮನವಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾದ ದರ್ಶನ್ ಗ್ಯಾಂಗನಲ್ಲಿ ಆರೋಪಿ ಪ್ರದೂಶ್ ಅವರು ನನ್ನ ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಮನವಿ ಮಾಡಿದರು. ನಮ್ಮ ಮನೆಯವರಿಗೆ ಕ್ಯಾನ್ಸರ್ ಇದೆ. ನನ್ನ ಇಲ್ಲಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಬೇಡಿ. ನನ್ನ ಕುಟುಂಬದವರ ಭೇಟಿಗೆ ಜೈಲಿನಲ್ಲಿ ಬಿಡುತ್ತಿಲ್ಲ. ಕ್ಯಾನ್ಸರ್ ಪೇಶೆಂಟ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಹೀಗಿದ್ದಾಗ ಬೇರೆ ಕಡೆ ಹೋದ್ರೆ ಕಷ್ಟ. ನನ್ನ ಬೆಂಗಳೂರು ಜೈಲಿನಲ್ಲಿ ಇಡಲು ಅವಕಾಶ ಕೊಡಿ ಎಂದು ಪ್ರದೂಶ್ ನ್ಯಾಯಾಧೀಶರಿಗೆ ಮನವಿ ಮಾಡಿದರು.
ಆರೋಪಿ ಪ್ರದೂಶ್ ಮನವಿ ಮೇರೆಗೆ ನಿಮಗೆ ಫ್ಯಾಮಿಲಿ ಭೇಟಿಗೆ ಬಿಡ್ತಿಲ್ವಾ ಎಂದು ನ್ಯಾಯಾಧೀಶರು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದರು. ಆಗ ಜೈಲು ಸಿಬ್ಬಂದಿ ಮನೆಯವರ ಭೇಟಿಗೆ ಅವಕಾಶ ಕೊಟ್ಟಿದ್ದಾಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಡೆಡ್ಲಿ ಸೋಮ, ಹನುಮಂತ ನಾಯ್ಕ್.. ನಟೋರಿಯಸ್ ರೌಡಿಗಳನ್ನು ಕಂಡ ಬಳ್ಳಾರಿ ಜೈಲಿಗೆ ಹೋಗಲ್ಲ ಎಂದ ದರ್ಶನ್
ಬಳ್ಳಾರಿಯಲ್ಲಿ ಗೌರಿ, ಗಣೇಶ ಹಬ್ಬ!
ಜೈಲಿನಲ್ಲಿ ದರ್ಶನ್ ಅವರು ರಾಜಾತಿಥ್ಯ ಪಡೆದ ಫೋಟೋ ಈಗಾಗಲೇ ವೈರಲ್ ಆಗಿದೆ. ರಾಜಾತಿಥ್ಯ ಆರೋಪದಲ್ಲಿ ದರ್ಶನ್ ಅವರನ್ನು ಈಗಾಗಲೇ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಮುಂದಿನ ಸೆಪ್ಟೆಂಬರ್ 6ರಂದು ಗೌರಿ, ಗಣೇಶ್ ಹಬ್ಬ ಇದೆ. ಈ ಹಬ್ಬವನ್ನು ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಯಾಱರು ಯಾವ ಜೈಲಿಗೆ ಶಿಫ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ