newsfirstkannada.com

ಸಚಿನ್​​ ದಾಖಲೆ ಸರಿಗಟ್ಟಿದ ಕೊಹ್ಲಿ.. ಈ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಪಾಂಟಿಂಗ್​​ ಏನಂದ್ರು..?

Share :

06-11-2023

    ಸಚಿನ್​ ದಾಖಲೆಯನ್ನು ಸರಿಗಟ್ಟಿದ ವಿರಾಟ್​ ಕೊಹ್ಲಿ

    ಕ್ರಿಕೆಟ್​ ಜಗತ್ತಿನಲ್ಲೇ ಹೊಸ ಇತಿಹಾಸ ಬರೆದ ಕಿಂಗ್​​!

    ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಹೇಳಿದ್ದೇನು ಗೊತ್ತಾ?

ಇತ್ತೀಚೆಗೆ ತಮ್ಮ ಹುಟ್ಟುಹಬ್ಬದಂದೇ ಸೌತ್​ ಆಫ್ರಿಕಾ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್​​​ ಪಂದ್ಯದಲ್ಲಿ ವಿರಾಟ್​​ ಕೊಹ್ಲಿ ಅಮೋಘ ಶತಕ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾದ ದಿಗ್ಗಜ ಸಚಿನ್ ತೆಂಡೂಲ್ಕರ್ 49 ಏಕದಿನ ಅಂತಾರಾಷ್ಟ್ರೀಯ ಶತಕಗಳ ದಾಖಲೆ ಸರಿಗಟ್ಟಿದರು. ಈ ಬಗ್ಗೆ ಮಾತಾಡಿದ ಆಸ್ಟ್ರೇಲಿಯಾದ ಕ್ರಿಕೆಟ್​ ದಿಗ್ಗಜ ರಿಕಿ ಪಾಂಟಿಂಗ್ ಕೊಹ್ಲಿ ಬ್ಯಾಟಿಂಗ್​ ಶೈಲಿಯನ್ನು ಹಾಡಿಹೊಗಳಿದ್ದಾರೆ.

ಸಚಿನ್ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಬಹಳ ಶ್ರಮ ಹಾಕಿದ್ದಾರೆ ಎಂದು ನಂಬಿದ್ದೇನೆ. ಅದು ಇಷ್ಟು ದಿನಗಳ ಬಳಿಕ ಸಾಕಾರಗೊಂಡಿದೆ. ಇದು ನಿಜಕ್ಕೂ ಒಂದು ಐತಿಹಾಸಿಕ ಸಾಧನೆ. 2023ರ ವಿಶ್ವಕಪ್‌ನಲ್ಲಿ ಕೊಹ್ಲಿ ಒಟ್ಟು 543 ರನ್‌ ಕಲೆ ಹಾಕಿ ಎಲ್ಲರನ್ನು ಬೆರಗು ಮಾಡಿದ್ದಾರೆ. ವಿಶ್ವಕಪ್​​ನಲ್ಲಿ 110ಕ್ಕೂ ಹೆಚ್ಚು ಆವರೇಜ್​​ ಹೊಂದುವುದು ತಮಾಷೆ ಅಲ್ಲ ಎಂದರು ರಿಕಿ ಪಾಂಟಿಂಗ್​​.

ಇದು ಸಣ್ಣ ವಿಷಯವೇ ಅಲ್ಲ ಎಂದ ಪಾಂಟಿಂಗ್​​..!

ಕೊಹ್ಲಿ ಶ್ರೇಷ್ಠ ಕ್ರಿಕೆಟಿಗ ಎಂಬುದರಲ್ಲಿ ಸಂದೇಹವಿಲ್ಲ. ಈ ವಿಷಯ ನಾನು ಈ ಹಿಂದೆಯೇ ಹೇಳಿದ್ದೇನೆ. ವಿರಾಟ್​​ ಸಚಿನ್ ದಾಖಲೆ ಸರಿಗಟ್ಟುವ ಅಗತ್ಯವೂ ಇಲ್ಲ, ಮುರಿಯೋದು ಬೇಕಿಲ್ಲ. ನನಗೆ ಒಮ್ಮೆಮ್ಮೋ ಕೊಹ್ಲಿ ಬ್ಯಾಟಿಂಗ್​ ದಾಖಲೆ ನೋಡಿದ್ರೆ ನಂಬಲು ಸಾಧ್ಯವೇ ಆಗಲ್ಲ. ಅತೀ ಕಡಿಮೆ ಇನ್ನಿಂಗ್ಸ್​ನಲ್ಲಿ ಕೊಹ್ಲಿ 49 ಅಂತರಾಷ್ಟ್ರೀಯ ಏಕದಿನ ಶತಕ ಬಾರಿಸುವುದು ಎಂದರೆ ಸಣ್ಣ ವಿಷಯವಲ್ಲ ಎಂದು ಹೇಳಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಚಿನ್​​ ದಾಖಲೆ ಸರಿಗಟ್ಟಿದ ಕೊಹ್ಲಿ.. ಈ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಪಾಂಟಿಂಗ್​​ ಏನಂದ್ರು..?

https://newsfirstlive.com/wp-content/uploads/2023/11/VIRAT-18.jpg

Load More