ತಂಡದಲ್ಲಿ ಯಾರು ಯಾರು ಟ್ಯಾಟೂ ಹಾಕಿಸಿಕೊಂಡಿದ್ದಾರೆ..?
ತವರಿನಲ್ಲಿ ಭಾರತ-ಬಾಂಗ್ಲಾ ನಡುವೆ ನಡೆಯಲಿದೆ ಟಿ20 ಸರಣಿ
ರಿಂಕು ಸಿಂಗ್ಗೆ ಟೆಸ್ಟ್, ಏಕದಿನದಲ್ಲಿ ಯಾಕೆ ಚಾನ್ಸ್ ಸಿಗುತ್ತಿಲ್ಲ?
ಯಂಗ್ಸ್ಟರ್ಸ್ಗೆ ಟ್ಯಾಟೂ ಎಂದರೆ ಎಲ್ಲಿಲ್ಲದ ಪ್ರೀತಿ. ದೇಹದ ತುಂಬಾ ಟ್ಯಾಟೂ ಹಾಕಿಸಿಕೊಳ್ಳುವುದು ಈಗೀಗ ಯುವಕರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ಕ್ರಿಕೆಟ್ ಕ್ಷೇತ್ರದಲ್ಲೂ ಗಾಡವಾಗಿ ಹಬ್ಬಿದ್ದು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಸೇರಿದಂತೆ ಭಾರತದ ಆಟಗಾರರು ಟ್ಯಾಟೂಗಳನ್ನು ದೇಹದಲ್ಲೆಲ್ಲ ಹಾಕಿಸಿಕೊಂಡಿದ್ದಾರೆ. ಸದ್ಯ ಇದೀಗ ಇವರ ಸಾಲಿಗೆ ಮತ್ತೊಬ್ಬ ಕ್ರಿಕೆಟ್ ಪ್ಲೇಯರ್ ರಿಂಕು ಸಿಂಗ್ ಕೂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: KL ರಾಹುಲ್ 8 ವರ್ಷದಿಂದ ಸೆಂಚುರಿ ಸಿಡಿಸಿಲ್ವಾ..? ಕಾನ್ಪುರದ ಟೆಸ್ಟ್ ಮೇಲೆ ಕನ್ನಡಿಗನ ಭವಿಷ್ಯ!
ಭಾರತದ ಹಾಗೂ ಬಾಂಗ್ಲಾ ನಡುವಿನ ಟಿ20 ಸರಣಿಗೂ ಮೊದಲೇ ರಿಂಕು ಸಿಂಗ್ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಎಡಗೈ ಬ್ಯಾಟ್ಸ್ಮ್ಯಾನ್ ಆಗಿರುವ ರಿಂಕು ಸಿಂಗ್ ತನ್ನ ಎಡಗೈ ಮೇಲೆ GOD’S PLAN (ದೇವರ ಯೋಜನೆ) ಎಂದು ಟ್ಯಾಟೂ ಇಳಿಸಿಕೊಂಡಿದ್ದಾರೆ. ಸದ್ಯ ಈ ಟ್ಯಾಟೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.
ರಿಂಕು ಸಿಂಗ್ ಐಪಿಎಲ್ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದು ಒಂದು ಓವರ್ನಲ್ಲಿ ಸತತ 5 ಸಿಕ್ಸರ್ ಬಾರಿಸಿ ತಂಡವನ್ನು ಗೆಲ್ಲಿಸಿ ರಾತ್ರೋರಾತ್ರಿ ಖ್ಯಾತಿ ಪಡೆದವರು. ಏಕದಿನ ಹಾಗೂ ಟೆಸ್ಟ್ನಲ್ಲಿ ರಿಂಕುಗೆ ಕೆಲವೇ ಕೆಲವು ಅವಕಾಶಗಳು ಮಾತ್ರ ಸಿಕ್ಕಿದ್ದು ಒಮ್ಮೆಯೂ ರಿಂಕು ಟೆಸ್ಟ್ಗೆ ಆಯ್ಕೆಯಾಗಿಲ್ಲ. ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಮತ್ತು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿಲ್ಲ. ಇನ್ನು ಅಕ್ಟೋಬರ್ 6ರಿಂದ ನಡೆಯುವ ಬಾಂಗ್ಲಾ ವಿರುದ್ಧದ ಟಿ20 ಸರಣಿಗೆ ರಿಂಕು ಸಿಂಗ್ ಆಯ್ಕೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮ್ಮನ ಜೊತೆ ಭಾರೀ ಮೊತ್ತದ ಅಪಾರ್ಟ್ಮೆಂಟ್ ಖರೀದಿಸಿದ ಸ್ಟಾರ್ ಕ್ರಿಕೆಟರ್.. ಎಷ್ಟು ಕೋಟಿ?
Rinku Singh’s new Tattoo 🔥
God’s Plan💪 pic.twitter.com/1CkmnmqZBe
— Brendon Mishra 🇮🇳🔥 (@KKRKaFan) September 24, 2024
ಭಾರತ ತಂಡದಲ್ಲಿ 23 ಟಿ20 ಪಂದ್ಯಗಳನ್ನು ಆಡಿರುವ ಯುವ ಆಟಗಾರ ಒಟ್ಟು 418 ರನ್ಗಳನ್ನು ಗಳಿಸಿದ್ದಾರೆ. ಸ್ಟ್ರೈಕ್ರೇಟ್ 174.16 ಇದೆ. ಅಲ್ಲದೇ 2 ವಿಕೆಟ್ಗಳನ್ನು ಪಡೆದಿದ್ದಾರೆ. ರಿಂಕು ಇದುವರೆಗೆ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು ಕೇವಲ 55 ರನ್ಗಳನ್ನು ಗಳಸಿ ಒಂದು ವಿಕೆಟ್ ಕಬಳಿಸಿದ್ದಾರೆ. ರಿಂಕು ಹಾಕಿಸಿಕೊಂಡಿರುವ GOD’S PLAN ಎಂಬುವುದು ಅವರ ಇತ್ತೀಚಿನ ಸಕ್ಸಸ್ ಅನ್ನು ತೋರಿಸುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ