ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವಿನ ಟಿ20 ಸರಣಿ!
ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾ ವಿರುದ್ಧ ಟಿ20 ಶುರು
ಭಾರತ ತಂಡದ ಸ್ಟಾರ್ ಯುವ ಬ್ಯಾಟರ್ಗೆ ತಂಡದಲ್ಲಿ ಅವಕಾಶ
ಭಾರತ ಕ್ರಿಕೆಟ್ ತಂಡ ಮತ್ತು ಬಾಂಗ್ಲಾದೇಶದ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 19ನೇ ತಾರೀಕಿನಿಂದ ಚೆನ್ನೈನ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಇದರ ಮಧ್ಯೆ ಟೀಮ್ ಇಂಡಿಯಾ ಬಾಂಗ್ಲಾ ವಿರುದ್ಧ ಟಿ20 ಸರಣಿ ಆಡಲಿದ್ದು, ಬಿಗ್ ಅಪ್ಡೇಟ್ ಒಂದಿದೆ.
ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ರಿಷಬ್ ಪಂತ್ ಟೀಮ್ ಇಂಡಿಯಾ ಆಧಾರ ಸ್ತಂಭ. ಈ ವರ್ಷ ಭಾರತ 10ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಹಾಗಾಗಿ ಇವರಿಗೆ ಮುಂಬರುವ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗುತ್ತಿದೆ. ಕೆಲಸದ ಹೊರೆ ಕಡಿಮೆ ಮಾಡಲು ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.
ಬಾಂಗ್ಲಾ ವಿರುದ್ಧ ಟಿ20 ಸರಣಿಯಿಂದ ಪಂತ್ ಔಟ್
ಅಕ್ಟೋಬರ್ 7ನೇ ತಾರೀಕಿನಿಂದ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ಶುರುವಾಗಲಿದೆ. ರೆಸ್ಟ್ ನೀಡುವ ಸಾಧ್ಯತೆ ಇರುವ ಕಾರಣ ಪಂತ್ ಭಾರತ ಟಿ20 ಸೇರುವುದು ಡೌಟ್. ಹೀಗಾಗಿ ಇವರ ಸ್ಥಾನದಲ್ಲಿ ದುಲೀಪ್ ಟ್ರೋಫಿಯಲ್ಲಿ ಮಿಂಚುತ್ತಿರೋ ಇಶಾನ್ ಕಿಶನ್ಗೆ ಸ್ಥಾನ ನೀಡಬಹುದು. ದುಲೀಪ್ ಟ್ರೋಫಿಯಲ್ಲಿ ಸತತ ಸ್ಥಿರ ಪ್ರದರ್ಶನವನ್ನು ನೀಡಿರೋ ಕಾರಣ ಆಯ್ಕೆದಾರರು ಇಶಾನ್ಗೆ ಮಣೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.
ಬುಚ್ಚು ಬಾಬು ಮತ್ತು ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಶತಕದ ಮೇಲೆ ಶತಕ ಸಿಡಿಸಿದ್ರು. ಈ ಮೂಲಕ ಬಿಸಿಸಿಐ ಗಮನ ಸೆಳೆದಿದ್ದಾರೆ. ಹೀಗಾಗಿ ಇಶಾನ್ ಬಾಂಗ್ಲಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡದ ಭಾಗವಾಗಲಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಈ ದಿಗ್ಗಜರ ದಾಖಲೆ ಮುರಿಯಲಿದ್ದಾರೆ ಆರ್. ಅಶ್ವಿನ್; ಏನದು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್