ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದ ಘಟನೆ
ಕೆರೆ ಬಳಿ ಪತ್ತೆಯಾಯ್ತು ಯೋಧನ ಮೊಬೈಲ್, ಚಪ್ಪಲಿ!
ನಿವೃತ್ತ ಯೋಧ ಬರೆದಿಟ್ಟ ಡೆತ್ನೋಟ್ನಲ್ಲಿ ಏನಿದೆ?
ಮಡಿಕೇರಿ: ಡೆತ್ನೋಟ್ ಬರೆದಿಟ್ಟು ನಿವೃತ್ತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಸಂದೇಶ್ ಮೃತ ಯೋಧ. ಉಕ್ಕುಡ ನಿವಾಸಿಯಾಗಿದ್ದ ಸಂದೇಶ್ ಅವರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳು ಕಿರುಕುಳ ನೀಡುತ್ತಿದ್ದಳಂತೆ. ಹೀಗಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿ ಸಂದೇಶ್ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂದೇಶ್ ಪತ್ನಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂದೇಶ್ಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂದೇಶ್ ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾದ ಸ್ಥಳದಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಡೆತ್ ನೋಟ್‌ನಲ್ಲಿ ಏನಿದೆ?
ವಿವಾಹಿತ ಮಹಿಳೆ, ಆಕೆಯ ತಾಯಿ ಮತ್ತು ತಂಗಿ ಸೇರಿಕೊಂಡು ನನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಮೂವರು ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ. ಮಹಿಳೆಯ ಅನೈತಿಕ ಸಂಬಂಧಗಳು ನನಗೆ ತಿಳಿದುಬಂದ ಬಳಿಕ ಅವರೆಲ್ಲರೂ ನನ್ನನ್ನು ಫಾಲೋ ಮಾಡಲು, ಮೆಂಟಲ್ ಟಾರ್ಚರ್ ನೀಡಲು ಶುರು ಮಾಡಿದರು ಎಂದು ರೆಸಾರ್ಟ್ ಒಂದರ ಮಾಲೀಕ, ಒಬ್ಬ ಪೊಲೀಸ್ ಹಾಗೂ ಇಬ್ಬರು ಇತರರ ಹೆಸರನ್ನು ಸಂದೇಶ್ ಉಲ್ಲೇಖಿಸಿದ್ದಾರೆ. ನನ್ನ ಒಂದು ಕಾರು ಮತ್ತು ಎಲ್ಲ ಡಾಕ್ಯುಮೆಂಟ್ಸ್ ಆಕೆಯ ಮನೆಯಲ್ಲಿದೆ ಎಂದು ಸಂದೇಶ್ ಡೆತ್ ನೋಟ್‌ನಲ್ಲಿ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ