ಚಕ್ ದೇ ಇಂಡಿಯಾ ಸಿನಿಮಾ ಖ್ಯಾತಿಯ ನಟ ರಿಯೊ..!
ಕೊನೆಯುಸಿರೆಳೆದ ಬಾಲಿವುಡ್ ನಟ ರಿಯೊ ಕಪಾಡಿಯಾ
ದಿಲ್ ಚಾಹ್ತಾ ಹೈ, ಹ್ಯಾಪಿ ನ್ಯೂ ಇಯರ್ನಲ್ಲೂ ನಟಿಸಿದ್ರು
ಚಕ್ ದೇ ಇಂಡಿಯಾ ಸಿನಿಮಾ ಖ್ಯಾತಿಯ ನಟ ರಿಯೊ ಕಪಾಡಿಯಾ ಕೊನೆಯುಸಿರೆಳೆದಿದ್ದಾರೆ. ನಟ ರಿಯೊ ದಿಲ್ ಚಾಹ್ತಾ ಹೈ ಮತ್ತು ಹ್ಯಾಪಿ ನ್ಯೂ ಇಯರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ನಿಧನರಾಗಿದ್ದಾರೆ. ಈ ಬಗ್ಗೆ ಖುದ್ದು ರಿಯೊ ಸ್ನೇಹಿತ ಫೈಸಲ್ ಮಲಿಕ್ ಖಚಿತಪಡಿಸಿದ್ದಾರೆ.
ರಿಯೊ ಮಾಡೆಲ್ ಆಗಿ ಜಾಹೀರಾತು ಲೋಕಕ್ಕೆ ಕಾಲಿಟ್ಟರು. ಇತ್ತೀಚೆಗೆ ರಿಲೀಸ್ ಆದ ಮೇಡ್ ಇನ್ ಹೆವೆನ್ ಸೀಸನ್ 2 ವೆಬ್ ಸೀರೀಸ್ನಲ್ಲಿ ನಟಿಸಿದ್ದರು. ಮರ್ದಾನಿ, ಶ್ರೀ, ಹಮ್ ಹೈ ರಾಹಿ ಕಾರ್ ಕೆ, ಆಖಾರಿ ಡಿಸಿಷನ್, ಖುದಾ ಹಾಫಿಜ್, ದಿ ಬಿಗ್ ಬುಲ್, ಏಜೆಂಟ್ ವಿನೋದ್ ಚಲನಚಿತ್ರಗಳಲ್ಲಿ ನಟಿಸಿದ್ದರು.
View this post on Instagram
ಇವರ ಸಾವಿಗೆ ಇನ್ನೂ ಕಾರಣ ತಿಳಿದು ಬಂದಿಲ್ಲ. ಸಾರ್ವಜನಿಕರ ದರ್ಶನದ ಬಳಿಕ ಇವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ರಿಯೊ ಕುಟುಂಬಸ್ಥರಲ್ಲಿ ದುಃಖ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ