newsfirstkannada.com

ರಾಜ್ಯದಲ್ಲಿ ‘ಅನ್ನ ಭಾಗ್ಯ’ಕ್ಕಾಗಿ ಪಾಲಿಟಿಕ್ಸ್; ಸಿದ್ದರಾಮಯ್ಯ ಆರೋಪಕ್ಕೆ ತಿರುಗಿಬಿದ್ದ ಬಿಜೆಪಿ ನಾಯಕರು..!

Share :

15-06-2023

    ಅಕ್ಕಿಗಾಗಿ ಕೇಂದ್ರದ ಜೊತೆಗೆ ಸಿದ್ದು ಟೀಂ ಕುಸ್ತಿ!

    ಸರ್ಕಾರಕ್ಕೆ ಕೌಂಟರ್​ ಕೊಡಲು BJP 5 ಪ್ಲಾನ್

    ಒಂದು ವರ್ಷಕ್ಕೆ ರಾಜ್ಯ ದೀವಾಳಿ ಆಗುತ್ತೆ -R ಅಶೋಕ್

ರಾಜ್ಯ ರಾಜಕೀಯದಲ್ಲಿ ರೈಸ್ ರಾಜಕೀಯ ಶುರುವಾಗಿದೆ. 10 ಕೆಜಿ ಅಕ್ಕಿ ಪ್ರಾಮೀಸ್ ಮಾಡಿದ್ದ ಸಿದ್ದು ಸರ್ಕಾರ, ಈಗ ಕೇಂದ್ರದಿಂದ ಅಡ್ಡಗಾಲು ನೆಪ ಹೇಳ್ತಿದೆ. ಎಫ್‌ಸಿಐನಿಂದ ಖರೀದಿಸಲು ಮುಂದಾಗಿದ್ದ ಸರ್ಕಾರಕ್ಕೆ ಕೊನೆ ಕ್ಷಣದಲ್ಲಿ ಅಕ್ಕಿ ಕೊಡಲು ನಿರಾಕರಿಸಿದೆ. ಈ ಬೆಳವಣಿಗೆ ಮುಂದಿನ ತಿಂಗಳಿಂದ ಅಕ್ಕಿ ಕೊಡುವ ವಾಗ್ದಾನ ಮಾಡಿದ್ದ ಸಿದ್ದರಾಮಯ್ಯ, ಕೇಂದ್ರದ ಜೊತೆ ಕುಸ್ತಿಗೆ ಬಿದ್ದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಕೂಡ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಅಕ್ಕಿಗಾಗಿ ಕೇಂದ್ರ ಜೊತೆಗೆ ಸಿದ್ದು ಟೀಂ ಕುಸ್ತಿ!

ಕಾಂಗ್ರೆಸ್​ನ ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಕೂಡ ಒಂದು.. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಸರ್ಕಾರ ಸಿದ್ದತೆ ನಡೆಸಿತ್ತು. ಆದ್ರೆ, ಎಫ್ಸಿಐ ಮೂಲಕ ಅಕ್ಕಿ ಖರೀದಿಸಲು ಮುಂದಾಗಿದ್ದ ರಾಜ್ಯಕ್ಕೆ ಅಕ್ಕಿ ಕೊಡದಿರಲು ಸಂಸ್ಥೆ ನಿರ್ಧರಿಸಿದೆಯಂತೆ. ಈ ಹಿಂದೆ ಒಪ್ಪಿದ್ದ ಸಂಸ್ಥೆ, ಕೇಂದ್ರದ ಕುಮ್ಮಕ್ಕಿನಿಂದ ಉಲ್ಟಾ ಹೊಡೆದಿದೆ ಅಂತ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಆರೋಪವನ್ನ ಬಿಜೆಪಿ ತಳ್ಳಿ ಹಾಕ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದ ಅಕ್ಕಿಗೆ ತಮ್ಮ ಪೋಟೋ ಅಂಟಿಸಿದ್ರು.. ಈಗ ಪೂರೈಸಲು ಆಗದೆ ಮೋದಿ ಸರ್ಕಾರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲ, ಅಸಮರ್ಥ ರಾಜಕಾರಣ ಅಂತ ಟೀಕಿಸಿದ್ದಾರೆ.

ಇನ್ಮೇಲೆ ಇವರ ಹತ್ತಿರ ಏನೇ ಮಾಡಲು ಆಗದಿದ್ದರೂ, ಅದನ್ನು ಕೇಂದ್ರ ಸರ್ಕಾರದ ಮೇಲೆ ತೋರಿಸುತ್ತಾರೆ. ಇನ್ನು ಒಂದು ವರ್ಷಕ್ಕೆ ರಾಜ್ಯ ದಿವಾಳಿ ಆಗಲಿದೆ. ದೀವಾಳಿ ಎದ್ದ ಮೇಲೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಸ್ಟೇಟ್​​ಮೆಂಟ್​ ಏನೆಂದರೆ, ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಲಿಲ್ಲ. ಬರಬೇಕಾದ ದುಡ್ಡು ಬರಲಿಲ್ಲ. ಅದಕ್ಕಾಗಿ ನಮ್ಮ ಬಳಿ ಏನೂ ಮಾಡಲು ಆಗಲಿಲ್ಲ ಎಂದು ದೂರುತ್ತಾರೆ ಎಂದು ಮಾಜಿ ಸಚಿವ ಆರ್​.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ನಾವು 10 ಕೆಜಿ ಅಕ್ಕಿ ಕೊಡ್ತೀವಿ ಅಂತಾ ಜನಕ್ಕೆ ಮಾತು ಕೊಟ್ಟು, ಅದು ಅಸಾಧ್ಯವಾಗದಿದ್ದಾಗ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುವಂತಹ ಕೆಲಸವನ್ನು ಕಾಂಗ್ರೆಸ್​ ಸರ್ಕಾರ ಮಾಡ್ತಿದೆ.

ತೇಜಸ್ವಿ ಸೂರ್ಯ, ಬಿಜೆಪಿ ಸಂಸದ

ರೈಸ್ ರಾಜಕೀಯ.. ಇವತ್ತು ಬೊಮ್ಮಾಯಿ ಸುದ್ದಿಗೋಷ್ಠಿ

ನೇರವಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಹೊರೆಸಿದ್ದಾರೆ. ಹೀಗಾಗಿ ಸಿದ್ದು ಆಪಾದನೆಗೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಇವತ್ತು ಬೊಮ್ಮಾಯಿ ನೇತೃತ್ವದಲ್ಲಿ 11:30ಕ್ಕೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ಕರೆದಿದೆ.

ಬಿಜೆಪಿ ಕೌಂಟರ್ ಪ್ಲಾನ್!

1. ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಎಡವಿದ್ದಾಗಿದೆ
2. ಸಿದ್ದು ಆರೋಪ ಲೋಕಸಭೆಯಲ್ಲೂ ಬಿಜೆಪಿ ಮೇಲೆ ಎಫೆಕ್ಟ್
3. ಯೋಜನೆ ಎರಡು ಪಕ್ಷಗಳದ್ದು ಎಂದು ಒಪ್ಪಲು ವೇದಿಕೆ ಸೃಷ್ಟಿ
4. ಸಿದ್ದರಾಮಯ್ಯಗೆ ಬಂದ ಮಾಹಿತಿಯೇ ಸುಳ್ಳು ಎಂದು ಟಕ್ಕರ್
5. ಕೊಟ್ಟ ಮಾತಿನಂತೆ 10 ಕೆ.ಜಿ ಅಕ್ಕಿ ನೀಡುವಂತೆ ಒತ್ತಾಯ

ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ 5 ಗ್ಯಾರೆಂಟಿಗಳ ಬಗ್ಗೆಯೂ ಟಕ್ಕರ್ ಕೊಡಲು ಬಿಜೆಪಿ ಮಾಸ್ಟರ್‌ ಪ್ಲಾನ್ ರೂಪಿಸಿದೆ. ಶಕ್ತಿ ಯೋಜನೆ ನ್ಯೂನತೆ ಸರಿಪಡಿಸುವಂತೆ ಒತ್ತಾಯಿಸಲಿದ್ದಾರೆ. ಇಷ್ಟು ಮಾತ್ರವಲ್ಲದೇ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಗೊಂದಲ ನಿವಾರಣೆಗೆ ಹೋರಾಟ ನಡೆಸಲು ಬಿಜೆಪಿ ತೆರೆಮರೆಯಲ್ಲಿ ಸಜ್ಜಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ‘ಅನ್ನ ಭಾಗ್ಯ’ಕ್ಕಾಗಿ ಪಾಲಿಟಿಕ್ಸ್; ಸಿದ್ದರಾಮಯ್ಯ ಆರೋಪಕ್ಕೆ ತಿರುಗಿಬಿದ್ದ ಬಿಜೆಪಿ ನಾಯಕರು..!

https://newsfirstlive.com/wp-content/uploads/2023/06/SIDDU_MODI.jpg

Load More