newsfirstkannada.com

ರಿಪಬ್ಲಿಕ್ ಆಫ್ ಭಾರತಕ್ಕೆ ಜೈ ಎಂದ ಸೆಹ್ವಾಗ್, ಅಮಿತಾಬ್ ಬಚ್ಚನ್; ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

Share :

05-09-2023

    ಸೆಹ್ವಾಗ್, ಅಮಿತಾಬ್ ಸೇರಿದಂತೆ ಹಲವರಿಂದ ‘ಭಾರತ’ಕ್ಕೆ ಬೆಂಬಲ

    ಸಂಸತ್​ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ

    ಭಾರತಕ್ಕೆ ಮರುನಾಮಕರಣ ಮಾಡಲು ಮುಂದಾದ ಕೇಂದ್ರ ಸರ್ಕಾರ

ನವದೆಹಲಿ: ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ ಎಂದು ದೇಶಕ್ಕೆ ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸೆಪ್ಟೆಂಬರ್‌ 18 ರಿಂದ 22ರ ವರೆಗೆ ನಡೆಯುವ ಸಂಸತ್‌ನ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು ಕ್ರಿಕೆಟರ್​ ವೀರೇಂದ್ರ ಸೆಹ್ವಾಗ್, ಬಾಲಿವುಡ್ ಬಿಗ್​ ಬೀ ಅಮಿತಾಬ್ ಬಚ್ಚನ್ ಕೂಡ ಈ ಬಗ್ಗೆ ಒಲವು ತೋರಿದ್ದಾರೆ. ತಮ್ಮ ಅಧಿಕೃತ ಎಕ್ಸ್​ ಪೋಸ್ಟ್​ನಲ್ಲಿ ತಮ್ಮ ಅನಿಸಿಕೆಯನ್ನು ಶೇರ್ ಮಾಡುವ ಮೂಲಕ ರಿಪಬ್ಲಿಕ್ ಆಫ್ ಭಾರತ ನಾಮಕರಣಕ್ಕೆ ಬೆಂಬಲ ಸೂಚಿಸಿದ್ದಾರೆ.

ಸೆಹ್ವಾಗ್​ ತಮ್ಮ ಎಕ್ಸ್​ನಲ್ಲಿ ಬೆಂಬಲ ಸೂಚಿಸಿ, ನಮಗೆ ಹೆಮ್ಮೆಯಾಗಿರೋ ಹೆಸರು ಬೇಕೆಂದು ಮೊದಲಿಂದಲೂ ನನಗೆ ಅನಿಸುತ್ತಿತ್ತು. ಬ್ರಿಟಿಷರು ಇಟ್ಟಿರುವ ಹೆಸರನ್ನು ತೆಗೆದು ಹಾಕಿ ಮೂಲ ‘ಭಾರತ’ ಹೆಸರನ್ನು ಪಡೆಯುತ್ತಿರುವುದು ಈಗಾಗಲೇ ಬಹಳ ತಡವಾಗಿದೆ. ಆದಷ್ಟು ಬೇಗ ಮರುನಾಮಕರಣ ಮಾಡಬೇಕು ಎಂದಿದ್ದಾರೆ.

ಇನ್ನು ಬಾಲಿವುಡ್​ ಬಿಗ್ ಬೀ ಕೂಡ ಎಕ್ಸ್​ ಮಾಡಿದ್ದು, ಭಾರತ್ ಮಾತಾಕಿ ಜೈ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರದ ಈ ನಿರ್ಧಾರಕ್ಕೆ ವ್ಯಂಗ್ಯವಾಡಿದ್ದಾರೆ. ನಮ್ಮ ದೇಶ 140 ಕೋಟಿ ಜನಸಂಖ್ಯೆ ಹೊಂದಿದ್ದು ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. INDIA ಮೈತ್ರಿಕೂಟವು ಭಾರತ ಎಂದು ತನ್ನ ಮೈತ್ರಿ ಹೆಸರು ಬದಲಿಸಿದ್ರೆ, ಭಾರತ ಎನ್ನುವ ಹೆಸರನ್ನು ಮುಂದಿನ ದಿನಗಳಲ್ಲಿ ಬದಲಿಸಿ ಮತ್ತೆ ಬೇರೆ ಹೆಸರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದಲಾವಣೆ ಮಾಡುತ್ತ ಎಂದು ಪ್ರಶ್ನೆ ಮಾಡಿದ್ದಾರೆ.

ಕೇರಳದ ಕಾಂಗ್ರೆಸ್​ ಸಂಸದ ಶಶಿ ತರೂರ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿ ಎಕ್ಸ್ ಮಾಡಿದ್ದಾರೆ. ವಿಶ್ವದಲ್ಲಿ ಅಫಿಶೀಯಲ್​ ಆಗಿ ಎರಡು ಹೆಸರನ್ನು ಇರೋ ದೇಶ ನಮ್ಮದು. ಇಂತಹ ಹೆಸರನ್ನು ಬದಲಿಸುವಷ್ಟು ಮೂರ್ಖ ಸರ್ಕಾರವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಪಬ್ಲಿಕ್ ಆಫ್ ಭಾರತಕ್ಕೆ ಜೈ ಎಂದ ಸೆಹ್ವಾಗ್, ಅಮಿತಾಬ್ ಬಚ್ಚನ್; ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

https://newsfirstlive.com/wp-content/uploads/2023/09/AMITAB_SEHWAG.jpg

Load More