ಒಬ್ಬರಾದ ಮೇಲೆ ಒಬ್ಬರಂತೆ ಹಿಡಿದು ಬಡಿದು ಚಿತ್ರಹಿಂಸೆ
ರೇಣುಕಾಸ್ವಾಮಿ ತಲೆ, ಮುಖದಲ್ಲಿ ರಕ್ತ ಸುರಿಯುತ್ತಿದ್ದರು ಬಿಟ್ಟಿಲ್ಲ
ರೇಣುಕಾಸ್ವಾಮಿಯ ಪ್ಯಾಂಟ್ ಬಿಚ್ಚಿ ಹಲ್ಲೆ ಮಾಡಿದ ದರ್ಶನ್?
ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ನ ಒಂದೊಂದು ಸತ್ಯವೇ ಭಯಾನಕ ಮತ್ತು ಘನಘೋರವಾಗಿದೆ. ತನಿಖೆ ನಡೆಸಿದ ಪೊಲೀಸರು 3991 ಪುಟಗಳಲ್ಲಿ ದರ್ಶನ್ ಗ್ಯಾಂಗ್‌ನ ಅಟ್ಟಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸದ್ಯಕ್ಕೆ ಚಾರ್ಜ್‌ಶೀಟ್‌ನ ಟ್ರೇಲರ್ ಮಾತ್ರ ಬಿಡುಗಡೆಯಾಗಿದ್ದು, ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಬಿಡಬೇಡಿ, ಸಾಯಿಸಿ.. ಕಿರುಚಾಡಿದ್ದ ಪವಿತ್ರಾ ಗೌಡ; ವಿಕೃತ ಮುಖದ ಕರಾಳ ಸತ್ಯ ಬಯಲು
ದರ್ಶನ್ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತಂದಿದ್ದರು. ಶೆಡ್‌ನಲ್ಲಿ ರೇಣುಕಾಸ್ವಾಮಿ ತಲೆ, ಮುಖದಲ್ಲಿ ರಕ್ತ ಸುರಿಯುತ್ತಿದ್ದರೂ ಆರೋಪಿಗಳು ಬಿಟ್ಟಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಹಿಡಿದು ಬಡಿದು ನಾಯಿಯ ರೀತಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.
ರೇಣುಕಾಸ್ವಾಮಿಯ ಸಣಕಲು ದೇಹದ ಮೇಲೆ ದರ್ಶನ್ ಗ್ಯಾಂಗ್‌ನಲ್ಲಿದ್ದ 12 ಮಂದಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಮಾಹಿತಿಯನ್ನು ಪ್ರಕರಣದ ಆರೋಪಿಗಳಾದ ಒಬ್ಬ ಆರೋಪಿ ಇನ್ನೊಬ್ಬರ ಮೇಲೆ ಹೇಳಿಕೆ ನೀಡಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಏಟು ತಿಂದು ಮೈತುಂಬಾ ರಕ್ತದ ಸುರಿಯುತ್ತಿದ್ದರೂ ಆರೋಪಿಗಳು ಬಿಟ್ಟಿಲ್ಲ. ನೆಲಕ್ಕೆ ಬಿದ್ದಿದ್ದ ರೇಣುಕಾಸ್ವಾಮಿ ಮೇಲೆ ತುಳಿದು ಹಲ್ಲೆ ಮಾಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದರೂ ಮತ್ತೆ ಮತ್ತೆ ತುಳಿದು ಚಿತ್ರಹಿಂಸೆ ಕೊಡಲಾಗಿದೆ.
ಮರ್ಮಾಂಗಕ್ಕೆ ತುಳಿದ ಖಳನಾಯಕನ ‘ದರ್ಶನ’!
ರೇಣುಕಾಸ್ವಾಮಿ ಮೇಲೆ ಆರೋಪಿ ದರ್ಶನ್ ಕೂಡ ಹಲ್ಲೆ ಮಾಡಿದ್ದಾರೆ ಅನ್ನೋ ಸತ್ಯ ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದೆ. ರೇಣುಕಾಸ್ವಾಮಿ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ದರ್ಶನ್ ಕೋಪ ಸ್ವಲ್ಪವೂ ಕಡಿಮೆ ಆಗಿಲ್ಲ.
ಇದನ್ನೂ ಓದಿ: ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದ ಪವಿತ್ರಾ ರೌದ್ರಾವತಾರ.. ಕ್ರೌರ್ಯದ ರಹಸ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ನೆಲದ ಮೇಲೆ ಬಿದ್ದು ಒದ್ದಡುತ್ತಿದ್ದ ರೇಣುಕಾಸ್ವಾಮಿಯ ಪ್ಯಾಂಟ್ ಅನ್ನು ದರ್ಶನ್ ಬಿಚ್ಚಿದ್ದಾರೆ. ಪ್ಯಾಂಟ್ ಬಿಚ್ಚಿ ಹಲ್ಲೆ ಮಾಡಿದ ದರ್ಶನ್, ರೇಣುಕಾಸ್ವಾಮಿಯ ಮರ್ಮಾಂಗದ ಮೇಲೆ ಕಾಲಿನಿಂದ ತುಳಿದಿದ್ದಾರೆ. ಆಗ ಇನ್ನಿಬ್ಬರು ರೇಣುಕಾಸ್ವಾಮಿಯ ಎರಡು ಕಾಲಗಳನ್ನು ಆಗಲಿಸಿ ಹಿಡಿದಿದ್ದಾರೆ.
ಒಂದೇ ಜಾಗಕ್ಕೆ ದರ್ಶನ್ ಅವರು ಅನೇಕ ಬಾರಿ ಒದ್ದು ಒದ್ದು ತುಳಿದಿದ್ದಾರೆ. ಈ ವೇಳೆ ಆತ ಪ್ರಜ್ಞೆ ಕಳೆದುಕೊಂಡಾಗ ದರ್ಶನ್ ಬಿಟ್ಟಿದ್ದಾರೆ. ಮರಣೋತ್ತರ ವರದಿಯಲ್ಲಿ ಈ ಬಲವಾದ ಪೆಟ್ಟಿನಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಇದೇ ಅಂಶವನ್ನು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಿದ್ದು, ದರ್ಶನ್‌ಗೆ ಸಂಕಷ್ಟ ಎದುರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ