ಸ್ಟಾರ್ ಪ್ಲೇಯರ್ಸ್ ತಂಡಕ್ಕೆ ಆಗಮನದಿಂದ ಯಾಱರ ಸ್ಥಾನಕ್ಕೆ ಕುತ್ತು?
ವಿಶ್ವಕಪ್ಗೆ ಪಂತ್ ರೆಡಿ, ಇಶನ್ ಕಿಶನ್- ಕೆಎಸ್ ಭರತ್ ಕಥೆ ಕ್ಲೋಸ್!
ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್
ಸ್ಟಾರ್ ಪ್ಲೇಯರ್ಸ್ ಇಂಜುರಿ ಟೀಮ್ ಇಂಡಿಯಾಗೆ ದೊಡ್ಡ ಸೆಟ್ಬ್ಯಾಕ್ ಆಗಿತ್ತು. ಇವರ ಅಲಭ್ಯತೆಯಿಂದ ಪ್ರಮುಖ ಟ್ರೋಫಿಗಳನ್ನ ಕೈ ಚೆಲ್ಲಿದೆ. ಆದರೆ ಇನ್ನು ಮೇಲೆ ಹಾಗಾಗಲ್ಲ. ಯಾಕಂದ್ರೆ ಮಿಸ್ಸಿಂಗ್ ಪ್ಲೇಯರ್ಸ್ ಕಮ್ಬ್ಯಾಕ್ಗೆ ಸಜ್ಜಾಗಿದ್ದಾರೆ. ಇನ್ನೊಂದೆಡೆ ಇವರ ಮರುಳುವಿಕೆಯಿಂದ ಹಲವರ ಎದೆಯಲ್ಲಿ ನಡುಕ ಶುರುವಾಗಿದೆ.
ಒನ್ ಡೇ ವರ್ಲ್ಡ್ ಕಪ್ ಈ ಮಹಾಸಂಗ್ರಾಮಕ್ಕೆ ಹೆಚ್ಚೇನು ತಿಂಗಳು ಉಳಿದಿಲ್ಲ. ವರ್ಷಾಂತ್ಯದಲ್ಲಿ ಫಿಫ್ಟಿ ಓವರ್ ವಿಶ್ವಕಪ್ ನಡೆಯಲಿದೆ. ಈ ಕದನಕ್ಕೆ ಭಾರತವೇ ಆತಿಥ್ಯ ವಹಿಸಿದೆ. ಹೀಗಾಗಿ ಮೆನ್ ಇನ್ ಪಡೆಗೆ ಇದು ಪ್ರತಿಷ್ಠೆಯ ಪಣ. ತವರಿನಲ್ಲೇ ವಿಶ್ವಕಪ್ ಗೆದ್ದು ದಶಕದ ಐಸಿಸಿ ಟ್ರೋಫಿ ಬರಕ್ಕೆ ಪುಲ್ಸ್ಟಾಪ್ ಹಾಕುವ ಲೆಕ್ಕಚಾರದಲ್ಲಿದೆ. ಇದೇ ಹೊತ್ತಲ್ಲಿ ಒಂದು ಗುಡ್ನ್ಯೂಸ್ ಕೇಳಿ ಬಂದಿದೆ.
ವಿಶ್ವಕಪ್ ವೇಳೆಗೆ ತಂಡ ಸೇರಿಕೊಳ್ಳಲಿದ್ದಾರೆ ಇಂಜುರಿ ಪ್ಲೇಯರ್ಸ್..!
ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಹಾಗೂ ರಿಷಬ್ ಪಂತ್ ಈ ನಾಲ್ವರು ಸ್ಟಾರ್ ಆಟಗಾರರನ್ನ ಟೀಮ್ ಇಂಡಿಯಾ ತುಂಬಾನೇ ಮಿಸ್ ಮಾಡಿಕೊಳ್ತಿದೆ. ಇವರ ಇಂಜುರಿ ಭಾರತಕ್ಕೆ ದೊಡ್ಡ ಸೆಟ್ಬ್ಯಾಕ್ ಆಗಿದೆ. ಈಗ ಈ ಚತುರ್ಥ ಮ್ಯಾಚ್ ವಿನ್ನರ್ಗಳ ಕಮ್ಬ್ಯಾಕ್ಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಆದರೆ ಇವರ ಎಂಟ್ರಿಯಿಂದ ತಂಡದಲ್ಲಿನ ಅನೇಕರಿಗೆ ನಡುಕ ಶುರುವಾಗಿದೆ.
ವಿಶ್ವಕಪ್ಗೆ ಪಂತ್ ರೆಡಿ, ಇಶನ್ ಕಿಶನ್-ಭರತ್ ಕಥೆ ಕ್ಲೋಸ್
ರಿಷಬ್ ಪಂತ್ ಈ ಸಿಡಿಗುಂಡಿಲ್ಲದ ಭಾರತವನ್ನ ಊಹಿಸಿಕೊಳ್ಳಲು ಸಾಧ್ಯವಾಗ್ತಿಲ್ಲ. ಅಷ್ಟರ ಮಟ್ಟಿಗೆ ಟೆರರ್ ಬ್ಯಾಟ್ಸ್ಮನ್ ಗೈರು ಕಾಡ್ತಿದೆ. ಕಳೆದ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೊಳಗಾಗಿದ್ದ ಪಂತ್, ಮತ್ತೆ ಫ್ಯಾನ್ಸ್ ರಂಜಿಸಲು ಸಜ್ಜಾಗಿದ್ದಾರೆ. ಎನ್ಸಿಎ ಪುನಶ್ಚೇತನ ಶಿಬಿರದಲ್ಲಿರೋ ಲೆಫ್ಟಿ ದಾಂಡಿಗ ವಿಶ್ವಕಪ್ ವೇಳೆ ತಂಡ ಸೇರಿಕೊಳ್ಳುವ ನಿರೀಕ್ಷೆ ಇದೆ.
ಪಂತ್ ಆಗಮನದಿಂದ ಭಾರತಕ್ಕೆ ನೂರಾನೆಬಲ ಬರೋದೇನೋ ನಿಜ. ಆದರೆ ಇಶನ್ ಕಿಶನ್ ಹಾಗೂ ಕೆಎಸ್ ಭರತ್ ಪಾಲಿಗೆ ಇದು ಕಷ್ಟಕರವಾಗಿರಲಿದೆ. ಯಾಕಂದ್ರೆ ಪಂತ್ ಕಮ್ಬ್ಯಾಕ್ ಮಾಡಿದ್ರೆ ಇಬ್ಬರಿಗೆ ಗೇಟ್ಪಾಸ್ ಗ್ಯಾರಂಟಿ. ಇಶನ್ ಕಿಶನ್ ಶಾರ್ಟ್ ಫಾಮ್ಯಾಟ್ನಲ್ಲಿ ಸ್ಥಾನ ಕಳೆದುಕೊಂಡ್ರೆ ಭರತ್ರ ರೆಡ್ಬಾಲ್ ಕ್ರಿಕೆಟ್ ಕ್ಲೋಸ್ ಆಗಲಿದೆ.
ಬುಮ್ರಾ ಆಗಮನದಿಂದ ಯುವವೇಗಿಗಳ ಸ್ಥಾನಕ್ಕೆ ಕುತ್ತು..!
ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಬಿದ್ದು 9 ತಿಂಗಳು ಕಳೆದಿದೆ. 2022ರ ಟಿ20 ವಿಶ್ವಕಪ್, ಏಷ್ಯಾಕಪ್ ಹಾಗೂ WTC ಯನ್ನ ಮಿಸ್ ಮಾಡಿಕೊಂಡಿದ್ರು. ಸದ್ಯ ಕೀ ಬೌಲರ್ ಇಂಜುರಿಯಿಂದ ರಿಕವರಿ ಆಗ್ತಿದ್ದು, ಏಷ್ಯಾಕಪ್ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಡೆತ್ ಸ್ಪೆಶಲಿಸ್ಟ್ ಮರಳಿದ್ರೆ ಯುವ ವೇಗಿಗಳ ಸ್ಥಾನಕ್ಕೆ ಕುತ್ತು ಬರಲಿದೆ. ಉಮ್ರಾನ್ ಮಲ್ಲಿಕ್, ಉಮೇಶ್ ಯಾದವ್ ಹಾಗೂ ಜಯ್ದೇವ್ ಉನಾಡ್ಕಟ್ ಅವಕಾಶ ವಂಚಿತರಾಗಲಿದ್ದಾರೆ.
ಏಷ್ಯಾಕಪ್ನಲ್ಲಿ ಆರ್ಭಟಿಸಲು ಕನ್ನಡಿಗ ರಾಹುಲ್ ಸಿದ್ಧ..!
2023ರ ಐಪಿಎಲ್ ವೇಳೆ ಇಂಜುರಿಗೆ ತುತ್ತಾಗಿದ್ದ ಕೆಎಲ್ ರಾಹುಲ್ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಲಂಡನ್ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಎನ್ಸಿಎಯ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಡೇ ಬೈ ಡೇ ಚೇತರಿಸಿಕೊಳ್ತಿದ್ದು, ಏಷ್ಯಾಕಪ್ನಲ್ಲಿ ಆಡುವುದು ಬಹುತೇಕ ಖಚಿತ. ರಾಹುಲ್ ಪ್ಯಾಡ್ ಕಟ್ಟಿ ಕಣಕ್ಕಿಳಿದ್ರೆ ಟೆಸ್ಟ್ ತಂಡದಿಂದ ಶುಭ್ಮನ್ ಗಿಲ್, ಕಲರ್ ಜೆರ್ಸಿಯಲ್ಲಿ ಸೂರ್ಯಕುಮಾರ್ ಯಾದವ್ ಬೆಂಚ್ ಕಾಯಬೇಕಾಗುತ್ತೆ..
ಶ್ರೇಯಸ್ ಕಮ್ಬ್ಯಾಕ್.. ರಹಾನೆಗೆ ಬೆಂಚೇ ಗತಿ..
ಇನ್ನು ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಕೂಡ ಗಾಯದಿಂದ ತಂಡಕ್ಕೆ ಮರಳಲು ಎದುರು ನೋಡ್ತಿದ್ದಾರೆ. ಅಂದುಕೊಂಡಂತೆ ನಡೆದ್ರೆ ಮುಂಬೈಕರ್ ವಿಶ್ವಕಪ್ಗೂ ಮುನ್ನ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಯಂಗ್ಪ್ಲೇಯರ್ ಎಂಟ್ರಿಯಿಂದ ಅಜಿಂಕ್ಯಾ ರಹಾನೆಗೆ ಬೆಂಚ್ ಗತಿಯಾಗಲಿದೆ. ಇನ್ನು ಶಾರ್ಟ್ ಫಾಮ್ಯಾಟ್ನಲ್ಲಿ ಸೂರ್ಯ-ಶ್ರೇಯಸ್ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ.
ಒಂದನ್ನ ಪಡೆದುಕೊಂಡ್ರೆ, ಒಂದನ್ನ ಕಳೆದುಕೊಳ್ಳಬೇಕಾದ ಸ್ಥಿತಿ ಟೀಮ್ ಇಂಡಿಯಾಗೆ ಬರಲಿದೆ. ಆದರೆ ಯಾರೇ ಹೋಗಿ ಬರಲಿ. ಮೆನ್ ಇನ್ ಬ್ಲೂ ಪಡೆ ಮಾತ್ರ ಗೆಲುವಿನ ಝೆಂಡಾ ಹಾರಿಸಲಿ ಎಂಬುದು ನಮ್ಮ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ