newsfirstkannada.com

ಸೈಮಾ 2023 ಸಮಾರಂಭದಲ್ಲಿ ಕನ್ನಡದಲ್ಲೇ ಮಾತಾಡಿದ ಜ್ಯೂ. NTR; ನಟ ರಿಷಬ್‌ ಶೆಟ್ಟಿಗೆ ಹೇಳಿದ್ದೇನು..?

Share :

16-09-2023

    ದುಬೈನಲ್ಲಿ ನಡೆಯುತ್ತಿರೋ ಸೈಮಾ 2023 ಪ್ರಶಸ್ತಿ ಪ್ರದಾನ ಸಮಾರಂಭ!

    ಕಾಂತಾರ ಚಿತ್ರಕ್ಕೆ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ

    ಅತ್ಯುತ್ತಮ ಸಿನಿಮಾ ಪ್ರಶಸ್ತಿ ಬಾಚಿಕೊಂಡ ರಕ್ಷಿತ್ ಶೆಟ್ಟಿ '777 ಚಾರ್ಲಿ'!

ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೆದಿದೆ. ಅತ್ಯುತ್ತಮ ನಟ, ನಟಿ, ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಈ ಸಂಭ್ರಮದಲ್ಲಿ ಕನ್ನಡಿಗರಿಗೆ ತುಂಬಾ ವಿಶೇಷವಾಗಿ ಗಮನ ಸೆಳೆದಿದ್ದು ರಿಷಬ್ ಶೆಟ್ಟಿ ಹಾಗೂ ಜ್ಯೂನಿಯರ್ ಎನ್​ಟಿಆರ್​ ನಡುವೆ ನಡೆದ ಕನ್ನಡ ಸಂಭಾಷಣೆ.

ಜ್ಯೂನಿಯರ್ ಎನ್​ಟಿಆರ್​ ಅವರ ತಾಯಿ ಕರ್ನಾಟಕದವರು. ಅದರಲ್ಲೂ ಕುಂದಾಪುರದವರು. ಹಾಗಾಗಿ ಎನ್​ಟಿಆರ್​ಗೆ ಕನ್ನಡ ಹಾಗೂ ಕನ್ನಡಿಗರು ಅಂದ್ರೆ ಬಹಳಷ್ಟು ಅಭಿಮಾನ, ಪ್ರೀತಿ. ಈ ಹಿಂದೆ ಅವಕಾಶ ಸಿಕ್ಕಾಗೆಲ್ಲಾ ತಾರಕ್ ಕನ್ನಡದಲ್ಲಿ ಮಾತಾಡಿ ಕನ್ನಡಿಗರ ಅಭಿಮಾನ ಗಳಿಸಿದ್ದಾರೆ. ಈಗ ನಿನ್ನೆ ನಡೆದ ಸೈಮಾ ಸಮಾರಂಭದಲ್ಲಿ ಎನ್​ಟಿಆರ್​ ಮತ್ತೊಮ್ಮೆ ಕನ್ನಡಭಿಮಾನ ಮೆರೆದಿರೋದು ವಿಶೇಷ.

ಕಳೆದ ರಾತ್ರಿ ದುಬೈನಲ್ಲಿ 2023ನೇ ವರ್ಷದ ಸೈಮಾ ಪ್ರಶಸ್ತಿಗಳ ಸಮಾರಂಭ ನಡೀತು. ತೆಲುಗು ಮತ್ತು ಕನ್ನಡ ಇಂಡಸ್ಟ್ರಿಯ ಸಾಕಷ್ಟು ಕಲಾವಿದರು ಭಾಗಿವಹಿಸಿದ್ದರು. ಈ ವೇಳೆ ಜ್ಯೂನಿಯರ್ ಎನ್​ಟಿಆರ್ ಮತ್ತು ಕನ್ನಡ ನಟ ರಿಷಬ್ ಶೆಟ್ಟಿ ಪರಸ್ಪರ ಕನ್ನಡದಲ್ಲಿ ಮಾತಾಡಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಸ್ಯಾಂಡಲ್​ವುಡ್​ ಮಂದಿಯ ಮನ ಗೆದ್ದಿದೆ. ಕಾಂತಾರ ಸಿನಿಮಾದ ನಟನೆ ಹಾಗೂ ನಿರ್ದೇಶನಕ್ಕಾಗಿ ರಿಷಬ್ ಶೆಟ್ಟಿ ಪ್ರಶಸ್ತಿ ಪಡೆದುಕೊಂಡರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಜ್ಯೂನಿಯರ್ ಎನ್​ಟಿಆರ್​, ರಿಷಬ್ ಶೆಟ್ಟಿ ಅವರನ್ನು ಕನ್ನಡದಲ್ಲಿ ಮಾತಾಡಿಸಿದ್ದಾರೆ.

‘‘ರಿಷಬ್ ನೋಡಿ ಹೇಗಿದ್ದೀರಾ ಸರ್’’ ಅಂತ ಕನ್ನಡದಲ್ಲಿ ಕೇಳಿ ಅಭಿನಂದಿಸಿದ್ದಾರೆ. ಅದಕ್ಕೆ ರಿಷಬ್ ಸಹ ಕನ್ನಡದಲ್ಲೇ ‘‘ಚೆನ್ನಾಗಿದ್ದೀನಿ ಸರ್’’ ಎಂದಿದ್ದಾರೆ. ಅಷ್ಟರಲ್ಲೇ ಮಧ್ಯ ಪ್ರವೇಶಿಸಿದ ನಿರೂಪಕ ಅಕುಲ್ ಬಾಲಾಜಿ ಸರ್ ಕುಂದಾಪುರದಲ್ಲಿ ಹೀಗೇ ಮಾತಾಡ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಜ್ಯೂನಿಯರ್ ಎನ್​ಟಿಆರ್ ನಮ್ಮ ಅಮ್ಮನ ಜೊತೆಯೂ ಹೀಗೆ ಮಾತಾಡ್ತೀನಿ ಎಂದಿದ್ದಾರೆ. ಹೀಗೆ ಮಾತು ಮುಂದುವರಿಸಿದ ರಿಷಬ್ ಶೆಟ್ಟಿ ‘‘ಸರ್ ನಿಮ್ಮನ್ನು ನೇರವಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಲು ಸಾಧ್ಯವಾಗಲಿಲ್ಲ. ಕಿರಿಕ್ ಪಾರ್ಟಿ ತಂಡ ಬಂದಾಗ ನೀವೇ ಪ್ರಶಸ್ತಿ ಕೊಟ್ಟಿದ್ದೀರಿ. ನಿಮ್ಮ ತಾಯಿ, ನಮ್ಮೂರು ಒಂದೇ ಆಗಿರೋದ್ರಿಂದ ನಾವೆಲ್ಲಾ ಒಂದು ಕುಂದಾಪುರದವರು’’ ಎಂದು ಸಂತಸ ಹಂಚಿಕೊಂಡರು.

ಇದನ್ನು ಓದಿ: ಸ್ವರ್ಗವೇ ಧರೆಗಿಳಿಸಿದ ಮದುವೆ ವೈಭೋಗ; 200 ಕೋಟಿ ಖರ್ಚು ಮಾಡಿ ಬೆಚ್ಚಿ ಬೀಳಿಸಿದ ಭೂಪ; ಯಾರಿವನು

ಕಾಂತಾರ ಚಿತ್ರಕ್ಕೆ ರಿಷಬ್ ಶೆಟ್ಟಿ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್ಡ್ ಪಡೆದರೇ, ತ್ರಿಬಲ್ ಆರ್ ಚಿತ್ರಕ್ಕಾಗಿ ಜ್ಯೂನಿಯರ್ ಎನ್​ಟಿಆರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ಇನ್ನುಳಿದಂತೆ ಸಪ್ತಮಿ ಗೌಡ ಅತ್ಯುತ್ತಮ ನಟಿ ಕ್ರಿಟಿಕ್ಸ್​, ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನಟಿ, ರಾಕಿಂಗ್ ಸ್ಟಾರ್ ಯಶ್​ ಅತ್ಯುತ್ತಮ ನಟ ಹಾಗೂ 777 ಚಾರ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಬಾಚಿಕೊಂಡಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೈಮಾ 2023 ಸಮಾರಂಭದಲ್ಲಿ ಕನ್ನಡದಲ್ಲೇ ಮಾತಾಡಿದ ಜ್ಯೂ. NTR; ನಟ ರಿಷಬ್‌ ಶೆಟ್ಟಿಗೆ ಹೇಳಿದ್ದೇನು..?

https://newsfirstlive.com/wp-content/uploads/2023/09/SIIMA-Awards-3.jpg

Load More