/newsfirstlive-kannada/media/post_attachments/wp-content/uploads/2023/06/Kantara-2-1.jpg)
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಹಿಟ್​ ನೀಡಿತ್ತು. ಈ ಸಕ್ಸಸ್​ ಬಳಿ ಕಾಂತಾರ 2 ಸಿನಿಮಾ ಮಾಡಲು ರಿಷಬ್​ ಶೆಟ್ಟಿ ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದಕ್ಕಾಗಿ ಚಿತ್ರತಂಡ ಹುಟ್ಟೂರಿನಲ್ಲಿ ಬೀಡು ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೀಗ ಅದಕ್ಕೂ ಮುನ್ನ ಕಾಂತಾರ -2 ಸಿನಿಮಾದ ಹೊಸ ಅಪ್ಡೇಟ್​ ಸಿಕ್ಕಿದೆ. ಅದೇನು ಗೊತ್ತಾ?
ಕಾಂತಾರ -2 ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಏಳು ಭಾಷೆಯಲ್ಲಿ ಬಿಡುಗಡೆಯಾಗಲಿದೆಯಂತೆ. ಕನ್ನಡ ಸೇರಿ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್​​ನಲ್ಲೂ ರಿಲೀಸ್ ಮಾಡುವ ನಿರ್ಧಾರವಾಗಿದೆ ಎನ್ನಲಾಗಿದೆ. ಸದ್ಯ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಆರಂಭವಾಗಲಿದೆ.
ಇತ್ತೀಚೆಗೆ ಕಾಂತಾರ-2 ಸಿನಿಮಾಕ್ಕಾಗಿ ರಿಷಬ್​ ಅವರ ಹೊಸ ಅವತಾರ ವೈರಲ್​ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಪ್ರಗತಿ ಮತ್ತು ಮಕ್ಕಳೊಂದಿಗೆ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾಂತಾರ ಸಿನಿಮಾದ ಕುರಿತು ಹೊಸ ಅಪ್ಡೇಟ್​ ಹೊರಬಿದ್ದಿದೆ. 7 ಭಾಷೆಯಲ್ಲಿ ಸಿನಿಮಾ ಬಿಡುಗೆಯಾಹಲಿದೆ ಎಂದು ಹೇಳಲಾಗುತ್ತಿದೆ.
ಫ್ಯಾನ್ಸ್​ಗಂತೂ ಈ ವಿಚಾರ ಸಂತಸಕ್ಕೆ ಕಾರಭಣವಾಗಿದ್ದು, ಕಾಂತಾರ -2 ಯಾವಾಗ ಬರಲಿದೆ ಎಂದು ಕಾದು ಕುಳಿತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
​
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us