newsfirstkannada.com

ರಾಜ್ಯದಲ್ಲಿ ಆಡಳಿತ-ವಿರೋಧ ಪಕ್ಷಗಳ ಅಕ್ಕಿ ಯುದ್ಧ; ಇಂದು ಕಾಂಗ್ರೆಸ್-ಬಿಜೆಪಿಯಿಂದ ಪ್ರತಿಭಟನೆ!

Share :

20-06-2023

    ‘ಕೈ’-ಕಮಲ ನಾಯಕರ ಮಧ್ಯೆ ಅಕ್ಕಿ ವಾಕ್ಸಮರ

    ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ‘ಕೈ’ ಪ್ರತಿಭಟನೆ

    ಸಿಎಂ ಸಿದ್ದು ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ

ರಾಜ್ಯದಲ್ಲಿ ರೈಸ್ ರಾಜಕೀಯ ಮತ್ತಷ್ಟು ತಾರಕ್ಕೇರುತ್ತಿದೆ. ಇಂದು ಕೈ-ಕಮಲ ನಾಯಕರು ಅಕ್ಕಿ ಯುದ್ಧ ಮಾಡಲು ಬೀದಿಗೆ ಇಳಿಯುತ್ತಿದ್ದಾರೆ. ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಡ್ಡಗಾಲು ಹಾಕ್ತಿದೆ ಅಂತಾ ಕೈ ಪ್ರತಿಭಟನೆ ಹಾದಿ ತುಳಿದಿದ್ರೆ, ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯವನ್ನ ವಿಳಂಬ ಮಾಡ್ತಿದೆ ಅಂತಾ ಕೇಸರಿ ಸೇನೆ ಬೀದಿಗಿಳಿಯಲು ಸಜ್ಜಾಗಿದೆ. ಇದ್ರ ಮಧ್ಯೆ ‘ಕೈ’-ಕಮಲ ನಾಯಕರ ಮಧ್ಯೆ ಅಕ್ಕಿ ವಾಕ್ಸಮರ ಮುಗಿಯದಾಗಿದೆ. ಫುಡ್ ಕಾರ್ಪೊರೇಷನ್‌ ಆಫ್‌ ಇಂಡಿಯಾ ಯಾವಾಗ ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ನಿರಾಕರಿಸ್ತೋ ಅಂದಿನಿಂದ ರಾಜ್ಯದಲ್ಲಿ ರೈಸ್‌ ರಾದ್ಧಾಂತ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರದ ವಿರುದ್ಧ ಕೈ ಪಾಳಯ ಅಕ್ಕಿ ವಾಕ್ಸಮರ ನಡೆಸ್ತಿದೆ. ಮೋದಿ ಕಡೆ ಬೊಟ್ಟು ಮಾಡ್ತಿರೋದಕ್ಕೆ ಬಿಜೆಪಿ ಸಿಡಿದೆದ್ದಿದೆ. ಇದೀಗ ರಾಜ್ಯದಲ್ಲಿ ಇಂದು ಮತ್ತೊಂದು ಸುತ್ತಿನ ರೈಸ್ ಸಮರ ಮತ್ತಷ್ಟು ಜೋರಾಗಲಿದೆ.

ಕೇಂದ್ರ ಸರ್ಕಾರ ನಮ್ಮ ಬಡವರಿಗೆ ಅಕ್ಕಿ ಕೊಡಬಾರದು ಎಂದು ನಮಗೆ ತೊಂದರೆ ಕೊಡಲು ಹೊರಟಿದ್ದಾರೆ. ನಾವೇನು ಪುಗಸಟ್ಟೆಯಾಗಿ ಕೊಡಿ ಎಂದು ಕೇಳುತ್ತಿಲ್ಲ. ಅದಕ್ಕೆ ಒಂದು ಪದ್ದತಿ ಇದೆ ಮೊದಲಿನಿಂದಲೂ ಹೇಗೆ ಅಕ್ಕಿಯನ್ನು ಕೊಡುತ್ತಿದ್ದರೋ ಹಾಗೇ ಕೊಡಲಿಲ್ಲ ಅಂದರೆ ನಾವು ಪ್ರತಿಭಟನೆ ನಡೆಸಲು ಸಿದ್ಧ.

– ಡಿಸಿಎಂ ಡಿಕೆ ಶಿವಕುಮಾರ್​​

ರಾಜ್ಯದಲ್ಲಿ ಮತ್ತಷ್ಟು ತಾರಕಕ್ಕೇರಿದ ಅಕ್ಕಿ ಯುದ್ಧ
ಇಂದು ಕಾಂಗ್ರೆಸ್-ಬಿಜೆಪಿಯಿಂದ ಅಕ್ಕಿ ಪ್ರತಿಭಟನೆ

ಕಳೆದ 1 ವಾರದಿಂದ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಅಕ್ಕಿ ವಾಕ್ಸಮರ ನಡೆಯುತ್ತಲೇ ಇದೆ. ಎಫ್‌ಸಿಐ ಅನ್ನಭಾಗ್ಯಕ್ಕೆ ಅಡ್ಡಗಾಲು ಹಾಕಿದೆ ಅಂತಾ ಕಾಂಗ್ರೆಸ್ ಆರೋಪಿಸಿದೆ. ಹೀಗಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸೋದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆಕೊಟ್ಟಿದ್ರು. ಅದರಂತೆ ಇಂದು ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಜ್ಜಾಗಿದೆ.  ಕೇಂದ್ರದಲ್ಲಿರೋ ಮೋದಿ ಸರ್ಕಾರ ಅಕ್ಕಿ ಕೊಡುವುದಕ್ಕೆ ನಿರಾಕರಿಸುತ್ತಿದೆ. ಎಫ್‌ಸಿಐ ಮೂಲಕ ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆ ಜಾರಿಯಾಗದಂತೆ ವಿನಾಕಾರಣ ಅಡ್ಡಗಾಲು ಹಾಕುತ್ತಿದೆ ಅಂತಾ ಕಾಂಗ್ರೆಸ್ ಆರೋಪಿಸ್ತಿದೆ. ಅಲ್ಲದೇ ಖಾಸಗಿಯವರಿಗೆ ಅಕ್ಕಿ ಮಾರಾಟ ಮಾಡುತ್ತಿದೆ. ಆದ್ರೆ ರಾಜ್ಯದಲ್ಲಿ ಮಾತ್ರ ರೈಸ್‌ನಲ್ಲೂ ರಾಜಕೀಯ ಶುರುಮಾಡಿದೆ ಅಂತಾ ಕಾಂಗ್ರೆಸ್ ಪ್ರತಿಭಟನೆ ಹಾದಿ ತುಳಿದಿದೆ.

ಇತ್ತ ಬಿಜೆಪಿ ಕೂಡಾ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಹೀಗಾಗಿ ಇಂದು ರಾಜ್ಯದಲ್ಲಿ ರೈಸ್ ವಾರ್‌ ತೀವ್ರ ಸ್ವರೂಪ ಪಡೆಯಲಿದೆ. ಜುಲೈ 1ರಿಂದಲೇ ಅನ್ನಭಾಗ್ಯ ಅಕ್ಕಿಯನ್ನ ವಿತರಿಸಬೇಕು ಅಂತಾ ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದಾರೆ. 10 ಕೆಜಿ ಅಕ್ಕಿಯಲ್ಲಿ ಒಂದು ಗ್ರಾಮ್ ಕೂಡಾ ಕಡಿಮೆ ಇರಬಾರದು ಅಂತಾ ಕೇಸರಿ ಪಡೆ ಎಚ್ಚರಿಕೆಯನ್ನ ಕೊಟ್ಟಿದೆ. ಅಲ್ಲದೇ ನುಡಿದಂತೆ ಜನರಿಗೆ ಕೊಟ್ಟ ಭರವಸೆಯನ್ನ ಶೀಘ್ರವೇ ಈಡೇರಿಸಿ ಅಂತಾ ಒತ್ತಾಯಿಸಿ ಇಂದು ಪ್ರತಿಭಟನೆ ನಡೆಸುವ ಮೂಲಕ ಕೈಗೆ ಕೌಂಟರ್ ಕೊಡಲು ಸಜ್ಜಾಗಿದೆ.

‘ಅಕ್ಕಿ ಕೊಡಕ್ಕಾಗಲ್ಲ ಅಂದ್ರೆ, ಜನರ ಅಕೌಂಟ್ ದುಡ್ಡು ಹಾಕಿ’
ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿ

ನಿಮಗೆ ಸಂಪನ್ಮೂಲವನ್ನ ಹೇಗೆ ಒದಗಿಸುವುದು ಎಂದು ಗೊತ್ತಿಲ್ಲದೇ ಪ್ರಶ್ನೆ ಮಾಡ್ತಾ ಇದ್ದೀರಿ ಅಂದರೆ ನೀವು ಬರೀ ತಮಟೆ ಹೋಡೆದಿದ್ದೀರಿ ಅಂತಾ ಆಯ್ತು. ಈಗ ನಿಮ್ಮ ಕೈಯಲ್ಲಿ ಅಕ್ಕಿ ಕೊಡಲು ಆಗ್ತಾ ಇಲ್ವಾ? ಜನರಿಗೆ ಅಕೌಂಟ್​ಗೆ ದುಡ್ಡು ಹಾಕಿ. ಇದನ್ನು ಖಂಡಿತಾ ಜನ ಬೇಡಾ ಅಂತಾ ಹೇಳೋದಿಲ್ಲ. 34 ರೂಪಾಯಿ ಕೊಟ್ಟು ಜನರೇ ಅಕ್ಕಿ ತೆಗೆದುಕೊಳ್ಳುತ್ತಾರೆ.

ಸಂಸದ ಪ್ರತಾಪ್ ಸಿಂಹ

ರಾಜ್ಯ ಸರ್ಕಾರ ಅಕ್ಕಿ ಖರೀದಿಗಾಗಿ ಅನ್ಯರಾಜ್ಯಗಳ ಮೊರೆ ಹೋಗಿದೆ. ಅಲ್ಲಿಯೂ ರಾಜ್ಯಕ್ಕೆ ಆಗುವಷ್ಟು ಅಕ್ಕಿ ಸಿಗದೇ ಕಂಗಾಲಾಗಿದೆ. ಈ ಮಧ್ಯೆ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ರೈಸ್‌ ಸಮರ ಸಾರಿದ್ದಾರೆ. ನಿಮ್ಮ ಕೈಲಿ ಅಕ್ಕಿ ಕೊಡೋಕೆ ಆಗ್ಲಿಲ್ಲ ಅಂತಾ ಜನರ ಅಕೌಂಟ್‌ಗೆ ದುಡ್ಡು ಹಾಕಿ ಅಂತಾ ಸರ್ಕಾರಕ್ಕೆ ಒತ್ತಡ ಹಾಕಿದ್ದಾರೆ.

ಬಡವರಿಗೆ ಕೊಡುವ ಅಕ್ಕಿ ವಿಚಾರದಲ್ಲೂ ರಾಜಕೀಯ
ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

ಇನ್ನೂ ಅನ್ನಭಾಗ್ಯ ಅಕ್ಕಿ ವಿಚಾರದಲ್ಲಿ ಬಿಜೆಪಿಗರು ರಾಜಕೀಯ ಮಾಡ್ತಿದ್ದಾರೆ ಅಂತಾ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಏನೇ ರಾಜಕೀಯ ಮಾಡಲಿ, ನಾವು ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸೋದಿಲ್ಲ ಅಂತಾ ಕಮಲ ಪಡೆಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ. ಒಟ್ಟಾರೆ, ರಾಜ್ಯದಲ್ಲಿ ಅಕ್ಕಿ ರಾಜಕೀಯ ಮತ್ತಷ್ಟು ತಾರಕಕ್ಕೇರಿದೆ. ನೀ ಕೊಡೆ. ನಾ ಬಿಡೆ ಎನ್ನುವಂತೆ ಮೋದಿ ಸರ್ಕಾರ ಮತ್ತು ಸಿದ್ದರಾಮಯ್ಯ ಸರ್ಕಾರದ ಮಧ್ಯೆ ಕಿತ್ತಾಟ ಜೋರಾಗಿದೆ. ಇದೀಗ ಇವರಿಬ್ಬರ ಜಗಳದಲ್ಲಿ ಅನ್ನಭಾಗ್ಯದ ಅಕ್ಕಿ ಜನರ ಹೊಟ್ಟೆಯನ್ನ ತುಂಬಿಸುತ್ತೋ? ಇಲ್ವೋ ಅನ್ನೋದೇ ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಆಡಳಿತ-ವಿರೋಧ ಪಕ್ಷಗಳ ಅಕ್ಕಿ ಯುದ್ಧ; ಇಂದು ಕಾಂಗ್ರೆಸ್-ಬಿಜೆಪಿಯಿಂದ ಪ್ರತಿಭಟನೆ!

https://newsfirstlive.com/wp-content/uploads/2023/06/SIDDU-5-1.jpg

Load More