newsfirstkannada.com

ಶುಭ್ಮನ್​​ ಗಿಲ್​​ ವಿವಾದಾತ್ಮಕ ತೀರ್ಪಿನ ಬಗ್ಗೆ ರಿಕಿ ಪಾಂಟಿಂಗ್​​ ಹೇಳಿದ್ದೇನು..?

Share :

11-06-2023

    ಶುಭ್ಮನ್​​ ಗಿಲ್​​ ವಿವಾದಾತ್ಮಕ ತೀರ್ಪಿಗೆ ಬಲಿ

    ಥರ್ಡ್​​ ಆಂಪೈರ್​ ವಿರುದ್ಧ ಭಾರೀ ಆಕ್ರೋಶ

    ವಿವಾದದ ಬಗ್ಗೆ ರಿಕಿ ಪಾಂಟಿಂಗ್​​ ಹೇಳಿದ್ದೇನು?

ಲಂಡನ್​​: ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್​​ ಶುಭ್ಮನ್​​ ಗಿಲ್​ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ಈ ಸಂಬಂಧ ಮಾತಾಡಿದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್​​ ರಿಕಿ ಪಾಂಟಿಂಗ್, ನಾನು ಗ್ರೀನ್ ಹಿಡಿದ ಕ್ಯಾಚ್​ ಅನ್ನು ಲೈವ್​ ಆಗಿ ನೋಡಿದೆ. ನಾನು ರೀಪ್ಲೆನಲ್ಲಿ ನೋಡಿದಾಗ ಥರ್ಡ್​​ ಅಂಪೈರ್​ ತೀರ್ಪು ಹೇಗೆ ನೀಡಿದ್ರು? ಎಂದು ಗೊತ್ತಾಗಲಿಲ್ಲ ಎಂದರು.

ಚೆಂಡಿನ ಒಂದು ಭಾಗ ನೆಲಕ್ಕೆ ಮುಟ್ಟಿದ್ದು ನಾನು ನೋಡಿದೆ. ಚೆಂಡು ನೆಲಕ್ಕೆ ತಗುಲುವ ಮುನ್ನವೇ ಫೀಲ್ಡರ್ ಅದನ್ನು ಕೈಗೆ ತೆಗೆದುಕೊಂಡರೆ ಔಟ್​ ಆಗಿರುತ್ತದೆ. ಕ್ಯಾಚ್​ ಸರಿಯಾಗಿ ಹಿಡಿದ ಕಾರಣ ಥರ್ಡ್​ ಅಂಪೈರ್​ ಈ​ ತೀರ್ಪು ನೀಡಿರಬಹುದು ಎಂದು ಭಾವಿಸುತ್ತೇನೆ ಎಂದರು.

ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತವೆ ಎಂದು ನನಗೆ ಗೊತ್ತಿದೆ. ಆಸ್ಟ್ರೇಲಿಯಾಗಿಂತಲೂ ಭಾರತದಲ್ಲೇ ಹೆಚ್ಚು ಚರ್ಚೆ ನಡೆಯಲಿದೆ. ಭಾರತದಲ್ಲಿ ಪ್ರತಿಯೊಬ್ಬರೂ ಇದು ಔಟ್ ಅಲ್ಲ ಎಂದು ಭಾವಿಸುತ್ತಾರೆ. ಇತ್ತ ಆಸ್ಟ್ರೇಲಿಯಾದಲ್ಲಿ ಎಲ್ಲರೂ ಔಟ್ ಎಂದು ಭಾವಿಸುತ್ತಾರೆ ಎಂದರು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ ಓಪನಿಂಗ್​​ ಬ್ಯಾಟ್ಸ್​​ಮನ್​​ ಶುಭ್ಮನ್​​ ಗಿಲ್​​ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ರೀಪ್ಲೆ ತೆಗೆದುಕೊಂಡ ಬಳಿಕ ನಾಟೌಟ್​​ ನೀಡಬೇಕಿದ್ದ ಥರ್ಡ್​​ ಅಂಪೈರ್​​ ಶುಭ್ಮನ್​​ ಗಿಲ್​ ಕ್ಯಾಚ್​ ಔಟ್​ ಎಂದು ವಿವಾದಾತ್ಮಕ ತೀರ್ಪು ನೀಡಿದ್ದು ಈಗ ಕ್ರೀಡಾ ಜಗತ್ತಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶುಭ್ಮನ್​​ ಗಿಲ್​​ ವಿವಾದಾತ್ಮಕ ತೀರ್ಪಿನ ಬಗ್ಗೆ ರಿಕಿ ಪಾಂಟಿಂಗ್​​ ಹೇಳಿದ್ದೇನು..?

https://newsfirstlive.com/wp-content/uploads/2023/06/Ricky-ponting.jpg

Load More