ಮಗುವನ್ನ ಜೀವಂತವಾಗಿ ಮಣ್ಣಿನಲ್ಲಿ ಹೂತು ಹಾಕಿದ್ದ ಕಟುಕರು
ನಿರ್ಜನ ಪ್ರದೇಶದ ತೋಪಿನಲ್ಲಿ ಚೀರಾಡಿ, ಅಳುತ್ತಿದ್ದ ಗಂಡು ಮಗು
ಇನ್ನು ಕಣ್ಣೇ ಬಿಡದ ಈ ಪುಟ್ಟ ಕಂದಮ್ಮನ ಮೇಲೆ ಯಾಕಿಷ್ಟು ಕೋಪ?
ಬೆಂಗಳೂರು: ಹುಟ್ಟಿದ ಒಂದೇ ದಿನಕ್ಕೆ ಹೆತ್ತವರಿಗೆ ಈ ಪುಟ್ಟ ಕಂದಮ್ಮ ಬೇಡವಾಗಿದೆ. ಗಂಡು ಮಗುವನ್ನ ಜೀವಂತ ಮಣ್ಣಿನಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ನೆರಿಗಾ ಸಮೀಪ ನಡೆದಿದೆ. ನಿರ್ಜನ ಪ್ರದೇಶದ ತೋಪಿನಲ್ಲಿ ಗಂಡು ಮಗುವನ್ನು ಯಾರೋ ಕಟುಕರು ಹೂತು ಹಾಕಿ ಹೋಗಿದ್ದಾರೆ.
ಇದನ್ನೂ ಓದಿ: ಮಂಡ್ಯ ಭೀಕರ ಅಪಘಾತಕ್ಕೆ ಕಾರಣ ಮೊಬೈಲ್.. ಶಾಕಿಂಗ್ ವಿಚಾರ ಬಿಚ್ಚಿಟ್ಟ ವಿದ್ಯಾರ್ಥಿ; ಅಸಲಿಗೆ ಆಗಿದ್ದೇನು?
ಇಂದು ಬೆಳಗ್ಗೆ ಸ್ಥಳೀಯರು ನಿರ್ಜನ ಪ್ರದೇಶದ ಈ ತೋಪಿಗೆ ಹೋದಾಗ ಮಗುವಿನ ಚೀರಾಟ, ಕಿರುಚಾಟ ಕೇಳಿ ಬಂದಿದೆ. ಸ್ಥಳೀಯರು ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಮಗುವನ್ನು ಹೂತು ಹಾಕಿದ್ದ ಸ್ಥಳಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ. ಆಶಾ ಅವರ ತಂಡ ಭೇಟಿ ನೀಡಿದ್ದು, ಮಗುವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ರಕ್ಷಿಸಲಾಗಿರುವ ಅನಾಥ ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: 1.6 ಕೋಟಿ ರೂಪಾಯಿ ಫೇಕ್ ನೋಟ್ಗಳಲ್ಲಿ ಅನುಪಮ್ ಖೇರ್; ಈ ಬಗ್ಗೆ ನಟ ಹೇಳಿದ್ದೇನು ಗೊತ್ತಾ?
ಇನ್ನು ಸರಿಯಾಗಿ ಕಣ್ಣೇ ಬಿಡದ ಈ ಪುಟ್ಟ ಕಂದಮ್ಮನನ್ನು ಯಾರೋ ಜೀವಂತವಾಗಿ ಹೂತಿಟ್ಟಿದ್ದರು. ಮಣಿನಲ್ಲಿ ಚೀರಾಡುತ್ತಿದ್ದ ಮಗುವಿಗೆ ಸಣ್ಣ, ಪುಣ್ಣ ಗಾಯಗಳಾಗಿದೆ. ಮಗುವಿಗೆ ದೊಮ್ಮಸಂದ್ರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಾಣಿ ವಿಲಾಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ