ಕಾಂಗ್ರೆಸ್, ಬಿಜೆಪಿ ಮಧ್ಯೆ ತಾರಕಕ್ಕೇರಿದ ರೈಸ್ ರಾಜಕೀಯ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಸಿದ್ದು ಕಿಡಿ
ಮುಂದಿನ ತಿಂಗಳಿನಿಂದಲೇ 10 ಕೆಜಿ ಅಕ್ಕಿ ಸಿಗೋದು ಡೌಟ್
ಬೆಂಗಳೂರು: ಶಕ್ತಿ ಯೋಜನೆಯನ್ನ ಸಲೀಸಾಗಿ ಜಾರಿಗೆ ತಂದ ಸರ್ಕಾರ ಗೃಹಜ್ಯೋತಿಗೂ ಅರ್ಜಿ ಆಹ್ವಾನಿಸಿ ಸ್ವೀಕರಿಸುತ್ತಿದೆ. ಆದ್ರೆ ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ಕೊಡಲು ಮಾತ್ರ ಕಾಂಗ್ರೆಸ್ ಸರ್ಕಾರ ಪರದಾಡ್ತಿದೆ. ಕೇಂದ್ರದ ವಿರುದ್ಧ ತಿಕ್ಕಾಟ ನಡೆಸುತ್ತಾ ಇಂದು ನಾಳೆ ಅಂತ ಅಕ್ಕಿ ಕೊಡುವುದನ್ನು ಮುಂದಕ್ಕೆ ಹಾಕುತ್ತಿದೆ. ಇದನ್ನೆಲ್ಲ ನೋಡಿದ್ರೆ ಅಕ್ಕಿ ಸಿಗೋದು ಮತ್ತಷ್ಟು ವಿಳಂಬವಾಗೋದ್ರಲ್ಲಿ ಡೌಟೇ ಇಲ್ಲ ಅನ್ನುವಂತಿದೆ.
ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ನಡುವೆ ಅಕ್ಕಿ ಯುದ್ಧ ಮುಂದುವರೆದಿದೆ. ಮತ್ತೆ ಎರಡೂ ಪಕ್ಷಗಳ ನಾಯಕರು ಮಾತಿನ ಮಲ್ಲಯುದ್ಧ ಮುಂದುವರೆಸಿದ್ದಾರೆ. ಮೊದಲೇ ಪ್ಲಾನ್ ಮಾಡದೇ ಏಕಾಏಕಿ ಅಧಿಕಾರಕ್ಕೆ ಬಂದ ಮೇಲೆ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಈಗ ಗದ್ದುಗೆ ಹಿಡಿದ ಮೇಲೆ ಅಕ್ಕಿ ಕೊಡಲು ಪರದಾಡ್ತಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡ್ತಿದೆ. ಅನ್ನರಾಮಯ್ಯ, ಗ್ಯಾರಂಟಿರಾಮಯ್ಯ ಎನಿಸಿಕೊಂಡ ಸಿಎಂ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
‘ಬಿಜೆಪಿಗೆ ಬಡವರ ಬಗ್ಗೆ ಯೋಚನೆ ಇದ್ರೆ ಕೇಂದ್ರದಿಂದ ಅಕ್ಕಿ ಕೊಡಿಸಲಿ’
ಬಿಜೆಪಿಗೆ ಬಡವರ ಬಗ್ಗೆ ಯೋಚನೆ ಇದ್ರೆ ಕೇಂದ್ರದಿಂದ ಅಕ್ಕಿ ಕೊಡಿಸಲಿ. ರಸ್ತೆಗಿಳಿಯೋದು ಬಿಟ್ಟು, ರಾಜ್ಯಕ್ಕೆ ಅಕ್ಕಿ ಕೊಡಿ ಅಂತ ಕೇಳಲಿ ಎಂದು ಪ್ರತಿಭಟನೆಗೆ ಕರೆ ಕೊಟ್ಟಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ ನಾವು ದುಡ್ಡು ಕೊಡ್ತೀವಿ. ಕೇಂದ್ರ ಸರ್ಕಾರದಿಂದ ಅಕ್ಕಿ ಕೊಡಿಸಲಿ ಎಂದಿದ್ದಾರೆ. ಗ್ಯಾರಂಟಿ ಜಾರಿಯಾದಮೇಲೆ ನಮಗೂ ಏನು ಮಾಡಬೇಕು ಎಂದು ಗೊತ್ತಿದೆ ಎಂದು ಬಿಎಸ್ವೈಗೆ ಸಿದ್ದರಾಮಯ್ಯ ವಾರ್ನಿಂಗ್ ಕೊಟ್ಟಿದ್ದಾರೆ.
ಕುಣಿಯಲು ಬಾರದವರು ರಂಗಸ್ಥಳ ಸರಿ ಇಲ್ಲ ಎಂದರಂತೆ
ಇನ್ನು ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಮಾತನಾಡ್ತಿದ್ದಂತೆ ಮಾಜಿ ಸಿಎಂ ಸದಾನಂದ ಗೌಡ ರಂಗಪ್ರವೇಶ ಮಾಡಿದ್ದಾರೆ. ಕುಣಿಯಲು ಬಾರದವಳು ರಂಗಸ್ಥಳ ಸರಿ ಇಲ್ಲ ಎಂದಳಂತೆ. ಕಾಂಗ್ರೆಸ್ ಮುಂದಾಲೋಚನೆ ಇಲ್ಲದೇ ಘೋಷಣೆ ಮಾಡಿದ್ದಕ್ಕೆ ಹೀಗಾಗಿದೆ ಅಂತ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಅಕ್ಕಿಗಾಗಿ ಮಲ್ಲಯುದ್ದ ಮುಂದುವರೆದಿದೆ. ಮೊದಲೇ ಪ್ಲಾನ್ ಮಾಡದೇ ಕಾಂಗ್ರೆಸ್ ಗ್ಯಾರಂಟಿಗಳನ್ನ ಘೋಷಿಸಿ ಈಗ ಜಾರಿಗೆ ತರಲು ಇಕ್ಕಟ್ಟಿಗೆ ಸಿಲುಕಿದೆ. ಇದನ್ನೇ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಬೆಂಕಿಯುಂಡೆಗಳನ್ನ ಸಿಎಂ ಉಗುಳ್ತಿದ್ದಾರೆ. ಇದಕ್ಕೆ ಕೇಸರಿ ಕಲಿಗಳು ಕೂಡ ತಿರುಗೇಟು ಕೊಡ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಅಕ್ಕಿಗಾಗಿ ಜನಸಾಮಾನ್ಯ ಮಾತ್ರ ಬಡವಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ