newsfirstkannada.com

IPL 2025: ಕೊಹ್ಲಿಯನ್ನು ರಿಟೈನ್​ ಮಾಡಿಕೊಳ್ಳಬೇಕು ಎಂದಿದ್ದ ಆರ್​​ಸಿಬಿಗೆ ಬಿಗ್​ ಶಾಕ್​​

Share :

Published July 2, 2024 at 10:29pm

Update July 2, 2024 at 10:35pm

  ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಮುಕ್ತಾಯ

  ಈ ಬೆನ್ನಲ್ಲೇ ಐಪಿಎಲ್ 2025ಕ್ಕೆ ಮೆಗಾ ಆಕ್ಷನ್ ಬಿಸಿಸಿಐ ಭರ್ಜರಿ ತಯಾರಿ

  ಜೀರೋ ರಿಟೆನ್ಷನ್ ಪಾಲಿಗೆ ಜಾರಿಗೆ ಹಲವು ಫ್ರಾಂಚೈಸಿಗಳಿಂದ ಪ್ರಸ್ತಾಪ!

ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​ ಮುಗಿದಿದೆ. ಇದಾದ ಬೆನ್ನಲ್ಲೇ ಐಪಿಎಲ್ 2025ಕ್ಕೆ ಮೆಗಾ ಆಕ್ಷನ್ ನಡೆಯಲಿದೆ. ಗುಜರಾತ್​ ಟೈಟನ್ಸ್​​ ಮತ್ತು ಲಕ್ನೋ ಸೇರಿ ಒಟ್ಟು ಹತ್ತು ಟೀಮ್ ಒಂದು ಪ್ರಶಸ್ತಿಗಾಗಿ ಮುಂದಿನ ಆವೃತ್ತಿಯಿಂದ ಹೋರಾಟ ನಡೆಸಲಿದೆ. ಹೀಗಾಗಿ ಪ್ರತಿ ತಂಡ 18ನೇ ಸೀಸನ್​ ಐಪಿಎಲ್​ಗೆ ಮುನ್ನ ಸಂಪೂರ್ಣ ಬದಲಾಗಲಿದೆ. ರಾಯಲ್ ಚಾಲೆಂಜರ್ಸ್​ ಬೆಂಗಳೂರು ಕೂಡ ಇದರಿಂದ ಹೊರತಾಗಿಲ್ಲ. ಸದ್ಯ 2025 ಐಪಿಎಲ್​​ ಸೀಸನ್​ಗೆ ರಿಟೆನ್ಷನ್ ಪಾಲಿಸಿಯಲ್ಲಿ ಭಾರೀ ಬದಲಾವಣೆ ಆಗಲಿದ್ದು, ಇದು ಆರ್​​​ಸಿಬಿಗೆ ಬಿಗ್​ ಶಾಕ್​ ಕಾದಿದೆ.

ಸದ್ಯ ಬಿಸಿಸಿಐ 2025ರ ಐಪಿಎಲ್​ ಸೀಸನ್​​ಗೆ ರಿಟೆನ್ಷನ್ ಪಾಲಿಸಿಯಲ್ಲಿ ಬದಲಾವಣೆ ತರಲು ಮುಂದಾಗಿದೆ. ಇದಕ್ಕೆ ಎಲ್ಲಾ ಫ್ರಾಂಚೈಸಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಒಂದು ಟೀಮ್​ ಮಾತ್ರ 8 ಮಂದಿ ಆಟಗಾರರನ್ನು ರಿಟೈನ್​ ಮಾಡಿಕೊಳ್ಳುವ ಪ್ರಸ್ತಾಪ ಇಟ್ಟಿದೆ. ಇನ್ನು, ಕೆಲವು ಟೀಮ್​ಗಳು 5-7 ಮಂದಿ ಆಟಗಾರರು ರಿಟೈನ್​ ಆಗಬಹುದು ಎಂದಿವೆ. ಉಳಿದ ಬಹುತೇಕ ಟೀಮ್​ಗಳು ಜೀರೋ ರಿಟೆನ್ಷನ್​​​ ಪಾಲಿಸಿ ಮಾಡಿ ಎಂದು ಪಟ್ಟು ಹಿಡಿದಿವೆ ಎಂದು ತಿಳಿದು ಬಂದಿದೆ. ಒಂದು ವೇಳೆ ಬಿಸಿಸಿಐ ಜೀರೋ ರಿಟೆನ್ಷನ್​ ಪಾಲಿಸಿ ಮಾಡಿದ್ರೆ ಎಲ್ಲಾ ಆಟಗಾರರು ಆಕ್ಷನ್​ಗೆ ಬರಬೇಕಾಗುತ್ತದೆ.

ಇನ್ನು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಆಟಗಾರರನ್ನು ಆಕ್ಷನ್​ಗೆ ಬಿಡಬೇಕು. ಬಳಿಕ ಆಕ್ಷನ್​ನಲ್ಲಿ ತಮಗೆ ಬೇಕಾದ ಆಟಗಾರರ ಖರೀದಿ ಮಾಡಬೇಕಿದೆ. ಇದು ಆರ್​​ಸಿಬಿ ಸೇರಿದಂತೆ ಹಲವು ತಂಡಗಳಿಗೆ ದೊಡ್ಡ ತಲೆನೋವಾಗಿದೆ.

ಐಪಿಎಲ್​ ಶುರುವಾಗಿ ಬರೋಬ್ಬರಿ 17 ವರ್ಷಗಳು ಕಳೆದಿವೆ. ಆರಂಭದಿಂದಲೂ ವಿರಾಟ್​ ಕೊಹ್ಲಿ ಆರ್​​ಸಿಬಿ ತಂಡದ ಭಾಗವಾಗಿದ್ದಾರೆ. ಕಳೆದ ಸೀಸನ್​ನಲ್ಲೂ ಆರ್​​ಸಿಬಿ 15 ಕೋಟಿಗೆ ಕೊಹ್ಲಿಯನ್ನು ರಿಟೈನ್​ ಮಾಡಿಕೊಂಡಿತ್ತು. ಈಗ ಜೀರೋ ರಿಟೆನ್ಷನ್​ ಪಾಲಿಸಿ ಜಾರಿಗೆ ಬಂದರೆ ಕೊಹ್ಲಿಯನ್ನು ರಿಟೈನ್​ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ರೋಹಿತ್​ ಶರ್ಮಾನೇ ಆರ್​​​ಸಿಬಿ ಕ್ಯಾಪ್ಟನ್​​​ ಆಗಲಿ ಎಂದು ಪಟ್ಟು ಹಿಡಿದ ಕೊಹ್ಲಿ? ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2025: ಕೊಹ್ಲಿಯನ್ನು ರಿಟೈನ್​ ಮಾಡಿಕೊಳ್ಳಬೇಕು ಎಂದಿದ್ದ ಆರ್​​ಸಿಬಿಗೆ ಬಿಗ್​ ಶಾಕ್​​

https://newsfirstlive.com/wp-content/uploads/2024/05/Virat-Kohli-RCB-2.jpg

Load More