newsfirstkannada.com

ಕೊಹ್ಲಿ, ರೋಹಿತ್​​​, ಧೋನಿ ಅಲ್ಲ.. ಇವರೇ IPL ಕಿಂಗ್​​ ಎಂದ ರಿಂಕು ಸಿಂಗ್​​; ಯಾರವರು?

Share :

18-07-2023

  ಕಳೆದ ಐಪಿಎಲ್​​ ಸೀಸನ್​ನಲ್ಲಿ ಮಿಂಚಿದ್ದ ರಿಂಕು ಸಿಂಗ್​​

  ಏಷ್ಯನ್​​ ಗೇಮ್ಸ್​​ಗೆ ಟೀಂ ಇಂಡಿಯಾಗೆ ಆಯ್ಕೆಯಾದ ರಿಂಕು

  15 ಸೀಸನ್​​ಗಳಲ್ಲಿ ಐಪಿಎಲ್​​ ಕಿಂಗ್​ ಯಾರೆಂದು? ಬಿಚ್ಚಿಟ್ರು

ಕಳೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಮಿಂಚಿದ ಭರವಸೆಯ ಬ್ಯಾಟ್ಸ್‌ಮನ್ ರಿಂಕು ಸಿಂಗ್. ರಿಂಕು ಸಿಂಗ್​ ಕೊನೆಗೂ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ರಿಂಕು ಸಿಂಗ್ ಸದ್ಯದಲ್ಲೇ ನಡೆಯಲಿರೋ ಏಷ್ಯನ್ ಗೇಮ್ಸ್‌ನಲ್ಲಿ ಟೀಂ ಇಂಡಿಯಾ ಬ್ಲೂ ಜೆರ್ಸಿಯಲ್ಲಿ ಮಿಂಚಲು ಮುಂದಾಗಿದ್ದಾರೆ. ಈ ಮಧ್ಯೆ ತನ್ನ ನೆಚ್ಚಿನ ಕ್ರಿಕೆಟರ್​​ ಯಾರು? ಅಸಲಿ ಐಪಿಎಲ್​​ ಕಿಂಗ್​​ ಯಾರು? ಎಂದು ಬಿಚ್ಚಿಟ್ಟಿದ್ದಾರೆ.

ಖಾಸಗಿ ಚಾನೆಲ್​​ವೊಂದಕ್ಕೆ ಸಂದರ್ಶನ ನೀಡಿದ ರಿಂಕು, ಸುರೇಶ್ ರೈನಾ ನನ್ನ ಆರಾಧ್ಯ ದೈವ. ನನ್ನ ಜೀವನದ ಆದರ್ಶ ಗುರು. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಧೋನಿ, ಕೊಹ್ಲಿ ಅಲ್ಲ. ಸುರೇಶ್​ ರೈನಾ ಐಪಿಎಲ್ ಕಿಂಗ್. ನನಗೆ ರೈನಾ ಯಾವಾಗಲೂ ಸಲಹೆ ಸೂಚನೆಗಳು ನೀಡುತ್ತಲೇ ಇರುತ್ತಾರೆ ಎಂದರು.

ಸುರೇಶ್ ರೈನಾ ಬ್ಯಾಟಿಂಗ್​ ನೋಡಲು ನಾನು ಯಾವಾಗಲೂ ಕಾಯುತ್ತಿದ್ದೆ. ನನ್ನ ಕರಿಯರ್​ ಸುಧಾರಿಸಲು ರೈನಾ ಅವರೇ ಕಾರಣ. ಈಗಲೂ ಸಿಎಸ್‌ಕೆ ಸ್ಟಾರ್‌ ಆಟಗಾರನೊಂದಿಗೆ ಸಂಪರ್ಕದಲ್ಲಿ ಇದ್ದೇನೆ. ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಐಪಿಎಲ್​ ಕಿಂಗ್​ ರೈನಾ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದರು.

ರಿಂಕು ಸಿಂಗ್​​ಗೆ ಕೇವಲ 25 ವರ್ಷ. ಕಳೆದ ಐಪಿಎಲ್​ ಸೀಸನ್​​ನಲ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೆಕೆಆರ್​​ ಪ್ಲೇ ಆಫ್​ಗೆ ಹೋಗದೆ ಇದ್ದರೂ ಕೇವಲ 14 ಪಂದ್ಯಗಳಲ್ಲಿ ರಿಂಕು 474 ರನ್​ ಸಿಡಿಸಿದರು. ಇವರ ಬ್ಯಾಟಿಂಗ್​ ಆವರೇಜ್​​ 50ಕ್ಕೂ ಮೇಲಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರೋಹಿತ್​​​, ಧೋನಿ ಅಲ್ಲ.. ಇವರೇ IPL ಕಿಂಗ್​​ ಎಂದ ರಿಂಕು ಸಿಂಗ್​​; ಯಾರವರು?

https://newsfirstlive.com/wp-content/uploads/2023/07/Kohli_MSD.jpg

Load More