newsfirstkannada.com

ನ್ಯಾಯ ಬೇಕು ನ್ಯಾಯ; ರಮ್ಯಾ ವಿರುದ್ಧ ಕೇಸ್​ ಗೆದ್ದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಗ್ಗೆ ರಿಷಬ್​ ಟ್ವೀಟ್​!

Share :

20-07-2023

    ನಾಳೆ ರಾಜ್ಯಾದ್ಯಂತ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್

    ಸಿನಿಮಾ ವಿರುದ್ಧ ಕೋರ್ಟ್​ಗೆ ಹೋಗಿದ್ದ ಸ್ಯಾಂಡಲ್​​ವುಡ್​​ ಕ್ವೀನ್​​ ರಮ್ಯಾ!

    ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಂತಕ್ಕೆ ಶುಭ ಕೋರಿದ ಕಾಂತಾರ ನಟ

ಸ್ಯಾಂಡಲ್‌ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದೇ ಜುಲೈ 21ರಂದು ಭರ್ಜರಿಯಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಚಿತ್ರದ ಟ್ರೈಲರ್​ನಲ್ಲಿ ರಮ್ಯಾ ಕಮ್​ಬ್ಯಾಕ್​ ಮಾಡುತ್ತಿರುವುದು ನೋಡಿ ಫ್ಯಾನ್ಸ್​ ಸಖತ್​ ಖುಷಿ ಆಗಿದ್ದರು. ಕೊನೇ ಘಳಿಗೆಯಲ್ಲಿ ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿಕೊಂಡಿತ್ತು. ನನ್ನ ಅನುಮತಿ ಇಲ್ಲದೆ ಟ್ರೈಲರ್​ನಲ್ಲಿ ತನ್ನ ದೃಶ್ಯಗಳನ್ನು ಬಳಸಲಾಗಿದೆ ಎಂದು ರಮ್ಯಾ ಆರೋಪಿಸಿ ಕೋರ್ಟ್​ ಮೋರೆ ಹೋಗಿದ್ದರು. ಬಳಿಕ ನಟಿ ರಮ್ಯಾ ನೀಡಿದ್ದ ನೋಟೀಸ್‌ ಅನ್ನು ಕೋರ್ಟ್‌ ತಿರಸ್ಕರಿಸಿತ್ತು. ಈ ಮೂಲಕ ರಮ್ಯಾಗೆ ಭಾರೀ ಮುಖಭಂಗ ಆಗಿದ್ದು, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡಕ್ಕೆ ಜಯ ಸಿಕ್ಕಿದೆ.

ಇನ್ನು, ನಾಳೆ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್‌ ಆಗಲಿದೆ. ಇಷ್ಟು ದಿನ ಬರೀ ಪ್ರಮೋಷನ್​ನಲ್ಲೇ ಕಿಕ್ ಕೊಡುತ್ತಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಈಗ ಥಿಯೇಟರ್​ಗೆ ಬರೋಕೆ ಸಜ್ಜಾಗಿ ನಿಂತಿದೆ. ಮೊದಲ ದಿನದಿಂದಲೂ ಇಲ್ಲಿಯವರೆಗೂ ಹಲವು ಸ್ಟಾರ್​ ನಟರು ಹಾಸ್ಟೆಲ್ ಹುಡುಗರಿಗೆ ಸಾಥ್ ಕೊಟ್ಟಿದ್ದಾರೆ. ಅಪ್ಪು ಅವರಿಂದ ಶುರುವಾದ ಈ ಜರ್ನಿ ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಮ್ಯಾ, ದಿಗಂತ್, ಧ್ರುವ ಸರ್ಜಾ ಅವರವರೆಗೂ ಸಾಗಿ ಬಂದಿದೆ.

ಇದೀಗ ರಿಷಬ್ ಶೆಟ್ಟಿ ಟ್ವೀಟ್​​ ಮಾಡುವ ಮೂಲಕ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ಶುಭಕೋರಿದ್ದಾರೆ. ಈ ಕುರಿತು ಟ್ವೀಟ್​ ಮಾಡಿದ ಅವರು, ನ್ಯಾಯ ಅಂದ್ರೆ ನ್ಯಾಯ.. ಜೈ ಆಂಜನೇಯ! ನಾಳೆ ಹಾಸ್ಟೆಲ್ ಹುಡುಗರು ರಿಲೀಸ್ ಆಗ್ತಿದೆ.  ಥಿಯೇಟರ್​ನಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನ್ಯಾಯ ಬೇಕು ನ್ಯಾಯ; ರಮ್ಯಾ ವಿರುದ್ಧ ಕೇಸ್​ ಗೆದ್ದ ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಸಿನಿಮಾ ಬಗ್ಗೆ ರಿಷಬ್​ ಟ್ವೀಟ್​!

https://newsfirstlive.com/wp-content/uploads/2023/07/ramya-3.jpg

Load More