newsfirstkannada.com

ದರ್ಶನ್‌ ಗ್ಯಾಂಗ್‌ನಲ್ಲಿ ಕೆಲ ಆರೋಪಿಗಳು ಬೇರೆ ಜೈಲಿಗೆ ಶಿಫ್ಟ್? ಕಾರಣವೇನು?

Share :

Published June 22, 2024 at 4:56pm

Update June 22, 2024 at 5:00pm

  ರೇಣುಕಾಸ್ವಾಮಿ ಕೊಲೆ ಕೇಸ್‌ ಆರೋಪಿಗಳು ಸೆಂಟ್ರಲ್ ಜೈಲಿಗೆ

  ದರ್ಶನ್ ಗ್ಯಾಂಗ್‌ ಈಗಾಗಲೇ ಸಾಕ್ಷಿ ನಾಶಕ್ಕೆ ಯತ್ನಿಸಿದೆ ಎಂದ SPP

  ದರ್ಶನ್ ಸೇರಿ ನಾಲ್ವರು ಆರೋಪಿಗಳು ಇಂದು ಪರಪ್ಪನ ಅಗ್ರಹಾರಕ್ಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರ ತನಿಖೆ ರೋಚಕ ಹಂತ ತಲುಪಿದೆ. ನಟ ದರ್ಶನ್ ಗ್ಯಾಂಗ್‌ ಅನ್ನು ತೀವ್ರ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಇಂದು ದರ್ಶನ್ ಸೇರಿ ನಾಲ್ವರು ಆರೋಪಿಗಳಿಗೆ ಕೋರ್ಟ್ ಜುಲೈ 4ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮಹತ್ವದ ಆದೇಶ ನೀಡಿದೆ. ಕೋರ್ಟ್‌ ಸೂಚನೆಯ ಮೇರೆಗೆ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದುಕೊಂಡು ಹೋಗಲಾಗಿದೆ.

ಇದನ್ನೂ ಓದಿ: BREAKING: ನಟ ದರ್ಶನ್‌ 2ನೇ ಬಾರಿಗೆ ಜೈಲು ಪಾಲು; ಎಷ್ಟು ದಿನ? 

ಬೇರೆ ಜೈಲಿಗೆ ಶಿಫ್ಟ್ ಮಾಡಲು ಮನವಿ 
ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರಣೆಯಲ್ಲಿ ಸರ್ಕಾರದ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ದರ್ಶನ್ ಹಾಗೂ ಸಹಚರರನ್ನು ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಮನವಿ ಮಾಡಿದರು. ಇದರ ಜೊತೆಗೆ ಪ್ರಕರಣದ ಕೆಲ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಕೇಳಲಾಯಿತು.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಸೇರಿದ ಪವಿತ್ರಾ ಗೌಡ.. ಆಕೆಗೆ ನೀಡಿರೋ ಫೆಸಿಲಿಟಿ ಮಾತ್ರ.. 

ಆರೋಪಿಗಳು ಈಗಾಗಲೇ ಒಳಸಂಚಿನಲ್ಲಿ ಭಾಗಿ ಇದ್ದಾರೆ. ಮತ್ತೆ ಒಂದೇ ಜೈಲಿನಲ್ಲಿ ಇದ್ದರೆ ಮತ್ತೆ ಸಂಚು ಮಾಡುವ ಸಾಧ್ಯತೆ ಇದೆ. ದರ್ಶನ್ ಗ್ಯಾಂಗ್‌ ಈಗಾಗಲೇ ಸಾಕ್ಷಿ ನಾಶಕ್ಕೆ ಯತ್ನಿಸಿದೆ. ಹೋಗಿದ್ದಾಗ ಮತ್ತೆ ಕುತಂತ್ರ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೆಲ ಆರೋಪಿಗಳನ್ನು ತುಮಕೂರು ಜೈಲಿಗೆ ಶಿಫ್ಟ್ ಮಾಡಲು ಎಸ್‌ಪಿಪಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬಂಧನದ ಬಳಿಕ ಸರಿಯಾಗಿ ಆಹಾರ ತಿನ್ನದ ದರ್ಶನ್​.. ಇಳಿಕೆ ಕಂಡ ತೂಕ! ಸದ್ಯ ಎಷ್ಟು KG ಇದ್ದಾರೆ ಗೊತ್ತಾ? 

ಈ ಹಿಂದೆ A1 ಪವಿತ್ರಾ ಗೌಡ ಸೇರಿದಂತೆ ಪ್ರಕರಣದ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಇದೀಗ ಕೆಲ ಆರೋಪಿಗಳನ್ನ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಕೇಳಿದ್ದಕ್ಕೆ ಕೋರ್ಟ್ ಕೂಡ ಅನುಮತಿ ನೀಡಿದೆ. ಆದರೆ ಆರೋಪಿ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಕ್ಷೇಪ ಯಾಕೆ?
ಆರೋಪಿ ಪರ ವಕೀಲರು ದರ್ಶನ್ ಗ್ಯಾಂಗ್‌ ಬಂಧನ ಪ್ರಕರಣವನ್ನು ಪೊಲೀಸರು ತುಂಬಾ ಪರ್ಸನಲ್ ಆಗಿ ತಗೊಂಡಿದ್ದಾರೆ. ಹೀಗಾಗಿ ಆರೋಪಿಗಳನ್ನು ಬೇರೆ ಜೈಲಿಗೆ ವರ್ಗಾವಣೆ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಆರೋಪಿಗಳ ಪರ ವಕೀಲರಿಂದ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪುನಃ ವಿಚಾರಣೆ ಮಾಡೋಣ ಬಿಡಿ ಎಂದು ವಿಚಾರಣೆಯನ್ನು ಮುಕ್ತಾಯ ಮಾಡಿದ್ದಾರೆ.

ಸೋಮವಾರ ಮತ್ತೆ ವಿಚಾರಣೆ
ಸದ್ಯ ದರ್ಶನ್ ಅಂಡ್ ಗ್ಯಾಂಗ್ ಸದಸ್ಯರು ಇಂದು ಪರಪ್ಪನ ಅಗ್ರಹಾರ ಜೈಲು ಸೇರಿಕೊಳ್ಳುತ್ತಿದ್ದಾರೆ. ನಾಳೆ ಭಾನುವಾರ ಆಗಿರೋದ್ರಿಂದ ಎಲ್ಲಾ ಆರೋಪಿಗಳು ಸೆಂಟ್ರಲ್ ಜೈಲಿನಲ್ಲೇ ಕಾಲ ಕಳೆಯಲಿದ್ದಾರೆ. ಸೋಮವಾರ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ವಿಚಾರಣೆ ನಡೆಯಲಿದ್ದು, ಆ ಬಳಿಕ ನ್ಯಾಯಾಲಯ ಈ ಬಗ್ಗೆ ನಿರ್ಧಾರ ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ ಗ್ಯಾಂಗ್‌ನಲ್ಲಿ ಕೆಲ ಆರೋಪಿಗಳು ಬೇರೆ ಜೈಲಿಗೆ ಶಿಫ್ಟ್? ಕಾರಣವೇನು?

https://newsfirstlive.com/wp-content/uploads/2024/06/darshan34.jpg

Load More