newsfirstkannada.com

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಬಹಳ ದೊಡ್ಡ ಸಂಚು ನಡೆಯಿತಾ.. ಕೋರ್ಟ್​ಗೆ ಹೇಳಿದ್ದೇನು?

Share :

Published June 15, 2024 at 5:33pm

Update June 15, 2024 at 5:34pm

  ನ್ಯಾಯಾಧೀಶರ ಮುಂದೆ ದರ್ಶನ್ ಹೇಳಿರುವುದು ಏನೇನು?

  ಪ್ರಶ್ನೆ ಕೇಳುತ್ತಿದ್ದಂತೆ ಕೋರ್ಟ್​​ನಲ್ಲಿ ಕಣ್ಣೀರು ಹಾಕಿದ ಪವಿತ್ರಾ

  ಮೃತದೇಹ ಸಾಗಿಸಲು ದೊಡ್ಡ ಮಟ್ಟದಲ್ಲಿ ಡೀಲ್ ನಡೆದಿತ್ತಾ..?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಆ್ಯಂಡ್​ ಗ್ಯಾಂಗ್‌ ಅನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಕೋರ್ಟ್​ನಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು ಎ2 ಆರೋಪಿ ದರ್ಶನ್ ₹30 ಲಕ್ಷಕ್ಕೆ ಡೀಲ್ ಕೊಟ್ಟಿದ್ದಾನೆ. ಹೀಗಾಗಿ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ರೇಣುಕಾಸ್ವಾಮಿ ಹತ್ಯೆ ಕೃತ್ಯದಲ್ಲಿ ಸಾಕ್ಷಿ ನಾಶ ಯತ್ನ ನಡೆದಿದೆ. ಕೊಲೆ ಮಾಡಿದ ಬಳಿಕ ಮೃತದೇಹವನ್ನು ಡಿಸ್ಪೋಸ್ ಮಾಡಲು ದೊಡ್ಡ ಡೀಲ್ ನಡೆದಿದೆ. ಹೀಗಾಗಿ 30 ಲಕ್ಷ ರೂಪಾಯಿಗಳಿಗೆ ಎ2 ಆರೋಪಿ ದರ್ಶನ್​ ಡೀಲ್ ನೀಡಿದ್ದಾನೆ. ಈ ಎಲ್ಲವನ್ನು ಪೊಲೀಸರು ತನಿಖೆ ವೇಳೆ ರಿಕವರಿ ಸಹ ಮಾಡಿದ್ದಾರೆ. 30 ಲಕ್ಷ ಹಣವನ್ನ ಬೇರೆ ಬೇರೆ ಆರೋಪಿಗಳಿಂದ ಸೀಜ್ ಮಾಡಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಬಹಳ ದೊಡ್ಡ ಸಂಚು ನಡೆದಿದ್ದು ಸಾಕ್ಷಿ ನಾಶ ಮಾಡಲು ಆರೋಪಿಗಳು ಎಲ್ಲ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಸ್ಥಳ ಮಹಜರು ವೇಳೆ ಅನೇಕ ಸಾಕ್ಷಿಗಳು ಲಭ್ಯವಾಗಿವೆ. ಆರೋಪಿಗಳು ಕೃತ್ಯದ ಬಗ್ಗೆ ಸ್ವತಹ ಹೇಳಿಕೆ ನೀಡಿದ್ದಾರೆ. ಹೀಗಾಗಿ ಎಲ್ಲರನ್ನು ಮುಖಾಮುಖಿ ವಿಚಾರಣೆ ಮಾಡಲು ಅಗತ್ಯ ಇರುವ ಕಾರಣ ಮತ್ತಷ್ಟು ದಿನ ಕಸ್ಟಡಿಗೆ ನೀಡಬೇಕು ಎಂದು ಕೋರ್ಟ್​​​ಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಇದು ರೋಚಕ ಕಿಡ್ನಾಪ್ ಕಹಾನಿ.. ದರ್ಶನ್​ ಜೊತೆ ಫೋಟೋ ತೆಗೆಸ್ತೀವಿ ಅಂತ ಕರೆದು, ಕೊಂದು ಹಾಕಿದ್ರಾ?

ಸರ್ಕಾರದ ಪರ SPP ಪ್ರಸನ್ನ ಕುಮಾರ್ ಹಾಜರಾಗಿದ್ದು, ಆರೋಪಿಗಳ ಪರ ವಕೀಲರಾದ ಪ್ರವೀಣ್ ತಿಮ್ಮಯ್ಯ, ನಾರಾಯಣಸ್ವಾಮಿ ಸೇರಿ ಅನೇಕರು ಹಾಜರಾಗಿದ್ದಾರೆ. ಕೋರ್ಟ್‌ಗೆ ಆರೋಪಿಗಳು ಹಾಜರಾದ ಮೇಲೆ ಜಡ್ಜ್ ಮೊದಲಿಗೆ ನಟ ದರ್ಶನ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದು ಕೇಳಿದ್ದಕ್ಕೆ ದರ್ಶನ್ ಅವರು ಇಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ನ್ಯಾಯಾಧೀಶರು ಪ್ರಶ್ನೆ ಕೇಳುವಾಗ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಬಹಳ ದೊಡ್ಡ ಸಂಚು ನಡೆಯಿತಾ.. ಕೋರ್ಟ್​ಗೆ ಹೇಳಿದ್ದೇನು?

https://newsfirstlive.com/wp-content/uploads/2024/06/renukaswami2.jpg

Load More