newsfirstkannada.com

ಕೊಲೆಯಾದ ಪಟ್ಟಣಗೆರೆ ಶೆಡ್​ನಲ್ಲಿ ಹಲವರ ಮೇಲೆ ಹಲ್ಲೆ? ದರ್ಶನ್​ ಗ್ಯಾಂಗ್​ ಮೇಲೆ ಹೊಸ ಸಂಶಯ!

Share :

Published June 18, 2024 at 10:19pm

  ಪಟ್ಟಣಗೆರೆ ಶೆಡ್​ಗೆ ನಟ ದರ್ಶನ್​ ಎಷ್ಟು ಬಾರಿ ಭೇಟಿ ನೀಡಿದ್ದರು?

  ಶೆಡ್​ನಲ್ಲಿ ಹಲವರ ಮೇಲೆ ಹಲ್ಲೆ ಮಾಡಿದ್ಯಾ ವಿನಯ್ & ಗ್ಯಾಂಗ್?

  ಬೇರೆಯವರ ರಕ್ತದ ಗುರುತು ಪೊಲೀಸರಿಗೆ ಸಿಕ್ಕ ಮೇಲೆ ಸಂಶಯ

ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಪಟ್ಟಣಗೆರೆ ಶೆಡ್​ ಬಗ್ಗೆ ಅನುಮಾನಗಳು ಮೂಡತೊಡಗಿದೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಯದ್ದು ಮಾತ್ರವಲ್ಲ, ಬೇರೆಯವರ ರಕ್ತದ ಗುರುತು ಕೂಡ ಎಫ್​ಎಸ್​ಎಲ್​ ಪರಿಶೀಲನೆಯಲ್ಲಿ ಸಿಕ್ಕಿದ್ಯಂತೆ. ಹೀಗಾಗಿ ಪಟ್ಟಣಗೆರೆ ಶೆಡ್​ನಲ್ಲಿ ವಿನಯ್​ ಅಂಡ್​ ಗ್ಯಾಂಗ್​, ಮತ್ತಷ್ಟು ಅಪರಾಧ ಕೃತ್ಯಗಳನ್ನು ಎಸಗಿರುವ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದು, ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.

ರಾಜರಾಜೇಶ್ವರಿ ನಗರದ ಪೆಟ್ಟಣಗೆರೆ ಎಂಬಲ್ಲಿರುವ ಒಂದು ಶೆಡ್​. ಇಲ್ಲಿ ಪೊಲೀಸರಿಂದ ಸೀಜ್​ ಆದ ವಾಹನಗಳು. ಸಾಲ ಕೊಡದವರಿಂದ ರಿಕವರಿ ಮಾಡಿಕೊಂಡು ಬಂದ ವಾಹನಗಳನ್ನು ಇಲ್ಲಿ ನಿಲ್ಲಿಸಲಾಗ್ತಿತ್ತು. ಇಷ್ಟು ದಿನ ಹೊರಜಗತ್ತಿಗೆ ಈ ಪಟ್ಟಣಗೆರೆ ಶೆಡ್​ ಬಗ್ಗೆ ಇಷ್ಟೇ ಗೊತ್ತಿದ್ದು, ಆದ್ರೀಗ ರೇಣುಕಾಸ್ವಾಮಿಯ ಭೀಕರ ಹತ್ಯೆಯ ಬಳಿಕ ಪಟ್ಟಣಗೆರೆ ಶೆಡ್​ನಲ್ಲಿ ಅಡಗಿದ್ದ ಅಪರಾಧ ಲೋಕ ಅನಾವರಣಗೊಳ್ಳತೊಡಗಿದೆ. ಎ.10 ಆರೋಪಿ ವಿನಯ್‌ನ ಉಸ್ತುವಾರಿಯಲ್ಲಿ ನಡೀತಿದ್ದ ಈ ಶೆಡ್​ನಲ್ಲಿ, ಇನ್ನೂ ಹಲವು ಅಪರಾಧ ಕೃತ್ಯಗಳ ನಡೆದಿರಬಹುದು ಅನ್ನೋ ಅನುಮಾನ ಪೊಲೀಸರಿಗೆ ಮೂಡಿದೆ.

ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್‌!

ಪಟ್ಟಣಗೆರೆ ಶೆಡ್​ನಲ್ಲಿ FSLಗೆ ಸಿಕ್ಕಿತ್ತಾ ಬೇರೆಯವರ ರಕ್ತದ ಕಲೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ವಿನಯ್​ ಅಂಡ್​ ಗ್ಯಾಂಗ್​ ಮೇಲೆ ಮತ್ತಷ್ಟು ಅನುಮಾನಗಳು ಮೂಡತೊಡಗಿದೆ. ಅದಕ್ಕೆ ಕಾರಣ ರೇಣುಕಾಸ್ವಾಮಿ ಕೊಲೆ ಸಂಬಂಧ ಪಟ್ಟಣಗೆರೆ ಶೆಡ್​ನಲ್ಲಿ ಸ್ಥಳ ಮಹಜರು ಮಾಡುವಾಗ ಎಫ್​ಎಸ್​ಎಲ್​ ತಂಡಕ್ಕೆ ಬೇರೆಯವರ ರಕ್ತದ ಕಲೆಯೂ ಸಿಕ್ಕಿದ್ಯಾಂತೆ. ಇದರಿಂದ ಪಟ್ಟಣಗೆರೆ ಶೆಡ್​ನಲ್ಲಿ ವಿನಯ್​ ಅಂಡ್​ ಗ್ಯಾಂಗ್​ ಈ ಹಿಂದೆ ಶೆಡ್​ನಲ್ಲಿ ಬೇರೆಯವರ ಮೇಲೆ ಹಲ್ಲೆ ಮಾಡಿತ್ತಾ ಎಂಬ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.

ಪಟ್ಟಣಗೆರೆಯ ಶೆಡ್​ನಲ್ಲಿ ಎಫ್​ಎಸ್​ಎಲ್​ ಟೀಂಗೆ ಮೂರಿಂದ 4 ತಿಂಗಳ ಹಿಂದಿನ ಬ್ಲಡ್​ ಸ್ಟೇನ್ಸ್​ಗಳು ಸಿಕ್ಕಿವೆ. ಹೀಗಾಗಿ ವಿನಯ್​ ಅಂಡ್​ ಗ್ಯಾಂಗ್​ ವ್ಯವಹಾರಿಕ ವಿಚಾರವಾಗಿ ಯಾರ ಮೇಲೆದಾದ್ರೂ ಹಲ್ಲೆ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.. ಆದ್ರೆ ಹಲ್ಲೆಗೊಳಗಾದ ಯಾರು ಸಹ ದೂರು ನೀಡಲು ಮುಂದೆ ಬಂದಿಲ್ಲ. ಈ ಬಗ್ಗೆ ಆರೋಪಿಗಳನ್ನ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ..

ಇದನ್ನೂ ಓದಿ: ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್​ ಎಲ್ಲಿದ್ದಾರೆ?

ರೇಣುಕಾಸ್ವಾಮಿ ಬಗ್ಗೆ ಗೊತ್ತಿಲ್ಲ ಎಂದ ಶೆಡ್​ ಮಾಲೀಕ ಜಯಣ್ಣ

ಪಟ್ಟಣಗೆರೆಯ ಈ ಶೆಡ್​ ಜಯಣ್ಣ ಎಂಬುವರಿಗೆ ಸೇರಿದ್ದು. ಇದನ್ನು ಜಯಣ್ಣ ಸಂಬಂಧಿಯೇ ಆಗಿರೋ ವಿನಯ್​ ನೋಡಿಕೊಳ್ತಾನೆ. ಪಟ್ಟಣಗೆರೆ ಶೆಡ್​ನಲ್ಲಿ ಏನ್​ ಆಗ್ತಿತ್ತು ಅನ್ನೋ ಬಗ್ಗೆ ಮಾಲೀಕ ಜಯಣ್ಣಗೆ ಮಾಹಿತಿಯೇ ಇಲ್ವಂತೆ. ಇನ್ನು ನಟ ದರ್ಶನ್​ ಶೆಡ್​ಗೆ ಎರಡು ಬಾರಿ ಭೇಟಿ ಕೊಟ್ಟಿದ್ದು, ಬಿಟ್ರೆ ಮೊನ್ನೆ ರೇಣುಕಾಸ್ವಾಮಿಯನ್ನ ಕರೆತಂದಿದ್ದು ಗೊತ್ತಿರಲಿಲ್ಲ. ಸಿಸಿ ಕ್ಯಾಮೆರಾದ ಡಿವಿಆರ್​ಅನ್ನು ಪೊಲೀಸರು ತೆಗೆದೊಂಡು ಹೋಗಿದ್ದಾರೆ ಅನ್ನೋದು ಶೆಡ್​ನ ಮಾಲೀಕ ಜಯಣ್ಣರ ವಾದ.

ಪಟ್ಟಣಗೆರೆ ಶೆಡ್​ ಬಗ್ಗೆ ಸ್ಥಳೀಯ ಜನರಿಗೆ ಇಷ್ಟು ದಿನ, ಸೀಜ್​ ಮಾಡಿದ ವಾಹನಗಳನ್ನು ನಿಲ್ಲಿಸುತ್ತಿದ್ದ ಜಾಗ ಎಂದು ತಿಳಿದಿತ್ತು. ಆದ್ರೆ, ಆ ಶೆಡ್​ಗೆ ಪೊಲೀಸರು ಕಾಲಿಡ್ತಿದ್ದಂತೆ ಮತ್ತಷ್ಟು ರಹಸ್ಯಗಳು ಬಯಲಾಗ್ತಿದ್ದು, ವಿನಯ್​ ಅಂಡ್​ ಗ್ಯಾಂಗ್​ನ ಅಸಲಿ ಮುಖವಾಡ ಬಯಲಿಗೆ ಬರತೊಡಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆಯಾದ ಪಟ್ಟಣಗೆರೆ ಶೆಡ್​ನಲ್ಲಿ ಹಲವರ ಮೇಲೆ ಹಲ್ಲೆ? ದರ್ಶನ್​ ಗ್ಯಾಂಗ್​ ಮೇಲೆ ಹೊಸ ಸಂಶಯ!

https://newsfirstlive.com/wp-content/uploads/2024/06/Darshan-Arrest-Case-6.jpg

Load More