newsfirstkannada.com

ದರ್ಶನ್​ಗೆ ಮರಣ ದಂಡನೆ, ಗಲ್ಲು ಶಿಕ್ಷೆನೂ ಆಗಬಹುದಾ.. ನಿವೃತ್ತ ACP ಜಿ.ಎನ್ ಮೋಹನ್ ಹೇಳಿದ್ದು ಏನು?

Share :

Published June 14, 2024 at 7:35pm

Update June 14, 2024 at 7:38pm

  ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರುವ​ ಕೇಸ್​ ಕೂಡ ಇದೆ

  ಈ ಪ್ರಕರಣ ಯಾರ, ಯಾರ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.?

  ದರ್ಶನ್​​ ಗ್ಯಾಂಗ್​ಗೆ ಎಷ್ಟು ವರ್ಷವರೆಗೆ ಶಿಕ್ಷೆಯಾಗಬಹುದು ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿರುವ ಆರೋಪದ ಮೇಲೆ ನಟ ದರ್ಶನ್, ಪವಿತ್ರಾಗೌಡ ಮತ್ತವರ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ರಾಜ್ಯದಲ್ಲಿ ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ಸಂಚಲನ ಸೃಷ್ಟಿಸಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ನಿಜವೆಂದು ಸಾಬೀತು ಆದ್ರೆ ಎಷ್ಟು ಶಿಕ್ಷೆ ಆಗುತ್ತದೆ ಎಂದು ನಿವೃತ್ತ ACP ಜಿ.ಎನ್​ ಮೋಹನ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ದರ್ಶನ್ ಅರೆಸ್ಟ್ ಆಗಿದ್ದೆ ರೋಚಕ.. ಪೊಲೀಸರ ಕಾರ್ಯಕ್ಕೆ ನಟಿ ರಮ್ಯಾ ಮೆಚ್ಚುಗೆ

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ನಿವೃತ್ತ ACP ಜಿ.ಎನ್​ ಮೋಹನ್ ಅವರು, ಈಗಾಗಲೇ ಮರ್ಡರ್ ಕೇಸ್ ಎಂದು ಆಗೋಗಿದೆ. ಹತ್ಯೆ ಕೇಸ್ ಎಂದರೆ ಮಿನಿಮಮ್​ 10 ಗಂಟೆಗಳವರೆಗೆ ಶಿಕ್ಷೆ ಇದೆ. ಇದು ಬಿಟ್ಟರೆ ಮ್ಯಾಕ್ಸಿಮಮ್​ ಜೀವಾವಧಿ ಶಿಕ್ಷೆ ಇದೆ. ಇದಕ್ಕಿಂತ ದೊಡ್ಡ ಶಿಕ್ಷೆ ಮರಣ ದಂಡನೆಯು ಇದೆ. 10 ವರ್ಷಕ್ಕಿಂತ ಕೆಳಗಿನ ಶಿಕ್ಷೆ ಯಾವುದು ಇಲ್ಲ. 201 ಐಪಿಸಿ ಸೆಕ್ಷನ್ ಹಾಗೂ ಕಿಡ್ನಾಪ್​ ಕೇಸ್​ ಕೂಡ ಇದರಲ್ಲಿ ಸೇರಿಸಲಾಗಿದೆ. ಬೇರೆ ಬೇರೆ ಪ್ರಭಾವಗಳನ್ನು ಇದರಲ್ಲಿ ಬಳಸಿಕೊಂಡು ಸಾಕ್ಷಿಗಳನ್ನು ನಾಶ ಮಾಡಲು ಯತ್ನಿಸಲಾಗಿದೆ. ಹೀಗಾಗಿ ಈ ಎಲ್ಲ ಆಧಾರಗಳು ಹಾಗೂ ಸಾಕ್ಷಿಗಳು ಹೇಳುವ ಮಾತಿನ ಮೇಲೆ ನ್ಯಾಯಾಧೀಶರು ನಿರ್ಧಾರ ಮಾಡ್ತಾರೆ. ಇದರ ಮೇಲೆ ಕೋರ್ಟ್​ ಶಿಕ್ಷೆಯನ್ನು ನೀಡುವ ತೀರ್ಮಾನ ಮಾಡುತ್ತದೆ. ಆದ್ರೆ ಇಲ್ಲಿ ಸಾಕ್ಷಿಗಳೇ ಅತಿ ಮುಖ್ಯವಾದ ಕೆಲಸ ಮಾಡುತ್ತಾವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಕ್ರೂರತ್ವ, ಮೃಗಿಯ ಗುಣಗಳು ದರ್ಶನ್​ನಲ್ಲಿವೆ’.. ಶಿಕ್ಷೆ ಹೇಗಿರಬೇಕಂತ ಮಾಜಿ ಸಚಿವ ಹೇಳಿದ್ರು?

ಈ ಕೇಸ್​ ಪೊಲೀಸರು ಹಾಗೂ ಸರ್ಕಾರಿ ಅಭಿಯೋಜಕರ (prosecutor) ಮೇಲೆ ನಿಂತಿದೆ. ಪೊಲೀಸರು ನೀಡಿದಂತ ಪ್ರತಿ ಸಾಕ್ಷಿಯನ್ನು ಕೋರ್ಟ್​ ಮುಂದೆ ಅಭಿಯೋಜಕರು ಹೇಳುತ್ತಾರೆ. ದೋಷರೋಪಣಾ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ ಮೇಲೆ ಇದರ ಮೇಲೆ ಅಭಿಯೋಜಕರು ವಾದ ಮಾಡುತ್ತಾರೆ. ಇಲ್ಲಿ ಯಾರೂ ತಪ್ಪಿಸಿಕೊಳ್ಳೋಕೆ ಆಗಲ್ಲ. ಜಾಮೀನಿಗಾಗಿ ಸ್ಟ್ರಾಂಗ್ ಆಗಿ ಅಬ್ಜೆಕ್ಷನ್ ಹಾಕಬೇಡಿ ಎನ್ನುವ ಕಾರಣಕ್ಕೆ ಪಿಪಿ (Public Prosecutors)ಗೂ ಕೂಡ ಪ್ರಭಾವಕ್ಕೆ ಒಳಪಡಿಸೋಕೆ ಪ್ರಯತ್ನ ಪಡಬಹುದು. ಎಸ್​​ಪಿಪಿ (Special Public Prosecutors)ಯವರು ಅಷ್ಟು ಸುಲಭವಾಗಿ ಮಾಡೋಕೆ ಆಗಲ್ಲ. ಪೊಲೀಸರು ನೀಡಿದ ದಾಖಲೆಗಳ ಮೇಲೆ ವಾದ ಮಾಡಬೇಕು. ಜಾಮೀನು ಮೇಲೆ ಆರೋಪಿಗಳನ್ನು ಹೊರ ಬಿಟ್ಟರೇ ಯಾವೆಲ್ಲ ಅನಾಹುತಗಳು ಆಗೋ ಸಾಧ್ಯತೆ ಇದೆ. ಸಮಾಜಕ್ಕೆ ಯಾವ ರೀತಿ ಸಂದೇಶ ಹೋಗ್ತಾವೆ ಎನ್ನುವುದನ್ನು ಕೋರ್ಟ್​ನಲ್ಲಿ ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​ಗೆ ಮರಣ ದಂಡನೆ, ಗಲ್ಲು ಶಿಕ್ಷೆನೂ ಆಗಬಹುದಾ.. ನಿವೃತ್ತ ACP ಜಿ.ಎನ್ ಮೋಹನ್ ಹೇಳಿದ್ದು ಏನು?

https://newsfirstlive.com/wp-content/uploads/2024/06/DARSHAN_GN_MOHAN.jpg

Load More