ಗ್ಯಾರಂಟಿ ಖುಷಿಯಲ್ಲಿದ್ದ ರಾಜ್ಯದ ಜನತೆಗೆ ಮತ್ತೊಂದು ಶಾಕ್
ತರಕಾರಿ, ಮಸಾಲೆ ಪದಾರ್ಥಗಳ ಬೆನ್ನಲ್ಲೇ ಅಕ್ಕಿ ಬೆಲೆ ಏರಿಕೆ..!
ಅಕ್ಕಿ ಬೆಲೆಯೇರಿಕೆಗೆ ಜನ ಕಂಗಾಲು, ಗ್ರಾಹಕರ ಜೇಬಿಗೆ ಬಿತ್ತು ಕತ್ತರಿ
ಬೆಂಗಳೂರು: ತರಾಕರಿ ಬೆಲೆ ಗಗನಕ್ಕೇರಿದೆ. ಬೆಳೆಕಾಳು, ದಿನ ಬಳಕೆಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಕರೆಂಟ್ ಬಿಲ್ ದರ ಡಬಲ್ ಆಗಿದೆ. ಮದ್ಯದ ಬೆಲೆಯೂ ಜಾಸ್ತಿಯಾಗಿದೆ. ಹೀಗೆ ಬೆಲೆ ಏರಿಕೆಯ ಶಾಕ್ಗೆ ಒಳಗಾಗಿದ್ದ ನಿಮಗೆ ಮತ್ತೊಂದು ಶಾಕ್ ಎದುರಾಗಿದೆ. ಅದೇನೆಂದರೆ ರಾಜ್ಯದಲ್ಲಿ ಇದೀಗ ಅಕ್ಕಿ ರೇಟು ಹೆಚ್ಚಾಗಿದೆ.
ತರಕಾರಿ, ಬೇಳೆಕಾಳಾಯ್ತು.. ಇದೀಗ ಅಕ್ಕಿ ಬೆಲೆ ಏರಿಕೆ
ಹೌದು! ಒಂದಾದ ಮೇಲೊಂದರ ಬೆಲೆ ಏರಿಕೆ ಕಾಣುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಈಗ ಒಂದು ಕೆ.ಜಿ ಅಕ್ಕಿ ದರವನ್ನ 5 ರಿಂದ 10 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅಕ್ಕಿ ಬೆಲೆ ಏರಿಕೆಗೆ ಕಾರಣವೇನು..?
ಯಾವ್ಯಾವ ಅಕ್ಕಿ ದರ ಎಷ್ಟೆಷ್ಟು..?
ಕೇವಲ 40 ರೂಪಾಯಿಗೆ ಸಿಗುತ್ತಿದ್ದ RNR ಸ್ಟೀಮ್ ರೈಸ್ ಇದಿಗ 50 ರೂಪಾಯಿಗೆ ಏರಿಕೆಯಾಗಿದ್ರೆ, 55 ರೂಪಾಯಿಯಿದ್ದ RNR ರಾ ರೈಸ್ ಇದೀಗ 60 ರೂಪಾಯಿಗೆ ತನ್ನ ಬೆಲೆಯನ್ನ ಹೆಚ್ಚಿಸಿಕೊಂಡಿದೆ. ಹಾಗೆ, 55 ರೂಪಾಯಿ ಸಿಗುತ್ತಿದ್ದ ಸೋನಾ ಮಸೂರಿ ಸ್ಟೀಮ್ ರೈಸ್ಗೆ ಈಗ 60 ರೂಪಾಯಿ ಕೊಡಬೇಕು. ಹಾಗೇ 55 ರೂಪಾಯಿಯಿದ್ದ ಬುಲೆಟ್ ರೈಸ್, 72 ರೂಪಾಯಿ ಆಗಿದೆ. 59 ರೂಪಾಯಿಗೆ ಸಿಗುತ್ತಿದ್ದ ಕೋಲಮ್ ರಾ ರೈಸ್ಗೆ ಇದೀಗ 65 ರೂಪಾಯಿ ಪೇ ಮಾಡಬೇಕು. ಇನ್ನು ನುಚ್ಚು ರಾ ರೈಸ್ 25 ರೂಪಾಯಿಂದ 36 ರೂಪಾಯಿಗೆ ಏರಿದೆ. ಹಾಗೇ ಸೋನಾ ಮಸೂರಿ ರಾ ರೈಸ್ 46 ರೂಪಾಯಿಂದ 50 ರೂಪಾಯಿಗೆ ಜಿಗಿದಿದೆ.
ಅದೇನೆ ಇರಲಿ, ಅದಾಗಲೇ ಬೆಲೆ ಏರಿಕೆಯ ಶಾಕ್ನಲ್ಲಿದ್ದ ಜನರಿಗೆ ಅಕ್ಕಿ ಬೆಲೆ ಏರಿಕೆಯಾಗಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನು, ಇದೇ ರೀತಿ ಬೆಲೆ ಏರಿಕೆಯಾದ್ರೆ, ಜೀವನ ನಡೆಸೋದು ಹೇಗೆ? ಅಂತಿದ್ದಾರೆ ಜನ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ