newsfirstkannada.com

ಹನಿಟ್ರ್ಯಾಪ್‌ಗೆ ಮಾಜಿ ಯೋಧ ಆತ್ಮಹತ್ಯೆ.. ಐವರು ಅರೆಸ್ಟ್​; ವಿವಾಹಿತ ಮಹಿಳೆ ಮಾಯಾಜಾಲ ಹೇಗಿತ್ತು ಗೊತ್ತಾ?

Share :

11-11-2023

    ಸಂದೇಶ್ ಡೆತ್ ನೋಟ್‌‌ನಲ್ಲಿ ಜೀವಿತ ಹನಿಟ್ರ್ಯಾಪ್ ಮಾಡಿರುವ ಆರೋಪ

    ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರ ಶೋಧ

    ಜೀವಿತಾ, ಮಂಜುಳಾ, ಪ್ರವೀಣ, ದಿವ್ಯಾ, ಅಯ್ಯಪ್ಪ ಬಂಧಿತ ಆರೋಪಿಗಳು

ಮಡಿಕೇರಿ: ಡೆತ್​ನೋಟ್ ಬರೆದಿಟ್ಟು ನಿವೃತ್ತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೀವಿತಾ, ಮಂಜುಳಾ, ಪ್ರವೀಣ, ದಿವ್ಯಾ, ಅಯ್ಯಪ್ಪ ಬಂಧಿತ ಆರೋಪಿಗಳು.

ಕಳೆದ ಮೂರು ದಿನಗಳ ಹಿಂದೆ ನಿವೃತ್ತ ಯೋಧ ಸಂದೇಶ್ ಎಂಬುವವರು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಕ್ಕುಡ ನಿವಾಸಿಯಾಗಿದ್ದ ಸಂದೇಶ್​ ಅವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳು ಕಿರುಕುಳ ನೀಡುತ್ತಿದ್ದಳಂತೆ ಎಂದು ಡೆತ್​ನೋಟ್​ನಲ್ಲಿ ಹನಿಟ್ರ್ಯಾಪ್ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಇನ್ನಿಬ್ಬರು ಆರೊಪಿಗಳಾದ ಸತ್ಯ ಹಾಗೂ ಸತೀಶ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ನಿವೃತ್ತ ಯೋಧ ಬರೆದಿಟ್ಟ ಡೆತ್‌ ನೋಟ್‌ನಲ್ಲಿ ಏನಿತ್ತು?

ವಿವಾಹಿತ ಮಹಿಳೆ, ಆಕೆಯ ತಾಯಿ ಮತ್ತು ತಂಗಿ ಸೇರಿಕೊಂಡು ನನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಆ ಮೂವರು ನನ್ನ ಸಾವಿಗೆ ಕಾರಣ. ಮಹಿಳೆಯ ಅನೈತಿಕ ಸಂಬಂಧಗಳು ನನಗೆ ತಿಳಿದು ಬಂದ ಬಳಿಕ ಅವರೆಲ್ಲರೂ ನನ್ನನ್ನು ಫಾಲೋ ಮಾಡಲು, ಮೆಂಟಲ್‌ ಟಾರ್ಚರ್‌ ನೀಡಲು ಶುರು ಮಾಡಿದರು. ರೆಸಾರ್ಟ್‌ ಒಂದರ ಮಾಲೀಕ, ಒಬ್ಬ ಪೊಲೀಸ್‌ ಹಾಗೂ ಇತರೆ ಇಬ್ಬರು ಹೆಸರನ್ನು ಸಂದೇಶ್‌ ಉಲ್ಲೇಖಿಸಿದ್ದರು. ನನ್ನ ಒಂದು ಕಾರು ಮತ್ತು ಎಲ್ಲ ಡಾಕ್ಯುಮೆಂಟ್ಸ್‌ ಆಕೆಯ ಮನೆಯಲ್ಲಿದೆ ಎಂದು ಸಂದೇಶ್‌ ಡೆತ್‌ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಹನಿಟ್ರ್ಯಾಪ್‌ಗೆ ಮಾಜಿ ಯೋಧ ಆತ್ಮಹತ್ಯೆ.. ಐವರು ಅರೆಸ್ಟ್​; ವಿವಾಹಿತ ಮಹಿಳೆ ಮಾಯಾಜಾಲ ಹೇಗಿತ್ತು ಗೊತ್ತಾ?

https://newsfirstlive.com/wp-content/uploads/2023/11/death-2023-11-11T064011.969.jpg

Load More