newsfirstkannada.com

Watch: ಮತ್ತೆ ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸಿದ ರಿಷಬ್; ಪಂತ್ ಸ್ಪೀಡ್ ‘ರಿಕವರಿ ರಹಸ್ಯ’ ರಿವೀಲ್..!

Share :

29-08-2023

    ಕಳೆದ ವರ್ಷ ಕಾರು ಅಪಘಾತಕ್ಕೊಳಗಾಗಿದ್ದ ಪಂತ್​

    ರಿಷಬ್ ಪಂತ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್​​ನ್ಯೂಸ್

    2024ರ ಇಂಗ್ಲೆಂಡ್​​​​​ ಪ್ರವಾಸದ ವೇಳೆ ಪಂತ್ ಕಮ್​ಬ್ಯಾಕ್​!

ಡೆಡ್ಲಿ ಕಾರು ಆ್ಯಕ್ಸಿಡೆಂಟ್​ನಿಂದ ರಿಷಬ್​ ಪಂತ್ ಬದುಕುಳಿದಿದ್ದೇ ಪವಾಡ. ಗಂಭೀರ ಗಾಯಗೊಂಡಿದ್ದ ಪಂತ್​​ ರಿಕವರಿಗೆ ಸುದೀರ್ಘ ಸಮಯ ಬೇಕು ಅಂತಾ ಎಲ್ಲರೂ ಅಂದುಕೊಂಡಿದ್ರು. ಪಂತ್ ಅವೆಲ್ಲವನ್ನು ಸುಳ್ಳಾಗಿಸಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ರಿಕವರಿ ಆಗ್ತಿದ್ದಾರೆ. ಈ ಫಾಸ್ಟ್​ ರಿಕವರಿಯ ಸಿಕ್ರೇಟ್​ ಇದೀಗ ರಿವೀಲ್ ಆಗಿದೆ.

ಫೆಬ್ರವರಿ 2017 to ಡಿಸೆಂಬರ್​​ 2022.. ಈ ಐದು ವರ್ಷಗಳಲ್ಲಿ ಮ್ಯಾಚ್ ವಿನ್ನರ್ ರಿಷಬ್ ಪಂತ್​ ಮುಟ್ಟಿದ್ದೆಲ್ಲ ಚಿನ್ನ. ಅದ್ಯಾವ ಮಟ್ಟಿಗೆ ಅಂತೀರಾ ? ಟೀಮ್ ಇಂಡಿಯಾ ಅಂದ್ರೆ ಪಂತ್​ ಪಂತ್ ಅಂದ್ರೆ ಟೀಮ್ ಇಂಡಿಯಾ ಅನ್ನುವಷ್ಟರ ಮಟ್ಟಿಗೆ ಆವರಿಸಿ ಬಿಟ್ಟಿದ್ರು. ವಿಕೆಟ್ ಕೀಪಿಂಗ್​​, ಬ್ಯಾಟಿಂಗ್​​, ಮ್ಯಾಚ್ ಫಿನಿಶಿಂಗ್​​​. ಹೀಗೆ ಎಲ್ಲಾ ರೋಲ್​​ಗಳನ್ನು ಸಮರ್ಥವಾಗಿ ನಿಭಾಯಿಸಿ ಸ್ಟಾರ್​ ಪಟ್ಟ ಅಲಂಕರಿಸಿದ್ರು.
ಇಂತಹ ಡೇರಿಂಗ್ ಬ್ಯಾಟರ್​​ ಪಂತ್​​ ಮೇಲೆ ಅದ್ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ಪಂತ್ ಕರಿಯರ್​​ನಲ್ಲಿ ಯಾರೂ ನಿರೀಕ್ಷಿಸಲಾರದ, ಯಾರೂ ಊಹಿಸಲಾರದ, ಯಾರ ಯೋಚನೆಗೂ ನಿಲುಕದ ಒಂದು ಆಘಾತಕಾರಿ ಘಟನೆ ನಡೆದು ಹೋಯ್ತು. ಡಿಸೆಂಬರ್​ 30, 2022 ರಂದು ಭಾರತೀಯ ಕ್ರಿಕೆಟ್​​ ಪ್ರೇಮಿಗಳಿಗೆ ಬರಸಿಡಿಲಿನ ಸುದ್ದಿ ಅಪ್ಪಳಿಸಿತ್ತು. ಪಂತ್ ಡೆಡ್ಲಿ ಆಕ್ಸಿಡೆಂಟ್​​ಗೆ ತುತ್ತಾಗಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದ್ರು.

ವೇಗವಾಗಿ ಗುಣಮುಖರಾಗುತ್ತಿದ್ದಾರೆ ರಿಷಬ್ ಪಂತ್​​..!

ಪಂತ್​ ಕಾರು ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಪಂತ್​ ಏನೋ ಬದುಕುಳಿದ್ರು. ಅವರ ರಿಕವರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೈ ತುಂಬಾ ಗಾಯ, ಸರ್ಜರಿ ಎಲ್ಲವೂ ಯುವ ಆಟಗಾರರನ್ನು ಹಿಂಡಿ ಹಿಪ್ಪೆ ಮಾಡಿಸಿತ್ತು. ಪಂತ್ ಸ್ಥಿತಿಯನ್ನು ನೋಡಿದ ಡಾಕ್ಟರ್ಸ್​ ಗುಣಮುಖರಾಗಲು ಸುದೀರ್ಘ ಸಮಯ ಹಿಡಿಯಲಿದೆ ಎಂದರು. ಫ್ಯಾನ್ಸ್ ಈ ಸುದ್ದಿ ಕೇಳಿ ಕುಗ್ಗಿ ಹೋದ್ರು. ಯಾಕಂದ್ರೆ ಪಂತ್​​ ಅಗತ್ಯತೆ ಟೀಮ್ ಇಂಡಿಯಾಗೇ ತುಂಬಾನೆ ಇದೆ. ತಂಡದಿಂದ ದೂರ ಇದ್ದಷ್ಟು ತಂಡಕ್ಕೆ ನಷ್ಟ ಹೆಚ್ಚು.

ಫ್ಯಾನ್ಸ್ ನೆಚ್ಚಿನ ಕ್ರಿಕೆಟರ್ ಬೇಗ ರಿಕವರಿ ಆಗಲಿ ಎಂದು ಪ್ರಾರ್ಥಿಸಿದ್ರು. ಕೊನೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಪಂತ್​​ ನಿರೀಕ್ಷೆಗೂ ಮೀರಿ ವೇಗವಾಗಿ ಚೇತರಿಸಿಕೊಳ್ತಿದ್ದಾರೆ. ರಿಹ್ಯಾಬ್​ಗೆ ಒಳಗಾಗಿರೋ ಪಂತ್​, ಫಿಟ್​​ನೆಸ್​ ಕಡೆಗೆ ಗಮನ ವಹಿಸ್ತಿದ್ದಾರೆ. ಇದಕ್ಕೆ ಲೇಟೆಸ್ಟ್​ ವಿಡಿಯೋವೇ ಬೆಸ್ಟ್​ ಎಕ್ಸಾಂಪಲ್​​. ಇಷ್ಟಕ್ಕೆ ಖುಷಿಪಟ್ರೆ ಹೇಗೆ..? ಆಲೂರಿನಲ್ಲಿ ನಡೀತಿರೋ ಟೀಮ್​ ಇಂಡಿಯಾ ಕ್ಯಾಂಪ್​ನಲ್ಲೂ ಕಾಣಿಸಿಕೊಂಡಿರೋ ಪಂತ್, ಬ್ಯಾಟಿಂಗ್​ ಮಾಡೋವಷ್ಟು ಫಿಟ್​ ಆಗಿದ್ದಾರೆ. ವಾರದ ಹಿಂದೆ ಪ್ಯಾಡ್ ಕಟ್ಟಿ ಅಂಗಳಕ್ಕಿದು ಸಿಕ್ಸರ್​ ಸಿಡಿಸಿದ್ದಾರೆ.

ಪಂತ್​ ಸ್ಪೀಡ್​​​ ರಿಕವರಿ ಹಿಂದಿದೆ 2 ಸೀಕ್ರೆಟ್.​​.!

ಆಕ್ಸಿಡೆಂಟ್​ ಬಳಿಕ ಪಂತ್​ ಪ್ಯಾಡ್ ಕಟ್ಟಿ ಮತ್ತೆ ಬ್ಯಾಟ್ ಹಿಡಿದಿದ್ದನ್ನ ನೋಡಿದ ಫ್ಯಾನ್ಸ್​ಗೆ ಖುಷಿ ಜೊತೆ ಅಚ್ಚರಿಯೂ ಆಗುತ್ತೆ. ಯಾಕಂದ್ರೆ ಪಂತ್​ ರಿಕವರಿಗೆ ಎಕ್ಸ್​​​ಪರ್ಟ್​​ ಡಾಕ್ಟರ್ಸ್​ ಸುದೀರ್ಘ ಸಮಯ ಬೇಕು ಅಂದಿದ್ರು. ಆಶ್ಚರ್ಯಕರ ರೀತಿಯಲ್ಲಿ ರಿಷಬ್ ವೇಗವಾಗಿ ಗುಣಮುಖರಾಗುತ್ತಿದ್ದಾರೆ. ಇದರ ಹಿಂದಿನ ಸಿಕ್ರೇಟ್ ಏನು ಅನ್ನೋದನ್ನ ಪೌಷ್ಟಿಕತಜ್ಞ ಶ್ವೇತಾ ಶಾ ರಿವೀಲ್ ಮಾಡಿದ್ದಾರೆ.

ಪಂತ್​ ಆಹಾರ ಕ್ರಮದಲ್ಲಿ ಬದಲಾವಣೆ

ಮಾಂಸಹಾರಿ ರಿಷಬ್​ ಪಂತ್​ ಚೇತರಿಕೆಗಾಗಿ ನೆಚ್ಚಿನ ಆಹಾರ ಚಿಕನ್​​​ ತ್ಯಜಿಸಿದ್ರು. ಅವರಿಗೆ DE-BLOAT ಮತ್ತು ಮನೆ ಆಹಾರ ಸೇವಿಸುವಂತೆ ಸಲಹೆ ನೀಡಿದೆ. ಜೊತೆಗೆ ಕೆಂಪು ಮೆಣಸಿನ ಪುಡಿ, ಕಚ್ಚಾ ಆಹಾರಗಳು ಮತ್ತು ಮಸಾಲದಿಂದ ತಯಾರಿಸಿದ ಅಹಾರ ಪದಾರ್ಥಗಳ ತಿನ್ನೋದನ್ನೂ ಬಿಟ್ಟರು. ಅವರಿಗೆ ಬೆಳಗಿನ ತಿಂಡಿಗೆ ಮೊಟ್ಟೆ ಮತ್ತು ಅವಕಾಡೊಗಳನ್ನು ನೀಡಲಾಯಿತು. ಪಂತ್​ ರೊಟ್ಟಿಗಳ ಜೊತೆ ಪರೋಠ ತುಂಬಾ ಇಷ್ಟ ಪಡುತ್ತಾರೆ. 15 ದಿನಗಳವರೆಗೆ, ಗೋಧಿ, ಡೈರಿ ಮತ್ತು ಪನೀರ್ ನೀಡುವುದನ್ನು ತಡೆದಿದ್ದೇವೆ. DE-BLOAT ಮತ್ತು ಮನೆ ಅಹಾರ ಸೇವನೆ ಶುರು ಮಾಡಿದ ಬಳಿಕ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡಿತು. ಜೊತೆಗೆ ವೇಗವಾಗಿ ಗುಣಮುಖುರಾಗುತ್ತಿದ್ದಾರೆ-ಶ್ವೇತಾ ಶಾ, ಆಹಾರ ಪೌಷ್ಟಿಕತಜ್ಞೆ

2024ರ ಇಂಗ್ಲೆಂಡ್​​​​​ ಪ್ರವಾಸದ ವೇಳೆ ಪಂತ್ ಕಮ್​ಬ್ಯಾಕ್​?

ರಿಷಬ್ ಪಂತ್​​ ಟೀಮ್ ಇಂಡಿಯಾದಿಂದ ದೂರವಾಗಿ 8 ತಿಂಗಳು ಕಳೆದಿದೆ. ಕಾರು ಆಕ್ಸಿಡೆಂಟ್​​ನಲ್ಲಿ ರಿಕವರಿ ಆಗುತ್ತಿರುವ ಪಂತ್, ಮುಂದಿನ ವರ್ಷಾರಂಭದಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಲಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ 2024 ರಲ್ಲಿ ಇಂಗ್ಲೆಂಡ್, ಟೀಮ್​ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಪಂತ್ ಫುಲ್​ ಫಿಟ್ ಆಗಲಿದ್ದು ಮತ್ತೆ ಬ್ಯಾಟ್ ಹಿಡಿದು ಅಭಿಮಾನಿಗಳನ್ನ ರಂಜಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಡೇರಿಂಗ್ ಬ್ಯಾಟರ್​​​​​ ಕಮ್​ಬ್ಯಾಕ್ ಮಾಡಿದ್ದೆ ಆದಲ್ಲಿ ಅದಕ್ಕಿಂತ ದೊಡ್ಡ ಗುಡ್​ನ್ಯೂಸ್​ ಮತ್ತೊಂದಿಲ್ಲ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Watch: ಮತ್ತೆ ಬ್ಯಾಟ್ ಹಿಡಿದು ಸಿಕ್ಸರ್ ಬಾರಿಸಿದ ರಿಷಬ್; ಪಂತ್ ಸ್ಪೀಡ್ ‘ರಿಕವರಿ ರಹಸ್ಯ’ ರಿವೀಲ್..!

https://newsfirstlive.com/wp-content/uploads/2023/08/PANT.jpg

Load More