ಉಂಗುರ ತೊಡಿಸಿ ಪ್ರಪೋಸ್ ಮಾಡಿದ ರಿಪೋರ್ಟರ್
4 ವರ್ಷದ ಹಿಂದಿನ ಮೊದಲ ಭೇಟಿಯನ್ನ ಸ್ಮರಿಸಿದ ಪ್ರಿಯಕರ
ರಿಪೋರ್ಟರ್ ಪ್ರೀತಿಗೆ ಮನಸೋತಳಾ.. ಸುದ್ದಿ ವಾಚಕಿ?
ಪ್ರೀತಿ ಯಾವಾಗ ಹುಟ್ಟುತ್ತೆ ಅಂತ ಹೇಳಲಾಗದು. ಎಷ್ಟೇ ವಯಸ್ಸಿನವರಾದರು ಪ್ರೀತಿಗೆ ತಲೆಬಾಗಿಯೇ ಬಾಗುತ್ತಾರೆ. ಆದರೆ ಕೆಲವೊಮ್ಮೆ ತನ್ನ ಪ್ರೀತಿಯನ್ನ ಹೇಳಿಕೊಳ್ಳಲು ಪ್ರಿಯಕರ ಅಥವಾ ಪ್ರಿಯತಮೆ ಕ್ರಿಯಾತ್ಮಕ ದಾರಿಯನ್ನು ಹುಡುಕುತ್ತಾರೆ. ಅದರಂತೆಯೇ ಇಲ್ಲೊಬ್ಬ ರಿಪೋರ್ಟರ್ ಕೂಡ ಅದೇ ಆಲೋಚನೆದ ಮಾಡಿಕೊಂಡು ಲೈವ್ನಲ್ಲಿಯೇ ನ್ಯೂಸ್ ಆ್ಯಂಕರ್ಗೆ ಪ್ರೇಮ ನಿವೇದನೆ ಮಾಡಿದ್ದಾನೆ.
NBC ಅಂಗಸಂಸ್ಥೆ WRCB-TV ಯ ಸುದ್ದಿ ನಿರೂಪಕಿ ಕಾರ್ನೆಲಿಯಾ ನಿಕೋಲ್ಸನ್ ಎಂದಿನಂತೆ ಸುದ್ದಿ ಓದುತ್ತಿದ್ದರು. ಈ ವೇಳೆ ಸಹ ಪತ್ರಕರ್ತ ರಿಲೇ ನಗೆಲ್ ಸ್ಟೂಡಿಯೋಗೆ ನೇರವಾಗಿ ಬಂದು ಉಂಗುರ ಮತ್ತು ಹೂಗುಚ್ಚ ಕೊಟ್ಟು ಪ್ರೊಪೋಸ್ ಮಾಡಿದ್ದಾರೆ. ರಿಲೇ ಪ್ರೇಮ ನಿವೇದನೆಯನ್ನ ನ್ಯೂಸ್ ಆ್ಯಂಕರ್ ಖುಷಿಯಿಂದಲೇ ಸ್ವೀಕರಿಸಿದ್ದಾರೆ.
View this post on Instagram
ಸದ್ಯ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಕಾರ್ನೇಲಿಯಾ ಮತ್ತು ರಿಲೆ ನಾಲ್ಕು ವರ್ಷದ ಹಿಂದೆ ಮೊಂಟಾನಾದ ಸುದ್ದಿ ಕೇಂದ್ರದಲ್ಲಿ ಭೇಟಿಯಾದರು. ಅಂದಿನಿಂದ ಇಬ್ಬರಲ್ಲಿ ಸ್ನೇಹ ಬೆಳೆದಿತ್ತು. ರಿಲೇ ನಗೆಲ್ ಮಾತ್ರ ಕಾರ್ನೇಲಿಯಾ ಸ್ನೇಹಕ್ಕೆ ಮಾರು ಹೋಗಿದ್ದರು ಮತ್ತು ಆಕೆಯನ್ನು ಇಷ್ಟಪಟ್ಟಿದ್ದರು. ಕೊನೆಗೆ ಆಕೆಗೆ ಪ್ರಪೋಸ್ ಮಾಡಿದ್ದಾರೆ. ಆಕೆ ಕೂಡ ಆತನನ್ನ ಪ್ರಿಯಕರನನ್ನಾಗಿ ಸ್ವೀಕರಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ